80ರ ದಶಕದ ಐಕಾನಿಕ್ ಕೈನೆಟಿಕ್ ಸ್ಕೂಟರ್ ಮತ್ತೆ ಬಿಡುಗಡೆಗೆ ಸಜ್ಜು... ಇಂದೇ ಅನಾವರಣ!
80ರ ದಶಕದ ಐಕಾನಿಕ್ ಕೈನೆಟಿಕ್ ಬ್ರ್ಯಾಂಡ್, ಇಂದು (ಜುಲೈ 28, 2025) ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಕೈನೆಟಿಕ್ DX ಅನ್ನು ಅನಾವರಣಗೊಳಿಸುತ್ತಿರುವುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಈ ರೆಟ್ರೊ ಶೈಲಿಯ ಇ-ಸ್ಕೂಟರ್ 1980 ರ ದಶಕದ ಅದೇ ಕೈನೆಟಿಕ್ ಹೋಂಡಾ DX ನಿಂದ ಸ್ಫೂರ್ತಿ ಪಡೆದಿದ್ದು, ಆಧುನಿಕ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದೊಂದಿಗೆ ಕ್ಲಾಸಿಕ್ ವಿನ್ಯಾಸದ ಮಿಶ್ರಣದೊಂದಿಗೆ ಬರುವ ನಿರೀಕ್ಷೆಯಿದೆ. ಇಂದಿನ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಪೂರ್ಣ ತಾಂತ್ರಿಕ ವಿಶೇಷಣಗಳು, ರೇಂಜ್, ವೇರಿಯೆಂಟ್‌ಗಳು ಮತ್ತು ಬೆಲೆ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಹೊಸ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಗಳು
ಹೊಸ ಇವಿ ಸ್ಕೂಟರ್ 1980 ರ ದಶಕದ ಕೈನೆಟಿಕ್ ಹೋಂಡಾ ಡಿಎಕ್ಸ್‌ಗೆ ಗೌರವವನ್ನು ನೀಡುತ್ತದೆ, ಫ್ಲಾಟ್ ಫ್ರಂಟ್ ಏಪ್ರನ್, ವಿಶಿಷ್ಟ ಹ್ಯಾಂಡಲ್‌ಬಾರ್ ಕೌಲ್, ಅದೇ ಹೆಡ್‌ಲ್ಯಾಂಪ್/ಇಂಡಿಕೇಟರ್ ಕ್ಲಸ್ಟರ್ ಮತ್ತು ಬಹುತೇಕ ಹಳೆಯ ಮಾದರಿಗೆ ಹೋಲುವ ಸಿಲೂಯೆಟ್‌ನೊಂದಿಗೆ ಬರಲಿದೆ. ಆಧುನಿಕ ಸ್ಪರ್ಶಗಳಲ್ಲಿ ಬ್ಯಾಕ್‌ಲಿಟ್ ಕೈನೆಟಿಕ್ ಲೋಗೋ ಮತ್ತು ನಯವಾದ ಆಲ್-ಎಲ್ಇಡಿ ಟೈಲ್ ಲ್ಯಾಂಪ್ ಇರಲಿವೆ ಎನ್ನಲಾಗಿದೆ.

ಇದು ಹಬ್ - ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿರಲಿದ್ದು 1.8 kWh ನಿಂದ 3.5 kWh ವರೆಗಿನ ಬ್ಯಾಟರಿ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಇದರ ಗರಿಷ್ಠ ವೇಗ ಗಂಟೆಗೆ 80 ಕಿ.ಮೀ ತಲುಪುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಪ್ರತಿ ಚಾರ್ಜ್‌ಗೆ ಸುಮಾರು 100 ಕಿ.ಮೀ ರೇಂಜ್ ನೀಡುವ ಬಗ್ಗೆ ಈಗಾಗಲೇ ಕೆಲ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಹೊಸ ಎಲೆಕ್ಟ್ರಿಕ್ ಕೈನೆಟಿಕ್ DX ಸಮಕಾಲೀನ TFT ಅಥವಾ LCD ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಶೈನಿಂಗ್ ಲೋಗೋಗಳು ಮತ್ತು USB ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿರಲಿದೆ. ಮೂಲ ಸ್ಕೂಟರ್‌ನ ಪಾತ್ರವನ್ನು ಅನುಕರಿಸಲು ನಕಲಿ ಎಕ್ಸಾಸ್ಟ್ ಸೌಂಡ್ ಕೂಡ ಇರಲಿದೆ. ಇದು ಬಜಾಜ್ ಚೇತಕ್ ಮತ್ತು ಹೀರೋ ವಿಡಾ VX2 ನಂತಹ ಪ್ರತಿಸ್ಪರ್ಧಿಗಳಿಗೆ ಬಿಡುಗಡೆ ನಂತರ ನೇರ ಪೈಪೋಟಿ ನೀಡಲಿದೆ.

