Hero: ಹೊಚ್ಚ ಹೊಸ ಹೀರೋ ಜೂಮ್ 160 ಸ್ಕೂಟರ್ ಬಿಡುಗಡೆ, ಬೆಲೆ ಇಷ್ಟೇನಾ.. ಹೇಗಿದೆ?

ಹೀರೋ ಮೋಟೋಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಸ್ಪ್ಲೆಂಡರ್ ಮಾರಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿರುವ ಕಂಪನಿಯು ನಿಧಾನವಾಗಿ ಸ್ಕೂಟರ್ ವಿಭಾಗದಲ್ಲೂ ತನ್ನದೆಯಾದ ಛಾಪನ್ನು ಮೂಡಿಸುತ್ತಿದೆ. ನವದೆಹಲಿಯಲ್ಲಿ ಜರುಗುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಕಂಪನಿಯು ನೂತನ 'ಜೂಮ್ 160' ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಲೆ (Price): ನೂತನ ಹೀರೋ ಜೂಮ್ 160 (Hero Xoom 160) ಮ್ಯಾಕ್ಸಿ ಸ್ಕೂಟರ್ ಆಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.1.48 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿ ಮಾಡಬಹುದು.

New Hero Xoom 160 Launched At Auto Expo 2025 Rs 1 48 Lakh Price Details

ವಿನ್ಯಾಸ (Design): ಹೊಸ ಹೀರೋ ಜೂಮ್ 160 ಸ್ಕೂಟರ್ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಬೈಕ್‌ಗಳಿಗೆ ಸವಾಲೆಸೆಯುವ ರೀತಿಯಲ್ಲಿದೆ. ಉತ್ತಮವಾಗಿರುವ ವಿಂಡ್‌ಸ್ಕ್ರೀನ್‌ ಹಾಗೂ ಸ್ಪ್ಲಿಟ್ ಎಲ್ಇಡಿ - ಹೆಡ್‌ಲೈಟ್‌ನ್ನು ಹೊಂದಿದೆ. ಸೀಟುಗಳು ಕೂಡ ಚೆನ್ನಾಗಿದ್ದು, ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು.

ಕಾರ್ಯಕ್ಷಮತೆ (Performance): ಈ ಜೂಮ್ 160 ಸ್ಕೂಟರ್ ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 156 - ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 8,000 ಆರ್‌ಪಿಎಂನಲ್ಲಿ 14 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,500 ಆರ್‌ಪಿಎಂನಲ್ಲಿ 13.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆದರೆ, ನೂತನ ಸ್ಕೂಟರ್ ಮೈಲೇಜ್ ಕುರಿತಂತೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

New Hero Xoom 160 Launched At Auto Expo 2025 Rs 1 48 Lakh Price Details

ವೈಶಿಷ್ಟ್ಯಗಳು (Features): ಹೊಸ ಹೀರೋ ಜೂಮ್ 160 ಸ್ಕೂಟರ್, ಐ3ಎಸ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಕೀ - ಲೆಸ್ ಇಗ್ನಿಷನ್, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ಒಳಗೊಂಡಿದ್ದು, ಇದು ಕಾಲ್/ಎಸ್ಎಂಎಸ್ ಅಲರ್ಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಸಕ್ರಿಯಗೊಳಿಸುತ್ತದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಯ ಸಲುವಾಗಿ ಡಿಸ್ಕ್ ಬೈಕ್‌ಗಳನ್ನು ಪಡೆದಿದೆ. ಇದರೊಟ್ಟಿಗೆ 12-ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ ನೂತನ 'ಹೀರೋ ಜೂಮ್ 160' ಮ್ಯಾಕ್ಸಿ ಸ್ಕೂಟರ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿರುವುದು ಖುಷಿಯ ವಿಚಾರವಾಗಿದೆ. ಈ ಹಿನ್ನೆಲೆ, ಹೆಚ್ಚಿನ ಸಂಖ್ಯೆಯ ಗ್ರಾಹಕರ ಆಯ್ಕೆಯ ದ್ವಿಚಕ್ರ ವಾಹನವಾಗಿ ಹೊರಹೊಮ್ಮಬಹುದು. ಅತಿ ಶೀಘ್ರದಲ್ಲಿಯೇ ಸ್ಕೂಟರ್ ವಿತರಣೆ ಶುರುವಾಗಲಿದ್ದು, ಆ ಬಳಿಕ ದೇಶೀಯ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 17, 2025, 16:44 [IST]
English summary
New hero xoom 160 launched at auto expo 2025 rs 1 48 lakh price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+