ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್‌ ಲುಕ್‌ನಲ್ಲಿ ಬರುತ್ತಿದೆ ಹೊಸ ಹೀರೋ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ 250cc ಬೈಕುಗಳ ವಿಭಾಗವಾಗಿ ವೇಗವಾಗಿ ಬೆಳೆಯುತ್ತಿದೆ. ದೇಶದ ಮುಂಚೂಣಿಯಲ್ಲಿರುವ ದ್ವಿಚಕ್ರ ವಾಹನ ತಯಾರಕರಾದ ಕೆಟಿಎಂ, ಯಮಹಾ, ಬಜಾಜ್, ಸುಜುಕಿ ಮತ್ತು ಹೋಂಡಾಗಳು ಈ ವಿಭಾಗವು ಯುವಜನತೆಯನ್ನು ಸೆಳೆದು ಮೋಡಿ ಮಾಡಿತ್ತು. ಬ್ರ್ಯಾಂಡ್‌ಗಳು ಈಗ ಪ್ರೀಮಿಯಂ ಬೈಕ್‌ಗಳ ಟ್ರೆಂಡ್‌ನಲ್ಲಿ ಸಿಲುಕಿಕೊಂಡಿವೆ. ಈ ವಿಭಾಗದ ಮೇಲೆ ಕಣ್ಣಿಟ್ಟಿರುವ ಹೀರೋ ಹೀರೋ ಮೋಟೋಕಾರ್ಪ್ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿ ಸಂಚಲನವನ್ನು ಸೃಷ್ಟಿಸಲು ಸಜ್ಜಾಗಿದೆ. ಹೀರೋ ಕಂಪನಿಯು ಎಕ್ಸ್‌ಟ್ರೀಮ್ 250ಆರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಈ ಹೊಸ ಎಕ್ಸ್‌ಟ್ರೀಮ್ 250ಆರ್ ಬೈಕ್ ಅನ್ನು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ನಡೆದ 2024 ಇಐಸಿಎಂಎ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಮಾದರಿಯು ಮುಂಭಾಗದ ಕೌಲ್, ಆಟೋ-ಇಲ್ಯುಮಿನೇಷನ್ ಕ್ಲಾಸ್-ಡಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್, ಎಲ್‌ಇಡಿ ಡಿಆರ್‌ಎಲ್‌ಗಳು, ಪಾಲಿಗೋನಲ್ ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ಲೀಕ್ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು ಕ್ವಾರ್ಟರ್-ಲೀಟರ್ ಮೋಟಾರ್‌ಸೈಕಲ್‌ಗೆ ನಯವಾದ ನೋಟವನ್ನು ಹೊಂದಿದೆ.

Hero Xtreme 250R

ಈ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ (Hero Xtreme 250R) ಬೈಕ್ ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳ ಅತ್ಯಾಕರ್ಷಕ ಮಿಶ್ರಣವನ್ನು ಹೊಂದಿದೆ. ಈ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಮುಂಭಾಗದ ಫೆಂಡರ್ ಮತ್ತು ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್ ಸ್ಪ್ರಿಂಗ್ ಸಹ ಕೆಂಪು ಬಣ್ಣವನ್ನು ನೀಡಲಾಗಿದೆ. ಕಂಪನಿಯು ಫ್ಯೂಯಲ್ ಟ್ಯಾಂಕ್‌ನಲ್ಲಿ 3D ಸ್ವರೂಪದಲ್ಲಿ 'ಎಕ್ಸ್‌ಟ್ರೀಮ್' ಬ್ಯಾಡ್ಜಿಂಗ್ ಅನ್ನು ಸಹ ನೀಡಿದೆ.