ಚಾಸಿಸ್ ಮತ್ತು ಹಾರ್ಡ್‌ವೇರ್ ಬಗ್ಗೆ ಹೇಳುವುದಾದ್ರೆ 12 - ಇಂಚಿನ ಚಕ್ರಗಳು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳು, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಅಲಾಯ್ ವೀಲ್‌ಗಳನ್ನು ನಿರೀಕ್ಷಿಸಬಹುದು. ಹೊಸ ಕೈನೆಟಿಕ್ DX ಆರಂಭಿಕ ಹಂತದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗುವ ಗುರಿಯನ್ನು ಹೊಂದಿದೆ.
ಇದರ ಎಕ್ಸ್-ಶೋರೂಂ ಬೆಲೆ ಸುಮಾರು ರೂ. 1 ಲಕ್ಷ ಎಂದು ಅಂದಾಜಿಸಲಾಗಿದೆ. ಕೈನೆಟಿಕ್ DX ನ ಮರು ಬಿಡುಗಡೆಯು ಭಾರತೀಯ ಸ್ಕೂಟರ್ ವಿಭಾಗದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆ ಇದೆ. ರೆಟ್ರೊ ಮೋಡಿ ಮತ್ತು ಪ್ರಾಯೋಗಿಕ ಎಲೆಕ್ಟ್ರಿಕ್ ಅವತಾರದೊಂದಿಗೆ ವಿಶಿಷ್ಟ ಮಿಶ್ರಣವನ್ನು ಹುಡುಕುತ್ತಿರುವ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳಿಗೆ ಇದು ಹೇಳಿಮಾಡಿಸಿದಂತೆ ಇರುತ್ತದೆ.
ಭಾರತದಲ್ಲಿನ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಫ್ಯೂಚರಿಸ್ಟಿಕ್ ಡಿಸೈನ್ ಹೊಂದಿವೆ. ಆದರೆ ರೆಟ್ರೊ ವಿನ್ಯಾಸವು ಕೈನೆಟಿಕ್ DX ಅನ್ನು ಇತರ ಇವಿಗಳಿಂದ ಪ್ರತ್ಯೇಕಿಸುತ್ತದೆ, ಇತರ ಇ-ಸ್ಕೂಟರ್‌ಗಳಲ್ಲಿ ಇದನ್ನು ತಕ್ಷಣವೇ ಗುರುತಿಸಬಹುದಾಗಿದೆ. ಹಾಗಾಗಿ ಹೊಸ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ ರೆಟ್ರೊ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸಲಿದೆ, ಅದರ ಮಾರಾಟವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಅಂಶಗಳನ್ನು ಗಮನಿಸಿದರೆ, ರೆಟ್ರೊ ವಿನ್ಯಾಸವು ಭಾವನಾತ್ಮಕ ಖರೀದಿದಾರರು ಮತ್ತು ವಿಶಿಷ್ಟ ಸ್ಕೂಟರ್ ಬಯಸುವ ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ. ಇದು ಸುಧಾರಿತ ಮಾರುಕಟ್ಟೆ ಮತ್ತು ಸಕಾರಾತ್ಮಕ ಮಾರಾಟದ ವೇಗಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಕೈನೆಟಿಕ್ DX ಮಾತ್ರವಲ್ಲದೆ ಕಂಪನಿಯು ಮುಂದಿನ 18 ತಿಂಗಳಲ್ಲಿ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.


Click it and Unblock the Notifications








