Luna: ಲೆಜೆಂಡರಿ ಲೂನಾ ಹೊಸ ಲುಕ್‌ನಲ್ಲಿ ಬಿಡುಗಡೆ: ವಿಶೇಷತೆಗಳೇನು?
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೈನೆಟಿಕ್ ಗ್ರೀನ್ (Kinetic Green) ಭಾರತದಲ್ಲಿ ಇ ಲೂನಾ ಪ್ರೈಮ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ದೇಶದ ಬೃಹತ್ ಪ್ರಯಾಣಿಕ ವಿಭಾಗವನ್ನು ಗುರಿಯಾಗಿಟ್ಟುಕೊಂಡು ಪ್ರಾಯೋಗಿಕ ಮತ್ತು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಿದೆ. ಬೆಲೆ ರೂ. 82,490 (ಎಕ್ಸ್ - ಶೋರೂಂ) ರಿಂದ ಪ್ರಾರಂಭವಾಗುವ ಇ ಲೂನಾ ಪ್ರೈಮ್ ಎರಡು ವೇರಿಯೆಂಟ್‌ಗಳಲ್ಲಿ ಬರುತ್ತದೆ. ವೈಯಕ್ತಿಕ ಪ್ರಯಾಣಿಕರು ಮತ್ತು ಸಣ್ಣ ವ್ಯವಹಾರಗಳಿಗೆ ಆರ್ಥಿಕ ಪರ್ಯಾಯವನ್ನು ಹುಡುಕುವ ಗ್ರಾಹಕರಿಗೆ ಸೂಕ್ತವಾಗಿರುತ್ತದೆ ಎಂದು ಕಂಪನಿ ಹೇಳಿದೆ.
ಎರಡು ವೇರಿಯೆಂಟ್‌ಗಳಲ್ಲಿ ಮೊದಲನೆಯದು ಸಿಂಗಲ್ ಚಾರ್ಜ್‌ನಲ್ಲಿ 110 ಕಿ.ಮೀ ಮತ್ತು ಎರಡನೇಯದು 140 ಕಿ.ಮೀನಷ್ಟು ರೇಂಜ್ ನೀಡುತ್ತವೆ. ದೈನಂದಿನ ಪ್ರಯಾಣ ಮತ್ತು ಸಣ್ಣ ವ್ಯವಹಾರ ವಿತರಣೆಗಳನ್ನು ಸುಲಭವಾಗಿ ಮತ್ತು ಕನಿಷ್ಠ ಚಾರ್ಜಿಂಗ್ ಡೌನ್‌ಟೈಮ್‌ನೊಂದಿಗೆ ನಿರ್ವಹಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಈ ಮೂಲಕ ಕೈನೆಟಿಕ್ ಗ್ರೀನ್ 100 ಸಿಸಿ ಮತ್ತು 110 ಸಿಸಿ ಪೆಟ್ರೋಲ್ ವಾಹನಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

ಈ ಎಲೆಕ್ಟ್ರಿಕ್ ಮೊಪೆಡ್ ಭಾರತೀಯ ರಸ್ತೆಗಳಿಗೆ ಸೂಕ್ತವಾದ ಬಾಳಿಕೆ ಬರುವ ನಿರ್ಮಾಣವನ್ನು ಹೊಂದಿದೆ, ಇದು ಬೈಕ್ ನ ಸ್ಥಿರತೆ ಮತ್ತು ಸವಾರಿ ಸೌಕರ್ಯವನ್ನು ಹೆಚ್ಚಿಸುವ 16 - ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ನ ಸೇರ್ಪಡೆಯು ರಾತ್ರಿಯಲ್ಲಿ ಉತ್ತಮ ಗೋಚರತೆಯನ್ನು ಖಚಿತಪಡಿಸುತ್ತದೆ. ಇದರ ಡಿಜಿಟಲ್ ಕಲರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಲ್ಲಾ ಅಗತ್ಯ ಸವಾರಿ ಮಾಹಿತಿಯನ್ನು ನೀಡುತ್ತದೆ.
ಸ್ಪೋರ್ಟಿ ಸಿಂಗಲ್ ಸೀಟ್ ಮತ್ತು ವಿಶಾಲವಾದ ಮುಂಭಾಗದ ಲೋಡಿಂಗ್ ಪ್ರದೇಶವನ್ನು ಉಪಯುಕ್ತತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಸರಕು, ದಿನಸಿ ಅಥವಾ ವಿತರಣಾ ಸರಕುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗಿದೆ. ಇ ಲೂನಾ ಪ್ರೈಮ್‌ನ ಪ್ರಮುಖ ಮುಖ್ಯಾಂಶವೆಂದರೆ ಅದರ ಕಡಿಮೆ ಮಾಲೀಕತ್ವದ ವೆಚ್ಚ, ಮಾಸಿಕ ಚಾಲನಾ ವೆಚ್ಚವು ರೂ. 2,500 ಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ.