ಇನ್ನು ಸೈಡ್ ರೇಡಿಯೇಟರ್ ಕವರ್‌ಗಳಲ್ಲಿ R ಅಕ್ಷರ ನೋಡಬಹುದು. ಇನ್ನು ಈ ಹೊಸ ಹೀರೋ ಬೈಕ್ ಸ್ಪೀಟ್ ಸೀಟುಗಳಿಗೆ ನಯವಾದ ಪ್ರೊಫೈಲ್ ಅನ್ನು ಸಹ ಒದಗಿಸಿದೆ. ಇದು ಬೈಕ್‌ನ ಸ್ಪೋರ್ಟಿ ಲುಕ್ ಮತ್ತು ಫೀಲ್‌ಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ. ಇನ್ನು ವಿಶಿಷ್ಟವಾದ ಮೆಟಾಲಿಕ್ ಕಾಪರ್ ಫಿನಿಶ್‌ನಲ್ಲಿ ಎಂಜಿನ್ ಕೇಸಿಂಗ್ ಇರುವುದು ಮತ್ತೊಂದು ಪ್ರಮುಖ ಅಂಶವಾಗಿದೆ.

Hero Xtreme 250R

ವಿಶಿಷ್ಟವಾದ ಮೆಟಾಲಿಕ್ ಕಾಪರ್ ಫಿನಿಶ್‌ನಲ್ಲಿ ಎಂಜಿನ್ ಕೇಸಿಂಗ್ ಇರುವುದು ಮತ್ತೊಂದು ಪ್ರಮುಖ ಅಂಶವಾಗಿದೆ. ಒಟ್ಟಾರೆಯಾಗಿ Hero Xtreme 250R ಮೋಟಾರ್‌ಸೈಕಲ್‌ನ ಸ್ಪೋರ್ಟಿ ವಿನ್ಯಾಸ, ಗೋಲ್ಡನ್ ಫಿನಿಶ್ USD ಫೋರ್ಕ್‌ಗಳು ಮತ್ತು ಸ್ಪೋರ್ಟಿ ಗ್ರಾಫಿಕ್ಸ್‌ಗಳು ಯಾರನ್ನೂ ಅಪೇಕ್ಷಿಸುವಂತೆ ನಿರ್ಮಿಸಿರುವುದು ಬ್ರ್ಯಾಂಡ್‌ಗೆ ಹೆಮ್ಮೆ ತಂದಿದೆ. ಇದು Hero MotoCorp ನ ಮೊದಲ 250cc ಸ್ಟ್ರೀಟ್ ಫೈಟರ್ ಮೋಟಾರ್ ಸೈಕಲ್ ಆಗಿದೆ.

ಒಟ್ಟಾರೆಯಾಗಿ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಸ್ಪೋರ್ಟಿ ವಿನ್ಯಾಸ, ಗೋಲ್ಡನ್ ಫಿನಿಶ್ USD ಫೋರ್ಕ್‌ಗಳು ಮತ್ತು ಸ್ಪೋರ್ಟಿ ಗ್ರಾಫಿಕ್ಸ್‌ಗಳು ಯಾರನ್ನೂ ಅಪೇಕ್ಷಿಸುವಂತೆ ನಿರ್ಮಿಸಿರುವುದು ಬ್ರ್ಯಾಂಡ್‌ಗೆ ಹೆಮ್ಮೆ ತಂದಿದೆ. ಇದು ಹೀರೋ ಮೋಟೋಕಾರ್ಪ್ ಕಂಪನಿಯ ಮೊದಲ 250cc ಸ್ಟ್ರೀಟ್ ಫೈಟರ್ ಬೈಕ್ ಆಗಿದೆ. ಕೆಟಿಎಂ 250 ಡ್ಯೂಕ್‌ನಂತಹ ಪ್ರಬಲ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾದಾಗ ಈ ಎಲ್ಲ ವಿಷಯಗಳಲ್ಲಿ ಅತ್ಯುತ್ತಮವಾಗಿರಬೇಕು ಎಂಬ ನಿಲುವು ಹೀರೋ ತೋರಿಸಿದ್ದಾರೆ ಎಂದು ಹೇಳಬಹುದು.

Hero Xtreme 250R

ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ 4-ವಾಲ್ವ್ ಸಿಸ್ಟಮ್‌ನೊಂದಿಗೆ ಹೊಸ 250cc ಲಿಕ್ವಿಡ್-ಕೂಲ್ಡ್ DOHC ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 30 bhp ಪವರ್ ಮತ್ತು 25 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಹೀರೋ ಬೈಕ್ ರೇಡಿಯಲ್ ಟೈರ್‌ಗಳನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 9, 2025, 13:53 [IST]
English summary
New hero xtreme 250r debut at the bharat mobility global expo 2025 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+