Tata Electric Scooter: 200 ಕಿ.ಮೀ ರೇಂಜ್.. ಕಡಿಮೆ ಬೆಲೆಗೆ ಟಾಟಾದಿಂದ ಹೊಸ ಇ-ಸ್ಕೂಟರ್ ಬಿಡುಗಡೆಯಾಗುತ್ತಾ?

ದಿವಂಗತ ರತನ್ ಟಾಟಾ (Ratan Tata) ಮಾಲೀಕತ್ವದ ಟಾಟಾ ಮೋಟಾರ್ಸ್ (Tata motors), ಸುರಕ್ಷಿತ ಕಾರು ಮಾರಾಟಕ್ಕೆ ಹೆಸರುವಾಗಿದೆ. ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಭಾರೀ ವೈರಲ್ ಆಗುತ್ತದೆ. ಟಾಟಾ ಕಂಪನಿಯು ಇದೇ ಆಗಸ್ಟ್ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಹಾಗೂ ಬಜಾಜ್ ಆಟೋ (Bajaj Auto) ಕಂಪನಿಗಳಿಗೆ ಪ್ರಬಲವಾದ ಸ್ಪರ್ಧಿಯೊಡ್ಡಲು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಬಿಡುಗಡೆಗೊಳಿಸಲಿದೆ ಎನ್ನಲಾಗುತ್ತಿದೆ.

ಈ ಪೋಸ್ಟ್‌ನಲ್ಲಿ ಟಾಟಾದ ಮುಂಬರಲಿರುವ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದನ್ನು ಕೂಡ ವಿವರಿಸಲಾಗಿದೆ. ನೂತನ ಇ-ಸ್ಕೂಟರ್ ಫುಲ್ ಡಿಜಿಟಲ್ ಡ್ಯಾಶ್‌ಬೋರ್ಡ್, ಎಲ್ಇಡಿ ಹೆಡ್‌ಲೈಟ್‌ಗಳು, ಟೈಲ್ ಲ್ಯಾಂಪ್‌ಗಳು, ಅಲಾಯ್ ವೀಲ್‌ಗಳು, ಟ್ಯೂಬ್‌ ಲೆಸ್ ಟೈರ್‌ಗಳು, ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್ & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

New Tata Electric Scooter Launch soon Real or Rumour details

ಟಾಟಾದ ಹೊಸ ಇ-ಸ್ಕೂಟರ್ 3.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದುಕೊಂಡಿರಲಿದ್ದು, ಸಿಂಗಲ್ ಚಾರ್ಜ್‌ನಲ್ಲಿ 200 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ ಎನ್ನಲಾಗುತ್ತಿದೆ. ಜೊತೆಗೆ ರೂ.1 ಲಕ್ಷದಿಂದ ರೂ.1.2 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಸಹ ಆ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ವಿಶೇಷವಾಗಿ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣ ಬಳಕೆದಾರು ಕೂಡ ನಕಾರತ್ಮಕವಾಗಿ ಪ್ರತಿಕ್ರಿಯೆ ನೀಡಿಲ್ಲ. ಆಶ್ಚರ್ಯಚಕಿತ ರೀತಿಯಲ್ಲಿ ಸಕಾರಾತ್ಮಕ ಕಾಮೆಂಟ್‌ಗಳೇ ಬಂದಿವೆ. ಆದರೆ, ಇದು ಸುಳ್ಳು ಪೋಸ್ಟ್‌ ಆಗಿದ್ದು, ಆಧಾರರಹಿತ ಉಹಾಪೋಹವಾಗಿದೆ. ಟಾಟಾ ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಸಂಬಂಧ ಯಾವುದೇ ಮಹತ್ವದ ಘೋಷಣೆಗಳನ್ನು ಮಾಡಿಲ್ಲ.

New Tata Electric Scooter Launch soon Real or Rumour details

ಆಗೊಮ್ಮೆ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸಿದ್ದರೆ, ಟಾಟಾ ಕಂಪನಿಯೇ ಆ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸುತ್ತಿತ್ತು. ಇವೆಲ್ಲ ಒಂದು ಕಡೆಯಾದರೆ, ಟಾಟಾ ಕಾರುಗಳನ್ನು ಉತ್ಪಾದನೆಯನ್ನು ಮಾಡಬಲ್ಲ ಕಾರ್ಖಾನೆಯನ್ನು ಹೊಂದಿದೆ. ಅದರ ಹೊರತಾಗಿ ದ್ವಿಚಕ್ರ ವಾಹನ ತಯಾರಿಸಲು ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ.

ಈಗಾಗಲೇ, ಭಾರತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್, ಬಜಾಜ್ ಆಟೋ, ಟಿವಿಎಸ್ ಮೋಟಾರ್ ಹಾಗೂ ಎಥರ್ ಎನರ್ಜಿ ಕಂಪನಿಗಳು ಬಿಗಿಯಾದ ಹಿಡಿತವನ್ನು ಸಾಧಿಸಿವೆ. ಈ ಕ್ಷೇತ್ರದಲ್ಲಿ ಯಾವುದೇ ಅನುಭವವನ್ನು ಹೊಂದಿರದ ಟಾಟಾ ಏಕಕಾಕಿ ಹೊಚ್ಚ ಹೊಸ ಎಲೆಕ್ಟ್ರಿಕ್ ಬಿಡುಗಡೆ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.

New Tata Electric Scooter Launch soon Real or Rumour details

ಟಾಟಾ ಕಂಪನಿಯು ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸುವ ಬಗ್ಗೆ ಯಾವುದೇ ರೀತಿಯ ಆಸಕ್ತಿಯನ್ನು ಹೊಂದಿಲ್ಲ. ಪ್ರಯಾಣಿಕ ವಾಹನ (ವಿಶೇಷವಾಗಿ ಕಾರುಗಳು) ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ. ಈ ವಿಭಾಗದಲ್ಲಿ ಇದೇ ಫೆಬ್ರವರಿಯಲ್ಲಿ ಶೇಕಡ 12.75% ಪಾಲನ್ನು ಹೊಂದಿದೆ. ಮಾರುತಿ ಸುಜುಕಿ ಇಂಡಿಯಾ (Maruti Suzuki India) ಹಾಗೂ ಮಹೀಂದ್ರಾ & ಮಹೀಂದ್ರಾ (Mahindra & Mahindra) ಬಳಿಕ ಮೂರನೇ ಸ್ಥಾನದಲ್ಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 4, 2025, 10:56 [IST]
English summary
New tata electric scooter launch soon real or rumour details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+