ಯುವಕರ ಹಾಟ್‌ಫೆವರೆಟ್ MY25 ಕವಾಸಕಿ ನಿಂಜಾ 300 ಬಿಡುಗಡೆ: ಹೊಸ ಅಪ್‌ಡೇಟ್ಸ್!
ಜಾಗತಿಕವಾಗಿ ಸ್ಪೋರ್ಟಿ ಮೋಟಾರ್‌ಸೈಕಲ್‌ಗಳ ತಯಾರಿಕೆಯಲ್ಲಿ ಜನಪ್ರಿಯತೆ ಪಡೆದಿರುವ ಕವಾಸಕಿ ಕಂಪನಿಯು ಮತ್ತೊಮ್ಮೆ ಭಾರತದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಈ ಭಾರೀ ತನ್ನ ನಿಂಜಾ 300 ನೊಂದಿಗೆ ಹೊಸ ಅಪ್‌ಡೇಟ್‌ಗಳನ್ನು ನೀಡಿ ಯುವಕರ ಗಮನ ಸೆಳೆಯಲು ಎಂಟ್ರಿಕೊಟ್ಟಿದೆ. ಹೌದು, ಕವಾಸಕಿ ಮೋಟಾರ್ಸ್ ಭಾರತದ ಅತ್ಯಂತ ಪ್ರಸಿದ್ಧ ಆರಂಭಿಕ ಮಟ್ಟದ ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾದ MY25 ನಿಂಜಾ 300 ಬೈಕ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕವಾಸಕಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಹೊಸ ಬೈಕ್ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.
MY25 ನವೀಕರಣವು ದೊಡ್ಡ ವಿಂಡ್‌ಶೀಲ್ಡ್, ನಿಂಜಾ ZX-6R ನಿಂದ ಪ್ರೇರಿತವಾದ ಹೊಸ ಪ್ರೊಜೆಕ್ಟರ್ ಹೆಡ್‌ಲೈಟ್ ಮತ್ತು ಸುಧಾರಿತ ಆನ್ - ರೋಡ್ ಸ್ಥಿರತೆಗಾಗಿ ಪರಿಷ್ಕೃತ ಟೈರ್ ಮಾದರಿಗಳೊಂದಿಗೆ ತನ್ನ ಸ್ಪೋರ್ಟಿ ಅಪ್‌ಡೇಟ್‌ಗಳನ್ನು ಪಡೆದು ಬಿಡುಗಡೆಯಾಗಿದೆ. ಈ ಹೊಸ ಸ್ಪೋರ್ಟಿ ಬೈಕ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

ಅಲ್ಯೂಮಿನಿಯಂ ಫುಟ್‌ಪೆಗ್‌ಗಳು, ಶಾರ್ಪ್ ಫೇರಿಂಗ್‌ಗಳು, ಫ್ಲೋಟಿಂಗ್ ವಿಂಡ್‌ಸ್ಕ್ರೀನ್ ಮತ್ತು ಬಹು-ಕಾರ್ಯಕಾರಿ ಉಪಕರಣ ಫಲಕದಂತಹ (multi-functional instrument panel) ಪ್ರಮುಖ ಅಂಶಗಳು ಇದಕ್ಕೆ ದೊಡ್ಡ ಯಂತ್ರದ ನೋಟ ಮತ್ತು ಅನುಭವವನ್ನು ನೀಡುತ್ತವೆ. ನಿಂಜಾ 300 "ಲೈಮ್ ಗ್ರೀನ್", "ಕ್ಯಾಂಡಿ ಲೈಮ್ ಗ್ರೀನ್", "ಮೆಟಾಲಿಕ್ ಮೂನ್‌ಡಸ್ಟ್ ಗ್ರೇ" ಎಂಬ 3 ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 3,43,000 (ಎಕ್ಸ್-ಶೋರೂಮ್) ನಿಂದ ಪ್ರಾರಂಭವಾಗುತ್ತದೆ.
ಈ ವಿಶೇಷ ಬೈಕ್‌ನ ಬಿಡುಗಡೆಯು ಜಾಗತಿಕವಾಗಿ ನಿಂಜಾ ಸಿರೀಸ್‌ನ 42 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಇದು 1984 ರಲ್ಲಿ ನಿಂಜಾ 900 (GPz900R) ಪರಿಚಯದೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ನಿಂಜಾ ಸರಣಿಯು ಸ್ಪೋರ್ಟ್ ಮೋಟಾರ್ ಸೈಕಲ್ ವರ್ಗದಲ್ಲಿ ಕವಾಸಕಿಯ ಪ್ರಾಬಲ್ಯದ ಆರಂಭವನ್ನು ತೋರಿಸುತ್ತದೆ. ಲಿಕ್ವಿಡ್-ಕೂಲ್ಡ್, 16-ವಾಲ್ವ್ ಎಂಜಿನ್ ಮತ್ತು ಏರೋಡೈನಮಿಕ್ ವಿನ್ಯಾಸದಂತಹ ಹೊಸ ತಂತ್ರಜ್ಞಾನಗಳೊಂದಿಗೆ, ನಿಂಜಾ 900 ಜಾಗತಿಕ ಐಕಾನ್ ಆಗಿ ಮಾರ್ಪಟ್ಟಿದೆ.

