ಭಾರತದಲ್ಲಿ ಹೊಸ ಬೈಕ್ ಬಿಡುಗಡೆ: ಇದರ ಬೆಲೆಗೆ ಹೊಸ ಕಾರು ಬರಲಿದೆ... ಯಾಕಿಷ್ಟು ದುಬಾರಿ?
ವಿಶ್ವದ ಪವರ್‌ಫುಲ್ ಮೋಟಾರ್‌ಸೈಕಲ್ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಕವಾಸಕಿ, ಭಾರತದಲ್ಲಿಯೂ ತನ್ನ ಪ್ರಮುಖ ಮಾಡಲ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಕವಾಸಕಿ ನಿಂಜಾ 500 ಕೂಡ ಒಂದು, ಇದು ಮೋಟಾರ್‌ಸೈಕಲ್ ಉತ್ಸಾಹಿಗಳ ಫೇವರೆಟ್ ಬೈಕ್ ಆಗಿದೆ. ಇದರ ಪವರ್‌ಫುಲ್ ಎಂಜಿನ್ ಹಾಗೂ ಇದರ ರೈಡಿಂಗ್ ಡೈನಾಮಿಕ್ಸ್ ಸೇರಿದಂತೆ ಸ್ಪೋರ್ಟಿ ಡಿಸೈನ್ ಬೈಕ್‌ನ್ನು ದುಬಾರಿಯಾಗಿಸಿವೆ. ಇದೀಗ ಭಾರತದ ಇತ್ತೀಚಿನ ಮತ್ತು ಹೆಚ್ಚು ಕಠಿಣವಾದ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಗಳನ್ನು ಪೂರೈಸಲು ಕವಾಸಕಿ ನಿಂಜಾ 500 ಅನ್ನು ನವೀಕರಿಸಿ ಬಿಡುಗಡೆ ಮಾಡಿದೆ.
ಮುಖ್ಯವಾಗಿ ಈ ಎಮಿಷನ್ ಮಾನದಂಡಗಳನ್ನು ಪೂರೈಸಲು ಎಂಜಿನ್ ನವೀಕರಣ ಮಾಡಲಾಗಿದ್ದು, 451 ಸಿಸಿ, ಟ್ವಿನ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 44.77 ಬಿಹೆಚ್ ಪವರ್ ಮತ್ತು 42.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೀಗ ಹೊಸ ಕವಾಸಕಿ ನಿಂಜಾ 500 ಹೆಚ್ಚು ಕಠಿಣವಾದ ಬಿಎಸ್ 6 ಪಿ 2 ಒಬಿಡಿ 2 ಬಿ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿದೆ.

ಉಳಿದಂತೆ ಬೈಕ್‌ನ ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳಾಗಿಲ್ಲ. ಮುಂಭಾಗದಲ್ಲಿ ಆರ್‌ಎಸ್‌ಯು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಗಳನ್ನು ನೀಡಲಾಗಿದೆ. ಹಿಂಭಾಗದ ಸಸ್ಪೆಂಷನ್ ಮೊನೊ-ಶಾಕ್ ಸೆಟಪ್ ಆಗಿದೆ. ಎರಡೂ ಚಕ್ರಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಸೆಟಪ್ ಅನ್ನು ಕಾಣಬಹುದಾಗಿದ್ದು, ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.
2025ರ ನಿಂಜಾ 500 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.29 ಲಕ್ಷಗಳಾಗಿದೆ. ಇದು ಹಳೆಯ ಮಾಡಲ್ 5.24 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಗಿಂತ 5,000 ರೂ.ಗಳ (ಎಕ್ಸ್ ಶೋರೂಂ) ಬೆಲೆ ಪರಿಷ್ಕರಣೆಯಾಗಿದೆ. ಹೋಲಿಕೆಯಲ್ಲಿ, 2025ರ ಎಲಿಮಿನೇಟರ್ 500 ಬೈಕಿನ ಬೆಲೆಯು ಅದರ ಹಳೇಯ ಮಾಡಲ್‌ಗಿಂತ ರೂ.14,000 (ಎಕ್ಸ್ ಶೋರೂಂ) ಹೆಚ್ಚಾಗಿತ್ತು.

ಹೊಸ ಕವಾಸಕಿ ನಿಂಜಾ 500 ಬೈಕಿನಲ್ಲಿ ಮೆಟಾಲಿಕ್ ಕಾರ್ಬನ್ ಗ್ರೇ ಎಂಬ ಹೊಸ ಬಣ್ಣವನ್ನು ಅಳವಡಿಸಲಾಗಿದೆ. ಇದು ಹಳೆಯ ಆವೃತ್ತಿಯೊಂದಿಗೆ ನೀಡಲಾಗುವ ಏಕೈಕ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣವನ್ನು ಬದಲಾಯಿಸುತ್ತದೆ. ಹೊಸ ಬಣ್ಣದೊಂದಿಗೆ, ಹಳೆಯ ಆವೃತ್ತಿಯಲ್ಲಿ ಇಲ್ಲದ ವಿಭಿನ್ನ ನೋಟವನ್ನು ನೀಡುವ ಫೇರಿಂಗ್ ನಲ್ಲಿ ಗ್ರೀನ್ ಹೈಲೈಟ್ ಗಳನ್ನು ನೋಡಬಹುದು.
ಒಟ್ಟಾರೆ ಈ ಬೈಕ್ ಹೊಸ ಎಮಿಷನ್ ಮಾನದಂಡಗಳನ್ನು ಪೂರೈಸುವ ಮೂಲಕ ಭಾರತದಲ್ಲಿ ಉತ್ಸಾಹಿ ಮೋಟಾರ್‌ಸೈಕಲಿಸ್ಟ್‌ಗಳ ಫೇವರೆಟ್ ಆಗಿ ಮತ್ತೆ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ದುಬಾರಿ ಬೆಲೆಯು ಬೈಕ್‌ನ ಪರ್ಫಾಮೆನ್ಸ್ ಹಾಗೂ ಅದರ ಪವರ್ ಅನ್ನು ಆಧರಿಸಿದೆ. ಪವರ್‌ಫುಲ್ ಎಂಜಿನ್ ಹಾಗೂ ಅದರ ಹೈ ಕ್ವಾಲಿಟಿ ಕಾಂಪೊನೆಂಟ್‌ಗಳು ಈ ಬೈಕ್‌ನ್ನು ದುಬಾರಿಯಾಗಿಸಿವೆ.

ವಿಶ್ವ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಕವಾಸಕಿ ನೀಡುವ ಮೋಟಾಸೈಕಲ್‌ಗಳಿಗೆ ಭಾರೀ ಬೇಡಿಕೆ ಇದೆ. ಭಾರತದಲ್ಲೂ ಇದಕ್ಕೆ ಪ್ರತ್ಯೇಕ ಅಭಿಮಾನಿಗಳಿರುವ ಕಾರಣ ಕಡಿಮೆ ಸಂಖ್ಯೆಯಲ್ಲಿ ಮಾರಟವಾದರೂ, ಕಂಪನಿಯು ತನ್ನ ಮಾಡಲ್‌ಗಳನ್ನು ಎಲ್ಲಾ ಕಡೆ ವಿಸ್ತರಿಸುತ್ತಿದೆ. ಈ ಹೊಸ 2025ರ ನಿಂಜಾ 500 ಬೈಕಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








