Hero Vida: ನಿನ್ನೆಯಷ್ಟೇ ಬಿಡುಗಡೆ.. ಬರೀ 69,990 ಬೆಲೆ.. ನೂತನ ಹೀರೋ ವಿಡಾ ಇ-ಬೈಕ್ ಕುರಿತ ಪ್ರಮುಖಾಂಶಗಳು!
ಹೀರೋ ಮೋಟೋಕಾರ್ಪ್ (Hero MotoCorp) ನಂಬಿಕಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದೆ. 'ವಿಡಾ' ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್‌ನಲ್ಲಿ ವಿಡಾ ವಿ2 ಹಾಗೂ 'ವಿಡಾ ವಿಎಕ್ಸ್2 ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಶುಕ್ರವಾರವಷ್ಟೇ ಕಂಪನಿಯು ನೂತನ 'ಡರ್ಟ್.ಇ ಕೆ3' ಹೆಸರಿನ ಇ-ಬೈಕ್‌ನ್ನು ಪರಿಚಯಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
ಈ ಬೈಕ್ ವಯಸ್ಕರಿಗಲ್ಲ:
ಹೊಚ್ಚ ಹೊಸ ವಿಡಾ ಡರ್ಟ್.ಇ ಕೆ3 (Vida Dirt.E K3) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ವಯಸ್ಕರು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ 4 ರಿಂದ 10 ವರ್ಷದ ಸಣ್ಣ ಮಕ್ಕಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಅವರು, ಡರ್ಟ್ ರೇಸ್ ಅಥವಾ ಆಫ್-ರೋಡ್ ರೇಸ್ ಕಲಿಯಲು ಸುಲಭವಾಗಿ ಉಪಯೋಗ ಮಾಡಬಹುದಾಗಿದೆ.

ಎಲ್ಲಿ ಅಭಿವೃದ್ಧಿ:
ಈ ಬೈಕ್‌ನ್ನು ಜರ್ಮನಿಯ 'ಹೀರೋ ಟೆಕ್ ಸೆಂಟರ್' ಹಾಗೂ ಜೈಪುರದ 'ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ' ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಮಕ್ಕಳ ಸ್ನೇಹಿಯಾಗಿದೆ. ನವೀನ ತಂತ್ರಜ್ಞಾನ ಬಳಸಿ, ತುಂಬಾ ಅಚ್ಚುಕಟ್ಟಾಗಿ ಸಿದ್ದಪಡಿಸಲಾಗಿದೆ. ಆಂಧ್ರದ ತಿರುಪತಿಯಲ್ಲಿರುವ ಕಂಪನಿಯ 'ಇವಿ' ತಯಾರಿಕಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ.
ಬೆಲೆ ಎಷ್ಟು & ಯಾವ ನಗರಗಳಲ್ಲಿ ಮಾರಾಟ:
ನೂತನ 'ವಿಡಾ ಡರ್ಟ್.ಇ ಕೆ3' ಇ-ಮೋಟಾರ್‌ಸೈಕಲ್, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.69,990 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಪರಿಚಯಾತ್ಮಕ ದರವು ಮೊದಲ 300 ಯುನಿಟ್‌ಗಳಿಗೆ ಮಾರಾಟಗಳಿಗೆ ಮಾತ್ರ ಅನ್ವಯವಾಗುತ್ತದೆ. ಕಂಪನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ನ್ನು ಬುಕ್ಕಿಂಗ್ ಮಾಡಬಹುದು. ಜ.15 ರಿಂದ ನವದೆಹಲಿ, ಬೆಂಗಳೂರು, ಪುಣೆ, ಜೈಪುರ ಹಾಗೂ ಕ್ಯಾಲಿಕಟ್‌ನ ಆಯ್ದ ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಕಾರ್ಯಕ್ಷಮತೆ ಹೇಗಿದೆ:
ಹೊಸ 'ವಿಡಾ ಡರ್ಟ್.ಇ ಕೆ3' ಎಲೆಕ್ಟ್ರಿಕ್ ಬೈಕ್, 360ಡಬ್ಲ್ಯೂಹೆಚ್ ಸಾಮರ್ಥ್ಯದ ರಿಮೂವಬಲ್ ಹೋಮ್-ಚಾರ್ಜಬಲ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 3 ಗಂಟೆಗಳ ಕಾಲ ಲೀಲಾಜಾಲವಾಗಿ ಓಡಿಸಬಹುದು. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿಯು 3 ಗಂಟೆಗಳಲ್ಲಿ 0 ರಿಂದ 100% ಚಾರ್ಜ್ ಆಗಿ ಬಿಡುತ್ತದೆ.
