ಭಾರತದಲ್ಲಿ BMW S 1000 R ಬಿಡುಗಡೆ: ಆಕ್ರಮಣಕಾರಿ ವಿನ್ಯಾಸ... ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಭಾರತದಲ್ಲಿ ಬಿಎಂಡಬ್ಲ್ಯು ತನ್ನ ಹೊಸ ಬಿಎಂಡಬ್ಲ್ಯು ಎಸ್‌ 1000 ಆರ್ (BMW S 1000 R) ಅನ್ನು ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ರೋಡ್‌ಸ್ಟರ್ ಸಂಪೂರ್ಣವಾಗಿ ಬಿಲ್ಟ್-ಅಪ್ ಯೂನಿಟ್ (CBU) ಆಗಿ ಖರೀದಿಗೆ ಲಭ್ಯವಿರುತ್ತದೆ. ಎಲ್ಲಾ BMW Motorrad ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ಇದನ್ನು ಬುಕ್ ಮಾಡಬಹುದು. ಇದನ್ನು ಆಕ್ರಮಣಕಾರಿ, ಚುರುಕಾದ, ಹೈ ಪರ್ಫಾಮೆನ್ಸ್ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ದಿಟ್ಟ ವಿನ್ಯಾಸ, ತೀಕ್ಷ್ಣವಾದ ನಿಖರತೆ ಮತ್ತು ಅಡ್ರಿನಾಲಿನ್ ಪ್ಯಾಕ್ಡ್ DNA ಯೊಂದಿಗೆ, 'ಸಿಂಗಲ್ R' ರೇಸಿಂಗ್‌ಗಾಗಿ ನಿರ್ಮಿಸಲಾಗಿದೆ ಎಂದು ಬಿಎಂಡಬ್ಲ್ಯು ಹೇಳಿದೆ.

ಹೊಸ BMW S 1000 R ಮೋಟಾರ್‌ಸೈಕಲ್‌ ರೂ. 19,90,000 ಎಕ್ಸ್-ಶೋರೂಂ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದನ್ನು ಮೂರು ಆಕರ್ಷಕ ಬಣ್ಣಗಳಲ್ಲಿ ನೀಡಲಾಗುತ್ತದೆ - ಬ್ಲಾಕ್‌ಸ್ಟಾರ್ಮ್ ಮೆಟಾಲಿಕ್, ಬ್ಲೂಫೈರ್/ಮುಗಿಯಾಲೊ ಯೆಲ್ಲೋ (ಸ್ಟೈಲ್ ಸ್ಪೋರ್ಟ್‌ನೊಂದಿಗೆ ಮಾತ್ರ) ಮತ್ತು ಲೈಟ್‌ವೈಟ್ ಯುನಿ/ಎಂ ಮೋಟಾರ್‌ಸ್ಪೋರ್ಟ್ (M ಪ್ಯಾಕೇಜ್‌ನೊಂದಿಗೆ ಮಾತ್ರ) ಗಳಾಗಿವೆ.

new-bmw-s-1000-r-launched-in-india

ಎಲ್ಲಾ BMW Motorrad ವಾಹನಗಳು 'ಮೂರು ವರ್ಷ, ಅನಿಯಮಿತ ಕಿಲೋಮೀಟರ್‌ಗಳ' ಪ್ರಮಾಣಿತ ವಾರೆಂಟಿಯೊಂದಿಗೆ ಬರುತ್ತವೆ. ವಾರೆಂಟಿಯನ್ನು ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತರಿಸುವ ಆಯ್ಕೆಯೊಂದಿಗೂ ಸಿಗಲಿವೆ. ಹೆಚ್ಚುವರಿಯಾಗಿ 24x7, 365 ದಿನಗಳ ಪ್ಯಾಕೇಜ್‌ನ ರೋಡ್ - ಸೈಡ್ ಅಸಿಸ್ಟೆನ್ಸ್, ಬ್ರೇಕ್‌ಡೌನ್ ಮತ್ತು ಟೋವಿಂಗ್ ಸಂದರ್ಭಗಳಲ್ಲಿ ತ್ವರಿತ ಸೇವೆಗಳನ್ನು ನೀಡುತ್ತದೆ.

ಡಿಸೈನ್: ಹೊಸ BMW S 1000 R ಮೋಟಾರ್‌ಸೈಕಲ್‌ನಲ್ಲಿ ಡೇಟೈಮ್ ರೈಡ್ ಲ್ಯಾಂಪ್‌ಗಳು ಮತ್ತು R ಲೋಗೋ ಹೊಂದಿರುವ ಸ್ಪ್ಲಿಟ್‌ಫೇಸ್ LED ಹೆಡ್‌ಲೈಟ್ ವಿಶಿಷ್ಟ ಭವ್ಯ ನೋಟವನ್ನು ಸೃಷ್ಟಿಸುತ್ತದೆ. ಸಣ್ಣ ಮತ್ತು ಸ್ಪೋರ್ಟಿ ಪ್ಲೇಟ್ ಹೋಲ್ಡರ್, ಹಾಗೆಯೇ ಹಿಂಭಾಗದಲ್ಲಿರುವ ಟರ್ನ್ ಸಿಗ್ನಲ್‌ಗಳು ಮತ್ತು ಪ್ಲೇಟ್ ಲ್ಯಾಂಪ್‌ಗಳು ಈಗ ಒಂದೇ ಘಟಕವಾಗಿದೆ. ಬ್ರೇಕ್ ಮತ್ತು ಟೈಲ್‌ಲೈಟ್‌ನ ಕಾರ್ಯವನ್ನು ಟರ್ನ್ ಇಂಡಿಕೇಟರ್ ಲ್ಯಾಂಪ್‌ಗಳಲ್ಲಿ ಸಂಯೋಜಿಸಲಾಗಿದೆ.

