Ola: ಸಿಂಗಲ್‌ ಚಾರ್ಜ್‌ಗೆ 500 ಕಿ.ಮೀ ಓಡುವ ಓಲಾ ಬೈಕ್ ಬಿಡುಗಡೆ... ವಿಶೇಷತೆಗಳೇನು?

ಓಲಾ ಎಲೆಕ್ಟ್ರಿಕ್ ಇಂದು ತನ್ನ ರೋಡ್‌ಸ್ಟರ್ ಎಕ್ಸ್ (Roadster X) ಸರಣಿಯನ್ನು ಬಿಡುಗಡೆ ಮಾಡುವುದರೊಂದಿಗೆ ಇವಿ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶವನ್ನು ಘೋಷಿಸಿದೆ. ಕಂಪನಿಯ ಸ್ಕೇಲೆಬಲ್ ಮೋಟಾರ್‌ಸೈಕಲ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ, ಹೊಸ ರೋಡ್‌ಸ್ಟರ್ ಎಕ್ಸ್ ಸರಣಿಯನ್ನು ರೋಡ್‌ಸ್ಟರ್ ಎಕ್ಸ್‌ ಹಾಗೂ ರೋಡ್‌ಸ್ಟರ್ ಎಕ್ಸ್‌ ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಈ ಎರಡೂ ವೇರಿಯೆಂಟ್‌ಗಳು ವಿವಿಧ ಬ್ಯಾಟರಿ ಆಯ್ಕೆಗಳನ್ನು ಸಹ ಹೊಂದಿವೆ.

ಬ್ಯಾಟರಿ ಆಯ್ಕೆ ಮತ್ತು ಬೆಲೆ: 2.5 ಕಿ.ವ್ಯಾಟ್ ಹೊಂದಿರುವ ರೋಡ್‌ಸ್ಟರ್ ಎಕ್ಸ್ ಬೆಲೆಯು ರೂ.74,999, 3.5 ಕಿ.ವ್ಯಾಟ್ ಬ್ಯಾಟರಿ ಹೊಂದಿರುವ ವಾಹನವು ರೂ.84,999 ಮತ್ತು 4.5 ಕಿ.ವ್ಯಾಟ್ ಬ್ಯಾಟರಿಯ ವಾಹನವು ರೂ.94,999 (ಎಲ್ಲವು ಎಕ್ಸ್‌ ಶೋರೂಂ ಬೆಲೆಗಳು). ಹಾಗೆಯೇ ರೋಡ್‌ಸ್ಟರ್ ಎಕ್ಸ್ ಪ್ಲಸ್ ವೇರಿಯೆಂಟ್ ವಿಷಯಕ್ಕೆ ಬಂದರೆ 4.5 ಕಿ.ವ್ಯಾಟ್, 9.1 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ.

new-ola-roadster-x-electric-motorcycle-price-and-battery-details

ರೋಡ್‌ಸ್ಟರ್ ಎಕ್ಸ್ + 4.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನ ರೂ.1,04,999 ಮತ್ತು ರೋಡ್‌ಸ್ಟರ್ ಎಕ್ಸ್ + 9.1 ಕಿ.ವ್ಯಾಟ್ ವಾಹನವು (4680 ಭಾರತ್ ಸೆಲ್‌ನೊಂದಿಗೆ) ರೂ. 1,54,999 (ಎಲ್ಲವು ಎಕ್ಸ್‌ ಶೋರೂಂ) ಬೆಲೆಯಿದೆ. 9.1 ಕಿ.ವ್ಯಾಟ್ ವಾಹನವು ಪ್ರತಿ ಚಾರ್ಜ್‌ಗೆ 501 ಕಿ.ಮೀ ರೇಂಜ್ ನೀಡುತ್ತದೆ. ಈ ವಾಹನಗಳು 3 ವರ್ಷ ಅಥವಾ 50,000 ಕಿ.ಮೀ. ಖಾತರಿಯೊಂದಿಗೆ ಬರುತ್ತವೆ.

