Ola: ಹೊಸ ಓಲಾ ಎಸ್1 ಜೆನ್ 3 ಇ-ಸ್ಕೂಟರ್‌ಗಳು ಬಿಡುಗಡೆ.. 79,999 ಬೆಲೆ.. 320 ಕಿಲೋಮೀಟರ್‌ವರೆಗೆ ರೇಂಜ್!

ಓಲಾ ಎಲೆಕ್ಟ್ರಿಕ್ (Ola Electric), ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಶುಕ್ರವಾರ ನವೀಕರಿಸಿದ 3ನೇ ತಲೆಮಾರಿನ ಹೊಚ್ಚ ಹೊಸ 'ಎಸ್1' ಸೀರೀಸ್ ಇ-ಸ್ಕೂಟರ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತಿ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿವೆ. ಈ ದರಗಳು ಫೆಬ್ರವರಿ 8ಕ್ಕೆ ಮಾತ್ರ ಮಾನ್ಯವಾಗಿರಲಿದ್ದು, ಶೀಘ್ರದಲ್ಲಿಯೇ ಈ ಸ್ಕೂಟರ್‌ಗಳ ವಿತರಣೆಗಳು ಕೂಡ ಶುರುವಾಗಲಿದೆ. ಬನ್ನಿ.. 'ಓಲಾ ಎಸ್1 ಜೆನ್ 3' ಮಾಡೆಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

ಓಲಾ ಎಸ್1 ಎಕ್ಸ್ (Ola S1X): ಇದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಮೂರು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಇದರ 2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ರೂ.79,999 (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 108 ಕಿಲೋಮೀಟರ್ ಓಡುತ್ತದೆ. 101 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

New Ola S1 Gen 3 Scooters Launched In India Rs 79 999 Starting Price Range Upto 320 Km Details

3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ರೂ.89,999 ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 176 ಕಿಲೋಮೀಟರ್ (ಐಡಿಸಿ) ರೇಂಜ್ (ಮೈಲೇಜ್) ನೀಡುತ್ತದೆ.113 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ರೂ.99,999 ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 242 ಕಿಲೋಮೀಟರ್ ಓಡುತ್ತದೆ. 123 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಓಲಾ ಎಸ್1 ಎಕ್ಸ್ ಸ್ಕೂಟರ್ ವಿಶೇಷತೆಗಳೇನು: ಈ ಎಲೆಕ್ಟ್ರಿಕ್ ಸ್ಕೂಟರ್ ಮಾಡೆಲ್‌ಗಳು, ಸ್ಟ್ಯಾಂಡರ್ಡ್ ಆಗಿ ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್ ಹಾಗೂ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿವೆ. ಇದರೊಟ್ಟಿಗೆ ವೈಟ್, ಬ್ಲ್ಯೂ, ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಎಂಬ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಸಿಗಲಿವೆ.

New Ola S1 Gen 3 Scooters Launched In India Rs 79 999 Starting Price Range Upto 320 Km Details

ಓಲಾ ಎಸ್1 ಎಕ್ಸ್ ಪ್ಲಸ್ (Ola S1 X+): ಈ ಎಲೆಕ್ಟ್ರಿಕ್ ಸ್ಕೂಟರ್, ರೂ.1,07,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದರಲ್ಲಿ 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಮತ್ತು 11 ಕೆಡಬ್ಲ್ಯೂ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್‌ನ್ನು ಬಳಕೆ ಮಾಡಲಾಗಿದೆ. ಜೊತೆಗೆ ಸಂಪೂರ್ಣ ಚಾರ್ಜ್‌ನಲ್ಲಿ 242 ಕಿಲೋಮೀಟರ್ ಕ್ರಮಿಸುತ್ತದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಓಲಾ ಎಸ್1 ಪ್ರೊ: (Ola S1 Pro): ಇದರ 3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ರೂ.1,14,999 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 176 ಕಿಲೋಮೀಟರ್ ಓಡುತ್ತದೆ. 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ರೂ.1,34,999 ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 242 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

New Ola S1 Gen 3 Scooters Launched In India Rs 79 999 Starting Price Range Upto 320 Km Details

ಓಲಾ ಎಸ್1 ಪ್ರೊ ಪ್ಲಸ್ (Ola S1 Pro+): ಈ ಎಲೆಕ್ಟ್ರಿಕ್ ಸ್ಕೂಟರ್‌ನ 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದುರುವ ಮಾಡೆಲ್, ರೂ.1,54,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 242 ಕಿಲೋಮೀಟರ್ ಕ್ರಮಿಸುತ್ತದೆ. 141 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 5.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ರೂ.1,69,999 ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 320 ಕಿಲೋಮೀಟರ್‌ ರೇಂಜ್ ಕೊಡುತ್ತದೆ.

ಓಲಾ ಎಸ್1 ಪ್ರೊ ಪ್ಲಸ್ ಸ್ಕೂಟರ್ ವಿಶೇಷತೆಗಳೇನು: ಇದರ ಮಾಡೆಲ್‌ಗಳು, ಬ್ರೇಕ್-ಬೈ-ವೈರ್ ಟೆಕ್ನಾಲಜಿಯನ್ನು ಹೊಂದಿವೆ. ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿವೆ. ಹೈಪರ್, ಸ್ಪೋರ್ಟ್, ನಾರ್ಮಲ್ & ಇಕೋ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, ಪೋರ್ಸಲೇನ್ ವೈಟ್, ಮಿಡ್‌ನೈಟ್ ಬ್ಲೂ, ಪ್ಯಾಶನ್ ರೆಡ್ ಮತ್ತು ಇಂಡಸ್ಟ್ರಿಯಲ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತವೆ.

ಇನ್ನು, ಹೊಸ ಓಲಾ ಎಸ್1 ಜೆನ್ 3 ಇ-ಸ್ಕೂಟರ್‌ಗಳು ಮಾರಾಟಕ್ಕೆ ಬಂದಿರುವುದು ಗ್ರಾಹಕರಿಗೆ ಖುಷಿ ನೀಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ಸಮಾರಂಭದಲ್ಲಿಯೇ 'ಮೂವ್ ಒಎಸ್5 ಬೀಟಾ ವರ್ಷನ್'ನ್ನು ಸಹ ಪರಿಚಯಿಸಲಾಗಿತು. ಇದರೊಟ್ಟಿಗೆ 'ರೋಡ್‌ಸ್ಟರ್ ಎಕ್ಸ್' ಎಲೆಕ್ಟ್ರಿಕ್ ಮೋಟಾರ್‌ಬೈಕ್‌ನ್ನು ಫೆ.5ರಂದು ಬಿಡುಗಡೆಗೊಳಿಸುವುದಾಗಿ ಕಂಪನಿಯು ಅಧಿಕೃತವಾಗಿ ಘೋಷಣೆಯನ್ನು ಮಾಡಿತು.

More from DriveSpark

Article Published On: Friday, January 31, 2025, 13:21 [IST]
English summary
New ola s1 gen 3 scooters launched in india rs 79999 starting price range upto 320 km details
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+