new-bmw-s-1000-r-launched-in-india

ಹೊಸ BMW S 1000 R ನ ಸ್ಪೋರ್ಟಿ ನೋಟವನ್ನು ಹೈಲೈಟ್ ಮಾಡುವ ಬಣ್ಣ ಪರಿಕಲ್ಪನೆಯೊಂದಿಗೆ ರೇಸಿಂಗ್ ಜೀನ್‌ಗಳನ್ನು ವರ್ಧಿಸಲಾಗಿದೆ. ಮೂಲ ಬಣ್ಣದ ಬ್ಲ್ಯಾಕ್‌ಸ್ಟಾರ್ಮ್ ಮೆಟಾಲಿಕ್ ಜೊತೆಗೆ, R ಸ್ಟೈಲ್ ಸ್ಪೋರ್ಟ್ ಮತ್ತು M ಪ್ಯಾಕೇಜ್ ಆಯ್ಕೆಗಳೊಂದಿಗೆ ಲಭ್ಯವಿದೆ. ಬ್ಲೂಫೈರ್/ಮುಗಿಯಾಲೊ ಯೆಲ್ಲೋ ಪೇಂಟ್‌ವರ್ಕ್‌ನೊಂದಿಗೆ ಸ್ಟೈಲ್ ಸ್ಪೋರ್ಟ್ ಆಯ್ಕೆಯು ಟಿಂಟೆಡ್ ಸ್ಪೋರ್ಟ್ ವಿಂಡ್‌ಸ್ಕ್ರೀನ್‌ನೊಂದಿಗೆ ಡೈನಾಮಿಕ್ ಲುಕ್ ಅನ್ನು ಹೊಂದಿದೆ.

ವಿಶೇಷವಾದ M ಮೋಟಾರ್‌ಸ್ಪೋರ್ಟ್ ಪೇಂಟ್ ಫಿನಿಶ್ ಅನ್ನು M ಪ್ಯಾಕೇಜ್‌ಗಾಗಿ ಕಾಯ್ದಿರಿಸಲಾಗಿದೆ, ಇದರಲ್ಲಿ ಮೂಲ ಬಣ್ಣ ಲೈಟ್ ವೈಟ್ ಯುನಿ ಮತ್ತು ಲೈಟ್ ಬ್ಲೂ, ಡಾರ್ಕ್ ಬ್ಲೂ ಮತ್ತು ರೆಡ್ ಸಂಯೋಜನೆಗಳಿವೆ. ಹೊಸ BMW S 1000 R 999 cc ರಿಪ್ಲೇಸ್‌ಮೆಂಟ್ ಆಯಿಲ್/ವಾಟರ್ - ಕೂಲಿಂಗ್ ನಾಲ್ಕು - ಸಿಲಿಂಡರ್ ನಾಲ್ಕು - ಸ್ಟ್ರೋಕ್ ಇನ್-ಲೈನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

new-bmw-s-1000-r-launched-in-india

ಇದು 11000 rpm ನಲ್ಲಿ 170 hp (125 kW) ಗರಿಷ್ಠ ಪವರ್ ಉತ್ಪಾದನೆ ಮತ್ತು 9250 rpm ನಲ್ಲಿ 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಅತ್ಯುನ್ನತ ಮಟ್ಟದ ಎಂಜಿನ್ ಪವರ್ ನೀಡುತ್ತದೆ. ಹೊಸ BMW S 1000 R, 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು ಮತ್ತು ಗಂಟೆಗೆ 250 ಕಿ.ಮೀ ಗರಿಷ್ಠ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಎಂಜಿನ್ ಪವರ್ ಅನ್ನು 5 hp (4 kW) ಗೆ ಹೆಚ್ಚಿಸಲಾಗಿದೆ.

M ಕ್ವಿಕ್ ಆಕ್ಷನ್ ಥ್ರೊಟಲ್, ಎಂಜಿನ್ ಡ್ರ್ಯಾಗ್ ಟಾರ್ಕ್ ಕಂಟ್ರೋಲ್ (MSR), ರೈನ್, ರೋಡ್, ಹಿಲ್ ಸ್ಟಾರ್ಟ್ ಕಂಟ್ರೋಲ್ ಸೇರಿದಂತೆ ಡೈನಾಮಿಕ್ ರೈಡಿಂಗ್ ಮೋಡ್‌ಗಳು, 6.5 TFT ಡಿಸ್ಪ್ಲೇ, USB ಚಾರ್ಜಿಂಗ್ ಸಾಕೆಟ್, ಪೂರ್ಣ LED ಲೈಟ್, ABS ಪ್ರೊ ಮತ್ತು ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (DTC) ಅನ್ನು ಒಳಗೊಂಡಿರುವ ಸಿಕ್ಸ್-ಆಕ್ಸಿಸ್ ಸೆನ್ಸರ್ ಬಾಕ್ಸ್‌ನಂತಹ ಹಲವಾರು ಪ್ರಮಾಣಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

More from DriveSpark

Article Published On: Tuesday, September 16, 2025, 12:22 [IST]
English summary
New bmw s 1000 r launched in india
Read more on bmw new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+