Ola Roadster X: ಸ್ಪ್ಲೆಂಡರ್‌ಗೆ ಶುರುವಾಯ್ತು ಭೀತಿ.. ಓಲಾದ ಮೊದಲ 'ರೋಡ್‌ಸ್ಟರ್ ಎಕ್ಸ್' ಇ-ಬೈಕ್ ಬಿಡುಗಡೆ, ಬೆಲೆ ಇಷ್ಟೇನಾ?
ಬೆಂಗಳೂರಿನ ಓಲಾ ಎಲೆಕ್ಟ್ರಿಕ್ (Ola Electric), ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ (Two Wheeler) ಕಂಪನಿಯಾಗಿದ್ದು, ಭಾರೀ ಜನಪ್ರಿಯತೆಯನ್ನು ಗಳಿಸಿದೆ. ದೇಶೀಯವಾಗಿ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಮೂಲಕ ಅಬ್ಬರಿಸುತ್ತಿದೆ. ಇದೀಗ, ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಅಧಿಕೃತವಾದ ಪ್ರವೇಶಿಸಿದ್ದು, ಹೊಚ್ಚ ಹೊಸ 'ರೋಡ್‌ಸ್ಟರ್ ಎಕ್ಸ್' ಇ-ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಈ ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಭಾರತದ ಮಾರುಕಟ್ಟೆಗೆ ಹೊಸ ಓಲಾ ರೋಡ್‌ಸ್ಟರ್ ಎಕ್ಸ್ (Ola Roadster X) ಎಲೆಕ್ಟ್ರಿಕ್ ಬೈಕ್‌ನ್ನು ಎರಡು ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಅವುಗಳೆಂದರೆ, ರೋಡ್‌ಸ್ಟರ್ ಎಕ್ಸ್ (Roadster X) ಮತ್ತು ರೋಡ್‌ಸ್ಟರ್ ಎಕ್ಸ್ ಪ್ಲಸ್ (Roadster X).

ಸ್ಟ್ಯಾಂಡರ್ಡ್ ಓಲಾ ರೋಡ್‌ಸ್ಟರ್ ಎಕ್ಸ್ ಇ-ಮೋಟಾರ್‌ಸೈಕಲ್ ಮಾಡೆಲ್, ಶಕ್ತಿಯುತವಾದ 2.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 4.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಕ್ರಮವಾಗಿ ರೂ.75,000, ರೂ.85,000 ಮತ್ತು ರೂ.95,000 (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ.
ಹೊಸ ಓಲಾ ರೋಡ್‌ಸ್ಟರ್ ಎಕ್ಸ್ ಇ-ಮೋಟಾರ್‌ಸೈಕಲ್, ಭರ್ತಿ ಚಾರ್ಜ್‌ನಲ್ಲಿ 252 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 11 ಕೆಡಬ್ಲ್ಯೂ ಪೀಕ್ ಪವರ್ ಉತ್ಪಾದಿಸುತ್ತದೆ. ಇಕೋ, ನಾರ್ಮಲ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರೊಟ್ಟಿಗೆ ರಿವರ್ಸ್ ಮೋಡ್‌ನ್ನು ತನ್ನದಾಗಿಸಿಕೊಂಡಿದೆ.

ನೂತನ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಬೈಕ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, ಆಲ್-ಎಲ್ಇಡಿ ಲ್ಯಾಂಪ್ಸ್, ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ (4.3-ಇಂಚು), ಓಲಾ ಮ್ಯಾಪ್ ನ್ಯಾವಿಗೇಷನ್ (ಟರ್ನ್- ಬೈ-ಟರ್ನ್), ಕ್ರೂಸ್ ಕಂಟ್ರೋಲ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಒಟಿಎ ಅಪ್‌ಡೇಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಓಲಾ ರೋಡ್‌ಸ್ಟರ್ ಎಕ್ಸ್ ಇ-ಮೋಟಾರ್‌ಸೈಕಲ್, ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್ಸ್ & ಡುಯಲ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಡಿಸ್ಕ್ ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಇದರೊಟ್ಟಿಗೆ ಹೆಚ್ಚುವರಿಯಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಬ್ರೇಕ್-ಬೈ-ವೈರ್ ಸಿಸ್ಟಮ್‌ನ್ನು ಪಡೆದಿದೆ.

ಓಲಾ ರೋಡ್‌ಸ್ಟರ್ ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಬೈಕ್ ಮಾಡೆಲ್, 4.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 9.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಕ್ರಮವಾಗಿ ರೂ.1,04,999 ಮತ್ತು 1,54,999 ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 501 ಕಿಲೋಮೀಟರ್‌ವರೆಗೂ ಓಡುತ್ತದೆ.
ಒಟ್ಟಾರೆಯಾಗಿ ಓಲಾ ರೋಡ್‌ಸ್ಟರ್ ಎಕ್ಸ್ ಇ-ಮೋಟಾರ್‌ಸೈಕಲ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇಂದಿನಿಂದಲೇ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಮುಂದಿನ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. ಸದ್ಯ ಘೋಷಣೆ ಮಾಡಲಾಗಿರುವ ದರಗಳು 7 ದಿನಗಳವರೆಗೆ ಮಾತ್ರ ಮಾನ್ಯವಾಗಿರಲಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್‌ಗೆ ಯಾವುದೇ ದೊಡ್ಡ ಕಂಪನಿಯ ಇ-ಮೋಟಾರ್‌ಸೈಕಲ್‌ಗಳಿಂದ ನೇರವಾದ ಪೈಪೋಟಿ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