ಅಂದರೆ ಆದರೆ E Luna ಪ್ರೈಮ್ ಪ್ರತಿ ಕಿಲೋಮೀಟರ್‌ಗೆ ಕೇವಲ 10 ಪೈಸೆಯ ಅತಿ ಕಡಿಮೆ ಚಾಲನಾ ವೆಚ್ಚ ಮತ್ತು ತಿಂಗಳಿಗೆ ಸುಮಾರು ರೂ. 2,500 (EMI ಮತ್ತು ಚಾಲನಾ ವೆಚ್ಚ) ಮಾಲೀಕತ್ವದ ಒಟ್ಟು ವೆಚ್ಚವನ್ನು ನೀಡುತ್ತದೆ. ಇದು ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗ ವೆಚ್ಚಗಳಲ್ಲಿ ಕೇವಲ ಒಂದು ಭಾಗವಷ್ಟೆ. ಗ್ರಾಹಕರು ದೀರ್ಘಾವಧಿಯ ಚಾಲನಾ ವೆಚ್ಚಗಳಲ್ಲಿ ವಾರ್ಷಿಕವಾಗಿ ರೂ. 60,000 ವರೆಗೆ ಉಳಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ವಿವರಿಸಿದೆ.
ಪೆಟ್ರೋಲ್‌ಗೆ ಹೋಲಿಸಿದರೆ ಕಡಿಮೆ ವಿದ್ಯುತ್ ವೆಚ್ಚದೊಂದಿಗೆ ಕಡಿಮೆ ನಿರ್ವಹಣೆಯ ಪ್ರಯೋಜನ ಇದರಲ್ಲಿ ಸೇರಿದೆ. ವೈವಿಧ್ಯಮಯ ಆದ್ಯತೆಗಳನ್ನು ಪೂರೈಸಲು, ಕೈನೆಟಿಕ್ ಗ್ರೀನ್ ಇ ಲೂನಾ ಪ್ರೈಮ್ ಅನ್ನು ಆರು ರೋಮಾಂಚಕ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ, ನಗರ ಮತ್ತು ಅರೆ-ನಗರ ಮಾರುಕಟ್ಟೆಗಳಿಗೆ ಆಧುನಿಕ, ಉಪಯುಕ್ತತೆ - ಪ್ಯಾಕ್ಡ್ ವಾಹನವಾಗಿ ಅದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಕಂಪನಿಯು ಬಲವಾದ ಮಾರಾಟದ ನಂತರದ ಬೆಂಬಲ ಮತ್ತು ಉತ್ಪನ್ನ ಲಭ್ಯತೆಯನ್ನು ಖಚಿತಪಡಿಸುತ್ತಾ, ದೇಶಾದ್ಯಂತ 300 ಕ್ಕೂ ಹೆಚ್ಚು ಔಟ್‌ಲೆಟ್‌ಗಳ ವಿಶಾಲ ಡೀಲರ್‌ಶಿಪ್‌ಗಳು ಗ್ರಾಹಕರ ಸೇವೆಯಲ್ಲಿವೆ. ಪ್ರಾಯೋಗಿಕ ವೈಶಿಷ್ಟ್ಯಗಳು, ಕೈಗೆಟುಕುವಿಕೆ ಮತ್ತು ಬಲವಾದ ಬೆಂಬಲದ ಮೇಲೆ ಕೇಂದ್ರೀಕರಿಸುವ ಮೂಲಕ, ಕೈನೆಟಿಕ್ ಗ್ರೀನ್ ಇ ಲೂನಾ ಪ್ರೈಮ್ ಗ್ರಾಹಕರಿಗೆ ಬಲವಾದ ಆಯ್ಕೆಯಾಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಸಾವಿರಾರು ತೃಪ್ತ ಗ್ರಾಹಕರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿರುವ ನಮ್ಮ ಇ - ಲೂನಾ ಸರಣಿಯ ಅದ್ಭುತ ಯಶಸ್ಸಿನ ಮೇಲೆ ನಿರ್ಮಿಸಲಾದ ಇ-ಲೂನಾ ಪ್ರೈಮ್, ನಾವೀನ್ಯತೆ ಮತ್ತು ಗ್ರಾಹಕ - ಕೇಂದ್ರಿತತೆಯ ನಮ್ಮ ಅನ್ವೇಷಣೆಯಲ್ಲಿ ಮಹತ್ವದ ಮುನ್ನಡೆಯನ್ನು ಪ್ರತಿನಿಧಿಸುತ್ತದೆ ಎಂದು ಕೈನೆಟಿಕ್ ಗ್ರೀನ್‌ನ ಸ್ಥಾಪಕಿ ಮತ್ತು ಸಿಇಒ ಡಾ. ಸುಲಜ್ಜ ಫಿರೋಡಿಯಾ ಮೋಟ್ವಾನಿ ಹೇಳಿದರು.


Click it and Unblock the Notifications