Kinetik DX EV: ಓಲಾ, ಎಥರ್‌ಗೆ ನಡುಕ ಶುರು: ಕೈನೆಟಿಕ್ ಫ್ಯಾಮಿಲಿ ಸ್ಕೂಟರ್ ಮತ್ತೆ ಬಿಡುಗಡೆ
ಕೈನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್ (ಕೆಇಎಲ್) ತನ್ನ ಮೀಸಲಾದ ಇವಿ ಉತ್ಪಾದನಾ ಅಂಗಸಂಸ್ಥೆಯಾದ ಕೈನೆಟಿಕ್ ವ್ಯಾಟ್ಸ್ ಮತ್ತು ವೋಲ್ಟ್ಸ್ ಲಿಮಿಟೆಡ್ (ಕೆಡಬ್ಲ್ಯೂವಿ) ಮೂಲಕ ತನ್ನ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ (Kinetik DX EV) ಅನ್ನು ಇಂದು (ಜುಲೈ 28, 2025) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿಯು ಡಿಎಕ್ಸ್ (DX) ಹಾಗೂ ಡಿಕ್ಸ್ ಪ್ಲಸ್ (DX+) ಎಂಬ ಎರಡು ವೇರಿಯೆಂಟ್‌ಗಳೊಂದಿಗೆ ಪರಿಚಯಿಸಿದೆ. ಹೊಸ ಸ್ಕೂಟರ್ ತನ್ನ ಗತ ವೈಭವವನ್ನು ಭಾರತದಲ್ಲಿ ಮರಳಿ ಪಡೆಯಲು ಸಜ್ಜಾಗಿದೆ. ಹೊಸ ಸ್ಕೂಟರ್ ಬೆಲೆ, ವಿಶೇಷತೆಗಳು ಇಲ್ಲಿವೆ.
ಈ ಹೊಸ ಮಾದರಿಯು 1980 ರ ದಶಕದ ಕೈನೆಟಿಕ್ ಹೋಂಡಾ ಡಿಎಕ್ಸ್‌ನ ಅದೇ ಕ್ಲಾಸಿಕ್ ಲುಕ್‌ನೊಂದಿಗೆ ಹೊಸ ಆಧುನಿಕ ವಿನ್ಯಾಸದ ಮಿಶ್ರಣವನ್ನು ಪಡೆದುಕೊಂಡು ಎಂಟ್ರಿ ಕೊಟ್ಟಿದೆ. ಹೊಸ ಕೈನೆಟಿಕ್ ಡಿಎಕ್ಸ್ ಬೆಲೆಯು ರೂ. 1,11,499 (ಎಕ್ಸ್ ಶೊರೂಂ) ಹಾಗೂ ಕೈನೆಟಿಕ್ ಡಿಎಕ್ಸ್ ಪ್ಲಸ್ ಬೆಲೆಯು ರೂ. 1,17,499 (ಎಕ್ಸ್ ಶೋರೂಂ) ಇದೆ.

ಭಾರತದಲ್ಲಿ ತಯಾರಿಸಿದ ಈ ಸ್ಕೂಟರ್‌ನ ಮೂಲ ಡಿಸೈನ್ ಅನ್ನು ಹೊಸ ಲುಕ್‌ನೊಂದಿಗೆ ಅಭಿವೃದ್ಧಿಪಡಿಸಲು ಇಟಾಲಿಯನ್ ವಿನ್ಯಾಸಕರೊಂದಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಹೊಸ ಕೈನೆಟಿಕ್ DX EV ಬಲವಾದ ಮೆಟಲ್ ಬಾಡಿ ಮತ್ತು ವಿಶಾಲವಾದ ಫ್ಲೋರ್ ಬೋರ್ಡ್ ಹೊಂದಿದೆ. ಇದು 37-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಹೊಂದಿದ್ದು, ಇದರಲ್ಲಿ 1 ಪೂರ್ಣ ಮತ್ತು 1 ಅರ್ಧ ಹೆಲ್ಮೆಟ್ ಜೊತೆಗೆ ಕೆಲವು ದೈನಂದಿನ ಅಗತ್ಯ ವಸ್ತುಗಳನ್ನು ಸಾಗಿಸಬಹುದು.
