TVS: ಟಿವಿಎಸ್ ಎಕ್ಸ್ಎಲ್ 100ನ ಹೊಸ ವೇರಿಯೆಂಟ್ ಮಾರಾಟಕ್ಕೆ.. ಬೆಲೆಯೂ ಅಗ್ಗ.. ಪ್ರಮುಖಾಂಶಗಳಿವು!
ಟಿವಿಎಸ್ ಎಕ್ಸ್ಎಲ್ 100 (TVS XL 100) ಜಗಮೆಚ್ಚಿದ ಮೊಪೆಡ್ ಆಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸದೆ. ಹೊಸ ಕಾಲಘಟ್ಟಕ್ಕೆ ತಕ್ಕಂತೆ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮೊಪೆಡ್‌ನ್ನು ಮೇಲ್ದರ್ಜೆರಿಸಲಾಗಿದೆ. ಇತ್ತೀಚೆಗೆ ನೂತನ ರೂಪಾಂತರವಾದ (ವೇರಿಯೆಂಟ್) 'ಹೆವಿ ಡ್ಯೂಟಿ ಅಲಾಯ್'ನ್ನು ಬಿಡುಗಡೆಗೊಳಿಸಲಾಗಿದೆ. ನಾವಿಲ್ಲಿ ನೂತನ ಮಾಡೆಲ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ (Price):
ಹೊಚ್ಚ ಹೊಸ ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್ (TVS XL 100 Heavy Duty Alloy) ರೂಪಾಂತರ (ವೇರಿಯೆಂಟ್), ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ರೂ.65,047 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ವಿನ್ಯಾಸ & ಬಣ್ಣಗಳು (Design & Colors):
ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹೊಸದಾದ 16 ಇಂಚಿರುವ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ್ನು ಹೊಂದಿದೆ. ನವೀನವಾದ ಗ್ರಾಫಿಕ್ಸ್ & ಮರುವಿನ್ಯಾಸಕ್ಕೆ ಒಳಪಡಿಸಲಾದ ಟೈಲ್‌ಲೈಟ್‌ಗಳನ್ನು ಪಡೆದಿದೆ. ರೆಡ್, ಬ್ಲೂ ಹಾಗೂ ಗ್ರೇ ಎಂಬ 3 ಆಕರ್ಷಕವಾದ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಸುತ್ತಳತೆ (Dimensions):
ಈ ಮೊಪೆಡ್ ವಿಶಾಲ ಗಾತ್ರದಲ್ಲಿದೆ. 1,895 ಎಂಎಂ ಉದ್ದ, 670 ಎಂಎಂ ಅಗಲ ಹಾಗೂ 1,077 ಎಂಎಂ ಎತ್ತರವಿದೆ. ಜೊತೆಗಿದು 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1228 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 88 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ನೂತನ 'ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್' ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 99.7 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, 4-ಸ್ಟ್ರೋಕ್ ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 4.3 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಇದು ಉತ್ತಮ ಇಂಧನ ದಕ್ಷತೆಗೂ ಹೆಸರುವಾಗಿದೆ. 55 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 58 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ವೈಶಿಷ್ಟ್ಯಗಳು (Features):
ಈ ಮೊಪೆಡ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಲೆಂಟ್ ಸ್ಟಾರ್ಟರ್, ಬಲ್ಬ್ ಇಂಡಿಕೇಟರ್‌ಗಳು & ಮೊಬೈಲ್ ಚಾರ್ಜಿಂಗ್ ಪೋರ್ಟ್‌ನ್ನು ಒಳಗೊಂಡಿದೆ. ಇಟಿಎಫ್ಐ (ಇಕೋ ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್) ಟೆಕ್ನಾಲಜಿಯನ್ನು ಪಡೆದಿದ್ದು, ಹೆಚ್ಚಿನ ಮೈಲೇಜ್ ನೀಡಲು ನೆರವಾಗುತ್ತದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಹೊಸ 'ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್' ಮೊಪೆಡ್, ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಜೊತೆಗೆ ಎರಡು ತುದಿಗಾಲಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಟಿವಿಎಸ್ ಎಕ್ಸ್ಎಲ್ 100 ಮೊಪೆಡ್‌ನ ಹಲವು ರೂಪಾಂತರಗಳು ಕೂಡ ಸಿಗುತ್ತವೆ:
ಇದು ಹೆವಿ ಡ್ಯೂಟಿ (ರೂ.47,754), ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್ (ರೂ 60,405), ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್ ವಿನ್ ಎಡಿಷನ್ (ರೂ.63,347) ಹಾಗೂ ಕಂಫರ್ಟ್ ಐ-ಟಚ್‌ಸ್ಟಾರ್ಟ್ (ರೂ.63,705) ಎಂಬ ರೂಪಾಂತರಗಳ ಆಯ್ಕೆಯನ್ನು ಹೊಂದಿದೆ. ಸದ್ಯ ದೇಶೀಯವಾಗಿ ಈ ಮೊಪೆಡ್‌ಗೆ ಯಾವುದೇ ನೇರವಾದ ಎದುರಾಳಿಯಿಲ್ಲ ಎಂದು ಹೇಳಬಹುದು.


Click it and Unblock the Notifications








