ಇದು ಸ್ಪ್ಲೆಂಡರ್ ಅಲ್ಲವೇ ಅಲ್ಲ: ನಿನ್ನೆ ಬಿಡುಗಡೆ.. 70 Km ಮೈಲೇಜ್, ಹೊಸ Hero ಬೈಕ್ ಕುರಿತ ಪ್ರಮುಖಾಂಶಗಳಿವು!

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿನ್ನೆಯೆಷ್ಟೇ 2025ರ ಹೊಚ್ಚ ಹೊಸ ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್ ಬಿಡುಗಡೆಗೊಂಡಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ದೊರೆಯುತ್ತದೆ. ನೀವು ನೂತನ ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಬನ್ನಿ, ಈ ಬೈಕ್‌ನ ಬೆಲೆ & ವಿಶೇಷತೆಗಳನ್ನು ಒಳಗೊಂಡ ಪ್ರಮುಖಾಂಶಗಳು ಏನೆಂಬುದನ್ನು ನೋಡೋಣ.

ಬೆಲೆ (Price): ಹೊಸ ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ ಅತ್ಯಂತ ಅಗ್ಗದ ದರಕ್ಕೆ ಖರೀದಿಗೆ ಲಭ್ಯವಿದ್ದು, ಮಧ್ಯಮ ವರ್ಗದ ಜನರು ಸುಲಭವಾಗಿ ಮನೆಗೆ ತರಬಹುದು. ಈ ಬೈಕ್ ರೂ.82,016 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹಳೆಯ ಮಾಡೆಲ್‌ಗಿಂತ ಸರಿ ಸುಮಾರು ರೂ.2,000 ತುಟ್ಟಿಯಾಗಿದೆ.

New Hero Passion Plus Bike Top Things Details

ವಿನ್ಯಾಸ & ಬಣ್ಣಗಳು (Design & Colors): ಈ ಬೈಕ್ 2024ರ ಮಾಡೆಲ್‌ನಂತೆಯೇ ವಿನ್ಯಾಸವನ್ನು ಪಡೆದಿದ್ದು, ಉತ್ತಮವಾಗಿರುವ ಹ್ಯಾಲೊಜೆನ್ ಹೆಡ್‌ಲೈಟ್ & ಟೈಲ್ ಲೈಟ್‌ನ್ನು ಒಳಗೊಂಡಿದೆ. ಬ್ಲ್ಯಾಕ್ ಹೆವಿ ಗ್ರೇ, ಬ್ಲ್ಯಾಕ್ ನೆಕ್ಸಸ್ ಬ್ಲೂ, ಬ್ಲೂಯಿಶ್ ಟೀಲ್ ಮತ್ತು ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಎಂಬ ನಾಲ್ಕು ಅತ್ಯಾಧುನಿಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಕಾರ್ಯಕ್ಷಮತೆ (Performance): ನೂತನ ಹೀರೋ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌, 97.2 ಸಿಸಿ ಒಬಿಡಿ 2ಬಿ ಸಿಂಗಲ್-ಸಿಲಿಂಡರ್, ಏರ್- ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 7.91 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 60 ರಿಂದ 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

New Hero Passion Plus Bike Top Things Details

ಸುತ್ತಳತೆ (Dimension): ಹೊಸ ಪ್ಯಾಶನ್ ಪ್ಲಸ್ ಮೋಟಾರ್‌ಸೈಕಲ್‌ 1982 ಎಂಎಂ ಉದ್ದ, 770 ಎಂಎಂ ಅಗಲ & 1087 ಎಂಎಂ ಎತ್ತರವಿದೆ. 168 ಎಂಎಂ ಗ್ರೌಂಡ್ ಕ್ಲಿಯರೆನ್ ಮತ್ತು 1235 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಈ ಬೈಕ್ ಬರೋಬ್ಬರಿ 115 ಕೆಜಿ ತೂಕವಿದ್ದು, 11 ಲೀ. ಸಾಮರ್ಥ್ಯವಿರುವ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

ವೈಶಿಷ್ಟ್ಯಗಳು (Features): ನೂತನ ಬೈಕ್ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ ಡಿಜಿಟಲ್-ಅನಲಾಗ್ ಕ್ಲಸ್ಟರ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಸಾಕೆಟ್ ಹಾಗೂ ಯುಟಿಲಿಟಿ ಬಾಕ್ಸ್‌ನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಪ್ರಯಾಣಿಕರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

New Hero Passion Plus Bike Top Things Details

ಒಟ್ಟಾರೆಯಾಗಿ 2025ರ ನೂತನ 'ಹೀರೋ ಪ್ಯಾಶನ್ ಪ್ಲಸ್' ಮೋಟಾರ್‌ಸೈಕಲ್‌ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಿನ್ನೆಲೆ, ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ. ನೂತನ ಬೈಕ್‌ಗೆ ಮುಂಬರುವ ದಿನಗಳಲ್ಲಿ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 11, 2025, 8:27 [IST]
English summary
New hero passion plus bike top things details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+