ದಶಕಗಳಲ್ಲಿ, ನಿಂಜಾ ಬ್ರ್ಯಾಂಡ್ ನಿಂಜಾ 250R ಮತ್ತು ನಿಂಜಾ 300 ನಂತಹ ಹಗುರವಾದ ಸೂಪರ್ ಸ್ಪೋರ್ಟ್ ಬೈಕ್‌ಗಳಿಂದ ಹಿಡಿದು ನಿಂಜಾ ZX-10R ಮತ್ತು ನಿಂಜಾ H2 ನಂತಹ ಟ್ರ್ಯಾಕ್ - ಪ್ರಾಬಲ್ಯದ ಹೈಪರ್ ಸ್ಪೋರ್ಟ್ ಮೋಟಾರ್‌ಸೈಕಲ್‌ಗಳವರೆಗೆ ಹೈ
ಪರ್ಫಾಮೆನ್ಸ್ ಬೈಕ್‌ಗಳ ಸಂಪೂರ್ಣ ಕುಟುಂಬವಾಗಿ ವಿಕಸನಗೊಂಡಿದೆ.
ಇಲ್ಲಿ ಹೇಳಲಾಗಿರುವ ಪ್ರತಿಯೊಂದು ಮಾಡಲ್ ನಿಂಜಾ ಹೆಸರನ್ನು ವ್ಯಾಖ್ಯಾನಿಸುವ ಪರ್ಫಾಮೆನ್ಸ್, ನಾವೀನ್ಯತೆ ಮತ್ತು ಆಕ್ರಮಣಕಾರಿ ಡೀಸೈನ್ ಹೊತ್ತು ಮುಂದಕ್ಕೆ ಸಾಗುತ್ತಿದೆ. 2012ರ ನಂತರ ಭಾರತದಲ್ಲಿ ಬಿಡುಗಡೆಯಾದ ನಿಂಜಾ 300, ಅದರ ಟ್ವಿನ್-ಸಿಲಿಂಡರ್ ಎಂಜಿನ್, ರೇಸ್ - ಪ್ರೇರಿತ ಡಿಸೈನ್ ಮತ್ತು ಸಂಸ್ಕರಿಸಿದ ಸವಾರಿ ಗುಣಮಟ್ಟದೊಂದಿಗೆ 300 ಸಿಸಿ ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿತು.

ಇದು ಕವಾಸಕಿಯ ಮೋಟಾರ್‌ಸ್ಪೋರ್ಟ್ ಡಿಎನ್‌ಎಯೊಂದಿಗೆ ಸಂಯೋಜಿಸಲ್ಪಟ್ಟ ದೈನಂದಿನ ಉಪಯುಕ್ತತೆಯನ್ನು ನೀಡಿತು. ಇದೀಗ MY25 ನವೀಕರಣವು ಹೊಸ ಪೀಳಿಗೆಯ ರೈಡರ್‌ಗಳಿಗಾಗಿ ಈ ವಿಕಸನವನ್ನು ಮುಂದುವರಿಸಲಿದೆ. ಐಕಾನಿಕ್ "ಮಾಸ್ ಫಾರ್ವರ್ಡ್, ಮಿನಿಮಲಿಸ್ಟ್ - ಟೈಲ್" ವಿನ್ಯಾಸದ ಥೀಮ್ ಅನ್ನು ಹೊಂದಿರುವ ನಿಂಜಾ 300 ನಿಸ್ಸಂದಿಗ್ಧವಾದ ಡಿಸೈನ್ ಪ್ರತಿಬಿಂಬಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








