ನಿನ್ನೆಯಷ್ಟೇ ಬಿಡುಗಡೆ: ಅಗ್ಗದ ಹೊಸ Royal Enfield ಬೈಕ್ ಕುರಿತ ಪ್ರಮುಖಾಂಶಗಳಿವು.. ಯಾರು ಹೇಳಲ್ಲ!

ನಿನ್ನೆಯಷ್ಟೇ 2025ರ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 (Royal Enfield Meteor 350) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಗಿದೆ. ಇದನ್ನು ಸ್ವಲ್ಪ ಮಟ್ಟಿಗೆ ನವೀಕರಿಸಲಾಗಿದ್ದು, ಯುವ ಗ್ರಾಹಕರನ್ನು ಸೆಳೆಯುವಂತಹ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಬಜೆಟ್ ದರದಲ್ಲೂ ಬಿಡುಗಡೆಗೊಂಡಿದೆ. ನಾವಿಲ್ಲಿ ಈ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು (Price & variants):

ನೂತನ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಮೋಟಾರ್‌ಸೈಕಲ್‌ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಕನಿಷ್ಠ ರೂ.1.95 ಲಕ್ಷ ಹಾಗೂ ಗರಿಷ್ಠ ರೂ.2.15 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಫೈರ್‌ಬಾಲ್, ಸ್ಟೆಲ್ಲಾರ್, ಅರೋರಾ ಮತ್ತು ಸೂಪರ್‌ನೋವಾ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್ 22 ರಿಂದ ವಿತರಣೆಗಳು ಪ್ರಾರಂಭವಾಗಲಿದೆ ಎಂದು ಕಂಪನಿಯು ಹೇಳಿದೆ.

New Royal Enfield Meteor 350 Bike Top Things Details

ವಿನ್ಯಾಸ & ಬಣ್ಣಗಳು (Design & Colors):

ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಉತ್ತಮವಾದ ಬಾಡಿ ಪ್ಯಾನೆಲ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಫೈರ್‌ಬಾಲ್ ಆರೆಂಜ್, ಫೈರ್‌ಬಾಲ್ ಗ್ರೇ, ಸ್ಟೆಲ್ಲಾರ್ ಮ್ಯಾಟ್ ಗ್ರೇ, ಸ್ಟೆಲ್ಲಾರ್ ಮೆರೈನ್ ಬ್ಲೂ, ಅರೋರಾ ರೆಟ್ರೊ ಗ್ರೀನ್ ಮತ್ತು ಅರೋರಾ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಸುತ್ತಳತೆ (Dimensions):

ಈ ಬೈಕ್ ಸಾಕಷ್ಟು ವಿಶಾಲವಾಗಿದೆ. 2,140 ಎಂಎಂ ಉದ್ದ, 845 ಎಂಎಂ ಅಗಲ ಮತ್ತು 1,140 ಎಂಎಂ ಎತ್ತರ ಕೂಡ ಇದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ & 1,400 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 191 ಕೆಜಿ ತೂಕವಿದೆ.

ಕಾರ್ಯಕ್ಷಮತೆ (Performance):

ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಮೋಟಾರ್‌ಸೈಕಲ್‌ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 349 ಸಿಸಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 20.2 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 35 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು ಎನ್ನಲಾಗಿದೆ. 15 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. 120 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ವೈಶಿಷ್ಟ್ಯಗಳು (Features):

ಈ ಬೈಕ್ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌‍ಬಿ ಟೈಪ್-ಸಿ ಫಾಸ್ಟ್-ಚಾರ್ಜಿಂಗ್ ಪೋರ್ಟ್, ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಇದರ ಸೀಟ್ ಎತ್ತರ 765 ಎಂಎಂ ಇದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ನೂತನ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಮೋಟಾರ್‌ಸೈಕಲ್‌ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಟ್ವಿನ್ ಟ್ಯೂಬ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಪರ್ಯಾಯ ಬೈಕ್‌ಗಳಿವು (Alternative Bikes):

ಇದಕ್ಕೆ ಸಾಲು ಸಾಲು ಪ್ರತಿಸ್ಪರ್ಧಿಗಳಿವೆ. ಗ್ರಾಹಕರು ಹೋಂಡಾ ಸಿಬಿ350, ಜಾವಾ 350, ಬೆನೆಲ್ಲಿ ಇಂಪೀರಿಯಲ್ 400, ಹಾರ್ಲೆ ಡೇವಿಡ್ಸನ್ ಎಕ್ಸ್440, ಜಾವಾ 42 ಬಾಬರ್ ಹಾಗೂ ಟ್ರಯಂಫ್ ಸ್ಪೀಡ್ 400 ಮೋಟಾರ್‌ಸೈಕಲ್‌ಗಳನ್ನು ಬದಲಿ ಆಯ್ಕೆಯಾಗಿ ಪರಿಗಣಿಸಬಹುದು.

More from DriveSpark

Article Published On: Tuesday, September 16, 2025, 10:33 [IST]
English summary
New royal enfield meteor 350 bike top things details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+