ಪ್ರಮುಖ ವೈಶಿಷ್ಟ್ಯವೆಂದರೆ 2.6 kWh ಗರಿಷ್ಠ ಸಾಮರ್ಥ್ಯವಿರುವ LFP ಬ್ಯಾಟರಿ ಅಳವಡಿಸಲಾಗಿದ್ದು, ಇದನ್ನು ರೇಂಜ್-X ತಯಾರಿಸಿದೆ. ಇದು ಭಾರತದಲ್ಲಿನ ಇತರ NMC ಬ್ಯಾಟರಿ ಚಾಲಿತ ಸ್ಕೂಟರ್‌ಗಳಿಗಿಂತ 4 ಪಟ್ಟು ಹೆಚ್ಚು ಜೀವಿತಾವಧಿಯನ್ನು (2500 ರಿಂದ 3500+ ಚಕ್ರಗಳು) ಹೊಂದಿದೆ. ಕೈನೆಟಿಕ್ DX + ಬ್ಯಾಟರಿಯು ಅಂದಾಜು 116 ಕಿ.ಮೀ IDC ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಇದು 3 ಮೋಡ್‌ಗಳೊಂದಿಗೆ (ರೇಂಜ್, ಪವರ್, ಟರ್ಬೊ) 90 ಕಿ.ಮೀ ಗರಿಷ್ಟ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಮೋಟಾರ್ ಅನ್ನು ಸಹ ಹೊಂದಿದೆ. ಕೈನೆಟಿಕ್ DX ಮತ್ತು DX+ ಎರಡೂ ಮಾದರಿಗಳು ರಿವರ್ಸ್ ಮತ್ತು ಹಿಲ್ ಹೋಲ್ಡ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಮುಂಭಾಗದ ಟೆಲಿಸ್ಕೋಪಿಕ್ ಮತ್ತು ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ.
220mm ಮುಂಭಾಗದ ಡಿಸ್ಕ್ ಮತ್ತು 130mm ಹಿಂಭಾಗದ ಡ್ರಮ್ ಬ್ರೇಕ್ ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಒಳಗೊಂಡಿದೆ. ಕೈನೆಟಿಕ್ ಡಿಎಕ್ಸ್ ಇವಿ ಮೀಸಲಾದ ಮೊಬೈಲ್ ಅಪ್ಲಿಕೇಶನ್ ಪಡೆಯುತ್ತದೆ, ಹಾಗೆಯೇ ಡಿಎಕ್ಸ್ + ನೈಜ-ಸಮಯದ ಸವಾರಿ ಅಂಕಿಅಂಶಗಳು ಮತ್ತು ವಾಹನ ಡೇಟಾ, ಜಿಯೋ-ಫೆನ್ಸಿಂಗ್, ಇಂಟ್ರೂಡರ್ ಎಚ್ಚರಿಕೆ, ಫೈಂಡ್ ಮೈ ಕೈನೆಟಿಕ್, ಟ್ರ್ಯಾಕ್ ಮೈ ಕೈನೆಟಿಕ್ ಸೇರಿದಂತೆ ಇನ್ನೂ ಅನೇಕ ಸುಧಾರಿತ ಟೆಲಿಕೈನೆಟಿಕ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಸ್ಕೂಟರ್‌ಗೆ ಮೈ ಕಿನಿ ಕಂಪ್ಯಾನಿಯನ್ ವಾಯ್ಸ್ ಅಲರ್ಟ್‌ಗಳನ್ನು ನೀಡಲಾಗಿದೆ, ಇದರಲ್ಲಿ ಸ್ಕೂಟರ್ ಬಳಕೆದಾರರನ್ನು ಸುರಕ್ಷತೆ, ಕ್ರಿಯಾತ್ಮಕತೆಯ ಬಗ್ಗೆ ಸ್ವಾಗತಿಸುತ್ತದೆ ಮತ್ತು ಎಚ್ಚರಿಸುತ್ತದೆ. ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತದೆ. ಎರಡೂ ವೇರಿಯೆಂಟ್‌ಗಳು ಬ್ಲೂಟೂತ್ ಮೂಲಕ ತ್ವರಿತ CRM ಸಂಪರ್ಕಕ್ಕಾಗಿ ಮೀಸಲಾದ ಕೈನೆಟಿಕ್ ಅಸಿಸ್ಟ್ ಸ್ವಿಚ್‌ನೊಂದಿಗೆ ಸಜ್ಜುಗೊಂಡಿವೆ.
ಕೇವಲ 35,000 ಯೂನಿಟ್ ವಾಹನಗಳಿಗೆ ಸೀಮಿತವಾದ ಬುಕಿಂಗ್‌ಗಳೊಂದಿಗೆ, ವಿತರಣೆಗಳು ಸೆಪ್ಟೆಂಬರ್ 25 ರಲ್ಲಿ ಪ್ರಾರಂಭವಾಗುತ್ತವೆ. ಗ್ರಾಹಕರು ರೂ. 1000 ನೀಡಿ ಕಂಪನಿಯ ವೆಬ್‌ಸೈಟ್‌ನಲ್ಲಿ ತಮ್ಮ DX ಅನ್ನು ಬುಕ್ ಮಾಡಬಹುದು. DX+ ಅನ್ನು ಐದು ಬಣ್ಣಗಳಲ್ಲಿ ನೀಡಲಾಗುತ್ತದೆ ರೆಡ್, ಬ್ಲೂ, ವೈಟ್, ಸಿಲ್ವರ್ ಮತ್ತು ಬ್ಲಾಕ್ ಹಾಗಯೇ DX ಅನ್ನು ಸಿಲ್ವರ್ ಮತ್ತು ಬ್ಲಾಕ್ ಬಣ್ಣಗಳಲ್ಲಿ ನೀಡಲಾಗುತ್ತಿದೆ.


Click it and Unblock the Notifications