Bajaj: ಅಗ್ಗದ ಬೆಲೆಯ ಹೊಸ ಬಜಾಜ್ ಚೇತಕ್ 3503 ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು.. ಯಾರು ಹೇಳಲ್ಲ!
ಬಜಾಜ್ ಚೇತಕ್ (Bajaj Chetak) ಪ್ರಖ್ಯಾತ ಇ-ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ದೇಶೀಯವಾಗಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್‌ನ '35 ಸೀರೀಸ್'ಗೆ ನವೀನ ಮಾಡೆಲ್ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿತ್ತು. ನೀವು ಬಜಾಜ್ ಚೇತಕ್ ಸ್ಕೂಟರ್‌ನ ಹೊಚ್ಚ ಹೊಸ ಮಾಡೆಲ್‌ನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ನೂತನ '3503' ಮಾಡೆಲ್‌ನ ಬೆಲೆ ಹಾಗೂ ವಿಶೇಷತೆ ಕುರಿತ ಪ್ರಮುಖಾಂಶಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.
ಬೆಲೆ (Price): ನೂತನ ಬಜಾಜ್ ಚೇತಕ್ 3503 (Bajaj Chetak 3503) ಎಲೆಕ್ಟ್ರಿಕ್ ಸ್ಕೂಟರ್, ಬಜೆಟ್ ಬೆಲೆಯಲ್ಲಿಯೇ ಮಾರಾಟಕ್ಕೆ ಬಂದಿದೆ ಎಂದು ಹೇಳಬಹುದು. ಇದನ್ನು ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸುಲಭವಾಗಿ ಓಡಿಸಬಹುದಾಗಿದ್ದು, ರೂ.1.10 ಲಕ್ಷ ಎಕ್ಸ್-ಶೋರೂಂ ದರವನ್ನು ಪಡೆದಿದೆ.

ವಿನ್ಯಾಸ & ಬಣ್ಣಗಳು (Design & Colors): ಹೊಸ ಬಜಾಜ್ ಚೇತಕ್ 3503 ಇ-ಸ್ಕೂಟರ್ ರೆಟ್ರೋ ಶೈಲಿ ಆಧಾರಿತ ವಿನ್ಯಾಸವನ್ನು ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್ ಹಾಗೂ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇದು ಮಾತ್ರವಲ್ಲದೆ ಬ್ರೂಕ್ಲಿನ್ ಬ್ಲ್ಯಾಕ್, ಇಂಡಿಗೊ ಬ್ಲೂ, ಮ್ಯಾಟ್ ಗ್ರೇ & ಸೈಬರ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಕಾರ್ಯಕ್ಷಮತೆ (Performance): ಈ ಚೇತಕ್ 3503 ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರಲ್ಲಿ 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ಕ್ರಮಿಸಬಲ್ಲದು. ಇದರಿಂದ ಹತ್ತಿರದ ಊರುಗಳಿಗೆ ಸುಲಭವಾಗಿ ಸಂಚರಿಸಲು ಕೂಡ ಸಾಧ್ಯವಾಗಲಿದೆ.

ನೂತನ ಬಜಾಜ್ ಚೇತಕ್ 3503 ಇ-ಸ್ಕೂಟರ್, 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್, ಮನೆಯ ವಿದ್ಯುತ್‌ನಲ್ಲಿ ಶೇಕಡ 80% ವರೆಗೆ ಚಾರ್ಜ್ ಆಗುವುದಕ್ಕೆ ಸರಿ ಸುಮಾರು 3 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಬಹುಮುಖ್ಯವಾಗಿ ಇಕೋ & ಸ್ಪೋರ್ಟ್ಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.
ವೈಶಿಷ್ಟ್ಯಗಳು (Features): ಈ ಸ್ಕೂಟರ್ ಹಲವು ನವೀನ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಕಲರ್-ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕಂಟ್ರೋಲ್ ಹಾಗೂ ಮ್ಯೂಸಿಕ್ ಕಂಟ್ರೋಲ್‌ನ್ನು ಒಳಗೊಂಡಿದೆ. ಇದರೊಟ್ಟಿಗೆ ಮುಂಭಾಗ ಡಿಸ್ಕ್ & ಹಿಂಭಾಗ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 35-ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಇನ್ನು, ನೂತನ ಬಜಾಜ್ ಚೇತಕ್ 3503 ಇ-ಸ್ಕೂಟರ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ತಂದಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಆದರೂ ಇದೇ ಸ್ಕೂಟರ್‌ಗೆ ಟಿವಿಎಸ್ ಐಕ್ಯೂಬ್, ಓಲಾ ಎಸ್1ಎಕ್ಸ್ ಪ್ಲಸ್ & ಎಥೆರ್ ರಿಜ್ಟಾ ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಮುಂಬರುವ ದಿನಗಳಲ್ಲಿ ಈ 'ಚೇತಕ್ 3503' ಇ-ಸ್ಕೂಟರ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