ವೈಶಿಷ್ಟ್ಯಗಳೇನು:
ಈ ಮೋಟಾರ್‌ಸೈಕಲ್ ಬಿಗಿನರ್ಸ್ (8 ಕೆಎಂಪಿಹೆಚ್), ಅಮೆಚೂರ್ (16 ಕೆಎಂಪಿಹೆಚ್) ಮತ್ತು ಪ್ರೊ (25 ಕೆಎಂಪಿಹೆಚ್) 3 ರೈಡಿಂಗ್ ಮೋಡ್‌ಗಳನ್ನು ಪಡೆದಿದೆ. ಮಕ್ಕಳು ಸುಲಭವಾಗಿ ಬಳಸಬಹುದಾದ ಬ್ರೇಕ್ ಲಿವರ್‌ನ್ನು ತನ್ನದಾಗಿಸಿಕೊಂಡಿದೆ. ಅನಿರೀಕ್ಷಿತ ಸಂದರ್ಭದಲ್ಲಿ ಅವರು ಬಿದ್ದರೆ, ಪವರ್ ಕಟ್ ಮಾಡಲು ಸಹಾಯವಾಗುವ ನಿಟ್ಟಿನಲ್ಲಿ 'ಮ್ಯಾಗ್ನೆಟಿಕ್ ಲ್ಯಾನ್ಯಾರ್ಡ್ ಕಿಲ್ ಸ್ವಿಚ್'ನ್ನು ಒಳಗೊಂಡಿದೆ. ಸೀಲ್ ಮಾಡಿರುವ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಜೊತೆಗೆ ಪೋಷಕರು 'ವಿಡಾ' ಅಪ್ಲಿಕೇಶನ್ ಸಹಾಯದಿಂದ ರೈಡ್ ಮೋಡ್‌ನ್ನು ಲಾಕ್ ಮಾಡಬಹುದು.
ಸಸ್ಪೆನ್ಷನ್ ಸೆಟ್ಟಿಂಗ್ & ಬ್ರೇಕಿಂಗ್ ಸೆಟಪ್:
ಇದು ಗರಿಷ್ಠ ರಕ್ಷಣೆಯನ್ನು ಒದಗಿಸಬಲ್ಲದು. ಅದಕ್ಕಾಗಿ ಸ್ಮಾಲ್ (Small), ಮೀಡಿಯಂ (Medium) ಮತ್ತು ಲಾರ್ಜ್ (Large) ಎಂಬ ಸಸ್ಪೆನ್ಷನ್ ಸೆಟ್ಟಿಂಗ್‌ನ್ನು ಹೊಂದಿದೆ. ಹಾಗೆಯೇ ಹಿಂಬದಿ (ರೇರ್) 160 - ಮಿ.ಮೀ ಹೈಡ್ರಾಲಿಕ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಒಟ್ಟಾರೆಯಾಗಿ 'ವಿಡಾ ಡರ್ಟ್.ಇ ಕೆ3' ಇ-ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಹತ್ತಾರು ನವೀನವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಬೈಕ್‌ನ ವಿತರಣೆಗಳು ಶುರುವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರಕಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








