ನಿನ್ನೆಯಷ್ಟೇ ಬಿಡುಗಡೆ.. 45 ಕಿ.ಮೀ ಮೈಲೇಜ್? ಹೊಸ ಟಿವಿಎಸ್ ಅಡ್ವೆಂಚರ್ ಬೈಕ್ ಕುರಿತ ಪ್ರಮುಖಾಂಶಗಳಿವು!

ನಿನ್ನೆಯಷ್ಟೇ ಶಿಮ್ಲಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೂತನ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 (TVS Apache RTX 300) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಗಿದೆ. ಇದೊಂದು ಅಡ್ವೆಂಚರ್ ಬೈಕ್ ಆಗಿದೆ. ಅತ್ಯಾಧುನಿಕವಾದ ವಿನ್ಯಾಸ ಹೊಂದಿದ್ದು, ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೀವು ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗದರೆ, 'ಅಪಾಚೆ ಆರ್‌ಟಿಎಕ್ಸ್ 300' ಅತ್ಯುತ್ತಮವಾದ ಆಯ್ಕೆಯಾಗಲಿದೆ. ಇಲ್ಲಿ ಈ ಬೈಕ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು (Price & Variants):

ಈ ಮೋಟಾರ್‌ಸೈಕಲ್‌ ಕೈಗೆಟುಕುವ ದರದಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.1.99 ಲಕ್ಷದಿಂದ ರೂ.2.29 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಬೇಸ್, ಟಾಪ್ & ಬಿಟಿಒ (ಬಿಲ್ಟ್ ಟು ಆರ್ಡರ್) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ.

New TVS Apache RTX 300 Bike Top Things

ವಿನ್ಯಾಸ & ಬಣ್ಣಗಳು (Design & Colors):

ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಸೀಟ್ ಮತ್ತು ನಕಲ್ ಗಾರ್ಡ್‌ಗಳನ್ನು ಪಡೆದಿದೆ. ಪರ್ಲ್ ವೈಟ್, ಲೈಟ್ನಿಂಗ್ ಬ್ಲ್ಯಾಕ್, ಮೆಟಾಲಿಕ್ ಬ್ಲೂ, ಟಾರ್ನ್ ಬ್ರಾನ್ಜ್ ಹಾಗೂ ವೈಪರ್ ಗ್ರೀನ್ ಎಂಬ 5 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಸುತ್ತಳತೆ (Dimensions):

ನೂತನ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಬೈಕ್ ದೊಡ್ಡ ಗಾತ್ರದಲ್ಲಿದೆ. 2,120 ಮಿ.ಮೀ ಉದ್ದ, 820 ಮಿ.ಮೀ ಅಗಲ ಮತ್ತು 1,350 ಮಿ.ಮೀ ಎತ್ತರವಿದೆ. 195 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,420 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಕಾರ್ಯಕ್ಷಮತೆ (Performance):

ಈ ಮೋಟಾರ್‌ಸೈಕಲ್‌ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 299 ಸಿಸಿ ಲಿಕ್ವಿಡ್-ಆಯಿಲ್ ಕೋಲ್ಡ್, ಸಿಂಗಲ್-ಸಿಲಿಂಡರ್ ಆರ್‌ಟಿ-ಎಕ್ಸ್‌ಡಿ4 ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 35.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 28.5 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

ಇದು ಉತ್ತಮವಾದ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. 45 ಕಿ.ಮೀವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 12.5 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. 215 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿರಲಿದ್ದು, ಕೇವಲ 7.4 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ವೈಶಿಷ್ಟ್ಯಗಳು (Features):

ಹೊಸ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಬೈಕ್ 5-ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ, ಯುಎಸ್‌ಬಿ ಫೋನ್ ಚಾರ್ಜರ್ & ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ ಸೇರಿದಂತೆ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಟೂರ್, ರ‍್ಯಾಲಿ, ಅರ್ಬನ್ ಹಾಗೂ ರೈನ್ ಎಂಬ 4 ಅತ್ಯಾಕರ್ಷಕವಾದ ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಈ ಮೋಟಾರ್‌ಸೈಕಲ್‌ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಇನ್ವರ್ಟೆಡ್ ಫೋರ್ಕ್ & ಹಿಂಭಾಗ (ರೇರ್) ಪ್ರಿಲೋಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಇದರೊಂದಿಗೆ ಡುಯಲ್ ಡಿಸ್ಕ್ ಬ್ರೇಕ್‌ಗಳು. 3 ಲೆವೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು 2 ಲೆವೆಲ್ ಟ್ರಾಕ್ಷನ್ ಕಂಟ್ರೋಲ್‌ನ್ನು ಪಡೆದಿದೆ. ಅತ್ತುತ್ತಮವಾದ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿ ಬೈಕ್‌ಗಳು (Rival Bikes):

ಇದಕ್ಕೆ ಸಾಲು ಸಾಲು ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಬಲ್ಲವು. ವಿಶೇಷವಾಗಿ ಕೆಟಿಎಂ 250 ಅಡ್ವೆಂಚರ್ (KTM 250 Adventure), ಯೆಜ್ಡಿ ಅಡ್ವೆಂಚರ್ (Yezdi Adventure) ಹಾಗೂ ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್‌ (Suzuki V-Strom SX) ಬೈಕ್‌ಗಳು ಗಟ್ಟಿಯಾದ ಸ್ಪರ್ಧೆಯೊಡ್ಡಬಲ್ಲವು.

More from DriveSpark

Article Published On: Thursday, October 16, 2025, 15:49 [IST]
English summary
New tvs apache rtx 300 bike top things
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+