ರೋಡ್‌ಸ್ಟರ್ ಸರಣಿಯು ಮೋಟಾರ್‌ಸೈಕಲ್ ಸಿಂಗಲ್ ABS ನೊಂದಿಗೆ ಬ್ರೇಕ್-ಬೈ-ವೈರ್ ತಂತ್ರಜ್ಞಾನ ಮತ್ತು ಸುಧಾರಿತ ರೀಜೆನ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್‌ನಂತಹ ಸ್ಮಾರ್ಟ್ ಮೂವ್‌ಓಎಸ್ 5 ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು IP67 ಜಲ ಮತ್ತು ಧೂಳು-ನಿರೋಧಕ ತಂತ್ರಜ್ಞಾನದೊಂದಿಗಿನ ಬ್ಯಾಟರಿ ನಿರ್ವಹಣಾ ವ್ಯವಸ್ಥೆ (BMS) ಯನ್ನು ಹೊಂದಿದೆ.

new-ola-roadster-x-electric-motorcycle-price-and-battery-details

ರೋಡ್‌ಸ್ಟರ್ ಎಕ್ಸ್ ವೈಶಿಷ್ಟ್ಯಗಳು: ರೋಡ್‌ಸ್ಟರ್ ಎಕ್ಸ್ 2.5kWh ಬ್ಯಾಟರಿಯ ವಾಹನವು ಟಾಪ್‌ ಸ್ಪೀಡ್ ಗಂಟೆಗೆ 105 ಕಿ.ಮೀ ಇದ್ದರೇ, 3.5kWh ಮತ್ತು 4.5kWh ಬ್ಯಾಟರಿ ವಾಹನಗಳು ಗಂಟೆಗೆ 118 ಕಿ.ಮೀ ಟಾಪ್ ಸ್ಪೀಡ್ ಹೊಂದಿವೆ. ಈ ಮೋಟಾರ್‌ ಸೈಕಲ್‌ಗಳು ಸಿಂಗಲ್‌ ಚಾರ್ಜ್‌‌ನಲ್ಲಿ (2.5kWh, 3.5kWh ಮತ್ತು 4.5kWh) ಕ್ರಮವಾಗಿ 140 ಕಿ.ಮೀ, 196 ಕಿ.ಮೀ ಮತ್ತು 252 ಕಿ.ಮೀ (IDC) ರೇಂಜ್ ಹೊಂದಿವೆ.

ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ. ಸ್ಮಾರ್ಟ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಹೊಂದಿರುವ 4.3" ಎಲ್‌ಸಿಡಿ ಕಲರ್ ಡಿಸ್ಪ್ಲೇ, ಮೂವ್‌ಓಎಸ್ 5 ನಿಂದ ಚಾಲಿತವಾಗಿದ್ದು, ಇಂಡಸ್ಟ್ರಿಯಲ್ ಸಿವರ್, ಆಂಥ್ರಾಸೈಟ್, ಸ್ಟೆಲ್ಲರ್ ಬ್ಲೂ, ಪೈನ್ ಗ್ರೀನ್ ಮತ್ತು ಸೆರಾಮಿಕ್ ವೈಟ್ ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

new-ola-roadster-x-electric-motorcycle-price-and-battery-details

ರೋಡ್‌ಸ್ಟರ್ ಎಕ್ಸ್ ಪ್ಲಸ್ ವೈಶಿಷ್ಟ್ಯಗಳು: ಇದು 11kW ಮೋಟಾರ್‌ನಿಂದ ಚಾಲಿತವಾಗಿದ್ದು, 125km/h ಟಾಪ್‌ ಸ್ಪೀಡ್ ಹೊಂದಿದೆ. ರೋಡ್‌ಸ್ಟರ್ ಎಕ್ಸ್ ಪ್ಲಸ್‌ನ 4.5kWh ಬ್ಯಾಟರಿಯ ವಾಹನವು ಸಿಂಗಲ್‌ ಚಾರ್ಜ್‌ನಲ್ಲಿ 252 ಕಿ.ಮೀ ರೇಂಜ್ ನೀಡಿದ್ರೆ, 9.1kWh ಬ್ಯಾಟರಿ ಹೊಂದಿರುವ ವಾಹನವು 501 ಕಿ.ಮೀ ಪ್ರಭಾವಶಾಲಿ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. USB ಜೊತೆಗೆ 4.3" ಸೆಗ್ಮೆಂಟೆಡ್ LCD ಸ್ಕ್ರೀನ್, MoveOS 5, ಸುಧಾರಿತ ರೀಜೆನ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್‌ನಂತಹ ವ್ಯಾಪಕ ಶ್ರೇಣಿಯ ಡಿಜಿಟಲ್ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದೆ. ರೋಡ್‌ಸ್ಟರ್ X+ ಇಂಡಸ್ಟ್ರಿಯಲ್ ಸಿಲ್ವರ್, ಆಂಥ್ರಾಸೈಟ್, ಸ್ಟೆಲ್ಲರ್ ಬ್ಲೂ, ಪೈನ್ ಗ್ರೀನ್ ಮತ್ತು ಸೆರಾಮಿಕ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

More from DriveSpark

Article Published On: Thursday, February 6, 2025, 10:00 [IST]
English summary
New ola roadster x electric motorcycle price and battery details
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+