ಬಡವರ ಅಡ್ವೆಂಚರ್ ಬೈಕ್: ಅತ್ಯಂತ ಕಡಿಮೆ ಬೆಲೆ, ಮಾಸ್ ಲುಕ್‌ನ ಹೊಸ ಹೀರೋ ಬೈಕ್ ವಿಶೇಷತೆಗಳು
ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ತನ್ನ ಎಕ್ಸ್‌ಪಲ್ಸ್ 210 ಬೈಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಅಡ್ವೆಂಚರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.76 ಲಕ್ಷವಾಗಿದೆ. ಈ ಬೆಲೆಯನ್ನು ಹೀರೋ ಎಕ್ಸ್‌ಪಲ್ಸ್ 200 ಗಿಂತ ರೂ.24,000 ದುಬಾರಿಯಾಗಿದೆ. ಆದರೂ ಈ ಬೈಕಿಗೆ ಕೈಗೆಟುಕುವ ಬೆಲೆ ಎಂದು ಹೇಳಬಹುದು. ಕೈಗೆಟುಕುವ ಬೆಲೆಯ ಅಡ್ವೆಂಚರ್ ಬೈಕ್ ಅನ್ನು ಹುಡುಕುತ್ತಿದ್ದವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಎಂಜಿನ್: ಹೀರೊ ಎಕ್ಸ್‌ಪಲ್ಸ್ 210 ಬೈಕಿನಲ್ಲಿ ದೊಡ್ಡದಾದ 210 cc ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.6 bhp ಮತ್ತು 20.7 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಈ ಹೀರೊ ಎಕ್ಸ್‌ಪಲ್ಸ್ 200 4V ಬೈಕ್ ಗಿಂತ ಪವರ್ ಮತ್ತು ಟಾರ್ಕ್ ಗಣನೀಯವಾಗಿ ಏರಿದೆ.

ವಿನ್ಯಾಸ: ಹೊಸ ಹೀರೊ ಎಕ್ಸ್‌ಪಲ್ಸ್ 210 ಬೈಕ್ ವಿನ್ಯಾಸವು ಡಾಕರ್ ಬೈಕ್‌ಗಳಿಂದ ಪ್ರೇರಿತವಾಗಿದೆ. ಬೈಕ್‌ಗೆ ಅಪ್-ಸ್ವೆಪ್ಟ್ ಎಕ್ಸಾಸ್ಟ್ ಮತ್ತು ಎಂಡ್ಯೂರೋ-ಶೈಲಿಯ ಟೈಲ್ ವಿಭಾಗವಿದೆ. ಆರಾಮದಾಯಕ ಅನುಭವಕ್ಕಾಗಿ ಸೀಟ್ ಅನ್ನು ಕೂಡ ಸಹ ಬದಲಾಯಿಸಲಾಗಿದೆ. ಯುವಕರನ್ನು ಸೆಳೆಯಲು ಈ ಬೈಕ್ ಮತ್ತಷ್ಟು ಅಗ್ರೇಸಿವ್ ಲುಕ್ ನೊಂದಿಗೆ ಬರುತ್ತಿದೆ. ಈ ಹೊಸ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.
ಫೀಚರ್ಸ್: ಹೊಸ ಹೀರೊ ಎಕ್ಸ್‌ಪಲ್ಸ್ 210 ಬೈಕ್ 4.2-ಇಂಚಿನ TFT ಡಿಸ್ ಪ್ಲೇಯನ್ನು ಸಹ ಪ್ಯಾಕ್ ಮಾಡುತ್ತದೆ, ಅದು ಕರೆ ಮತ್ತು SMS ಅಲರ್ಟ್ ಗಳಿಗಾಗಿ ಬ್ಲೂಟೂತ್ ಸಂಪರ್ಕವನ್ನು ತರುತ್ತದೆ, ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇತರ ಕನೆಕ್ಟ್ ಫೀಚರ್ಸ್ ಗಳನ್ನು ಹೊಂದಿವೆ.ಈ ಹೀರೋ ಎಕ್ಸ್‌ಪಲ್ಸ್ ನಿಮ್ಮ ಕೈಗೆ ಸಿಗುವ ಅತ್ಯಂತ ಕೈಗೆಟುಕುವ ಆಡ್ವೆಂಚರ್ ಬೈಕ್ ಆಗಿದೆ. ಅಲ್ಲದೇ ಭಾರತದಲ್ಲಿ ಅಡ್ವೆಂಚರ್ ಬೈಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಹೀರೋ ಎಕ್ಸ್‌ಪಲ್ಸ್‌ನಂತಹ ದೈತ್ಯ ಕಂಪನಿಗಳ ಮಾರಾಟವೇ ಇದಕ್ಕೆ ಸಾಕ್ಷಿ. ಅಡ್ವೆಂಚರ್ ಬೈಕ್‌ಗಳನ್ನು ಹಿಟ್ ಮಾಡಿದ್ದು ಎನ್‌ಫೀಲ್ಡ್ ಆಗಿದ್ದರೂ, ಹೀರೋ ಈ ವಿಭಾಗವನ್ನು ಹೆಚ್ಚು ಜನಪ್ರಿಯಗೊಳಿಸಿತು ಎಂದು ಹೇಳಬೇಕು. ಕಡಿಮೆ ಬೆಲೆಯಲ್ಲಿ ಹೀರೋ ಕಂಪನಿಯು ಅಡ್ವೆಂಚರ್ ವಿಭಾಗದಲ್ಲಿ ಎಕ್ಸ್‌ಪಲ್ಸ್ ಎಂಬ ಬೈಕ್ ಅನ್ನು ಬಿಡುಗಡೆಗೊಳಿಸಿ ಬಿರುಗಾಳಿ ಎಬ್ಬಿಸಿತು. ಇದೀಗ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಲು ರೆಡಿಯಾಗಿದೆ.
ಈ ಹೀರೊ ಎಕ್ಸ್‌ಪಲ್ಸ್ 210 ಬೈಕಿನಲ್ಲಿ 220 mm ನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಹೊಂದಾಣಿಕೆಯ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ. ಇನ್ನು ಉತ್ತಮ ಆಫ್-ರೋಡ್ ಸಾಮರ್ಥ್ಯಕ್ಕಾಗಿ ಬೈಕ್ ರ್ಯಾಲಿ ಕಿಟ್‌ನೊಂದಿಗೆ ಜೋಡಿಸಲಾಗಿದೆ. ಇದು 21-ಇಂಚಿನ ಮುಂಭಾಗ ಮತ್ತು 18-ಇಂಚಿನ ಸ್ಪೋಕ್ಡ್ ವ್ಹೀಲ್ ಗಳಲ್ಲಿ ಡ್ಯುಯಲ್-ಪರ್ಪಸ್ ಟೈರ್‌ಗಳನ್ನು ಒಳಗೊಂಡಿವೆ.

ಸಸ್ಪೆಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ: ಹೊಸ ಹೀರೊ ಎಕ್ಸ್‌ಪಲ್ಸ್ 210 ಬೈಕ್ ಎಂಎಂ ಟ್ರ್ಯಾವೆಲ್ ನೊಂದಿಗೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಎಬಿಎಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








