Hero: ಅಗ್ಗದ ಹೊಸ 'ಹೀರೋ ಸ್ಪ್ಲೆಂಡರ್' ಬೈಕ್‌ನ್ನು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಹೀರೋ ಸ್ಪ್ಲೆಂಡರ್ (Hero Splendor) ಪ್ರಖ್ಯಾತ ಬೈಕ್ ಆಗಿದೆ. ಇತ್ತೀಚೆಗೆ, ಈ ಮೋಟಾರ್‌ಸೈಕಲ್‌ನ್ನು 'ಒಬಿಡಿ 2ಬಿ' ಮಾನದಂಡಗಳ ಅನ್ವಯ ನವೀಕರಿಸಿಯೂ ಮಾರಾಟಕ್ಕೆ ತರಲಾಗಿತ್ತು. ಇದು ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ಯಾವುದೇ ದೋಷಗಳು ಕಂಡುಬಂದರೆ ತಕ್ಷಣ ಸವಾರರನ್ನು ಎಚ್ಚರಿಸುತ್ತದೆ. ನೀವು ಹೊಚ್ಚ ಹೊಸ 'ಸ್ಪ್ಲೆಂಡರ್' ಬೈಕ್‌ನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ನೂತನ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ದೇಶೀಯ ಮಾರುಕಟ್ಟೆಯಲ್ಲಿ ಹೊಸ 'ಹೀರೋ ಸ್ಪ್ಲೆಂಡರ್' ಮೋಟಾರ್‌ಸೈಕಲ್‌, ಸ್ಪ್ಲೆಂಡರ್ ಪ್ಲಸ್ ಮತ್ತು ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಸೇರಿದಂತೆ ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಕನಿಷ್ಠ ರೂ.79,096 ಹಾಗೂ ಗರಿಷ್ಠ ರೂ.92,028 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

New Hero Splendor Bike On-Road Price And Emi Details

ಬೆಂಗಳೂರಿನಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ ಸ್ಟ್ಯಾಂಡರ್ಡ್ ರೂಪಾಂತರ, ರೂ.96,000 ವರೆಗೆ ಆನ್-ರೋಡ್ ದರವನ್ನು ಪಡೆದಿದೆ. ಇದನ್ನು ರೂ.20,000 ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡರೆ, ರೂ.76,000 ವರೆಗೆ ಸಾಲವಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ತಿಂಗಳಿಗೆ ರೂ.2,300 ವರೆಗೆ ಇಎಂಐ ಕಟ್ಟಬೇಕು.

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮೋಟಾರ್‌ಸೈಕಲ್‌ನ ಡ್ರಮ್ ರೂಪಾಂತರ, ರೂ.1 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಪಡೆದಿದೆ. ಈ ಬೈಕ್‌ನ್ನು ರೂ.20,000 ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.80,000 ವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಹಾಕಿ, ಮೂರು ವರ್ಷಗಳಿಗೆ ಮಾಸಿಕ ರೂ.2,500 ವರೆಗೆ ಇಎಂಐ ಪಾವತಿ ಮಾಡಬೇಕು.

New Hero Splendor Bike On-Road Price And Emi Details

ಈ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್‌ನ ಡಿಸ್ಕ್ ರೂಪಾಂತರ, ರೂ.1.04 ಲಕ್ಷವರೆಗೆ ಆನ್-ರೋಡ್ ದರವನ್ನು ಹೊಂದಿದೆ. ಇದನ್ನು ರೂ.20,000 ಡೌನ್-ಪೇಮೆಂಟ್ ಪಾವತಿಸಿ ಕೊಂಡುಕೊಂಡರೆ, ರೂ.84,000 ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ತಿಂಗಳಿಗೆ 2,600 ವರೆಗೆ ಇಎಂಐ ಕಟ್ಟಬೇಕು.

ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಮೋಟಾರ್‌ಸೈಕಲ್‌ನ ಡಿಸ್ಕ್ ರೂಪಾಂತರ, ರೂ.1.09 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ಈ ಬೈಕ್‌ನ್ನು ರೂ.20,000 ಡೌನ್-ಪೇಮೆಂಟ್ ಕಟ್ಟಿ ತೆಗೆದುಕೊಂಡರೆ, ರೂ.89,000 ವರೆಗೆ ಸಾಲ ಬಾಕಿಯಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ಹಾಕಿ, ಮೂರು ವರ್ಷಗಳಿಗೆ ಮಾಸಿಕ ರೂ.2,800 ವರೆಗೆ ಇಎಂಐ ಪಾವತಿಸಬೇಕು.

ಸ್ಪ್ಲೆಂಡರ್ ಪ್ಲಸ್ & ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್‌ ಬೈಕ್‌ಗಳೆರಡು ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿವೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿವೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತವೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ತನ್ನದಾಗಿಸಿಕೊಂಡಿವೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಮೋಟಾರ್‌ಸೈಕಲ್‌ ಬಗ್ಗೆ ಹೇಳುವುದಾದರೆ, ಇದು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಪಡೆದಿದೆ. 124.7 ಸಿಸಿ ಸಾಮರ್ಥ್ಯ ಪೆಟ್ರೋಲ್ ಎಂಜಿನ್‌ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದೆ. 69 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಗಮನಿಸಿ.. ನಾವಿಲ್ಲಿ ಈ ಹೀರೋ ಸ್ಪ್ಲೆಂಡರ್ ಬೈಕ್‌ನ ಕೆಲವೇ ಕೆಲವು ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ಈ ಸಂಬಂಧ ಯಾವುದೇ ಗೊಂದಲವಿದ್ದರೂ ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

More from DriveSpark

Article Published On: Saturday, April 26, 2025, 12:56 [IST]
English summary
New hero splendor bike on road price and emi details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+