VinFast: ಭಾರತದಲ್ಲಿ ಹೊಸ ಕಾರು ಕಂಪನಿಯ ಜೋರು.. ಅಗ್ಗದ ಇ-ಸ್ಕೂಟರ್‌ಗಳ ಬಿಡುಗಡೆಗೆ ಸಿದ್ಧತೆ! ಮಾರಾಟ ಯಾವಾಗ?
ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast) ಜನಪ್ರಿಯ ವಾಹನ ತಯಾರಕ ಕಂಪನಿ ಎಂದೇ ಮನೆ ಮಾತಾಗಿದೆ. ಏಷ್ಯಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದೆ. ಭಾರತದಲ್ಲಿ ವಿಎಫ್6 ಹಾಗೂ ವಿಎಫ್7 ಎಸ್‌ಯುವಿಗಳನ್ನು ಬಿಡುಗಡೆಯೊಂದಿಗೆ ಅಂಬೆಗಾಲಿಟ್ಟಿದೆ. ಇವೆರೆಡು ಕಾರುಗಳನ್ನು ಯಶಸ್ವಿಯಾಗಿಯೂ ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. 2026ರ ಫೆಬ್ರವರಿಯಲ್ಲಿ ಹೊಚ್ಚ ಹೊಸ 'ಲಿಮೋ ಗ್ರೀನ್' ಎಂಪಿವಿಯನ್ನು ಪರಿಚಯಿಸುವುದಾಗಿ ಕಂಪನಿಯು ಘೋಷಣೆ ಮಾಡಿದೆ.
ಸದ್ಯ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು 'ವಿನ್‌ಫಾಸ್ಟ್' ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 2026ರಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲಿದೆ. ಅದಕ್ಕಾಗಿ, ಜಾಗತಿಕವಾಗಿ ಲಭ್ಯವಿರುವ ಯಾವ ಮಾಡೆಲ್, ಭಾರತದ ರಸ್ತೆಗಳಿಗೆ ಹೆಚ್ಚು ಸೂಕ್ತವಾಗಲಿದೆ ಎಂಬುದರ ಕುರಿತಂತೆ ಕಂಪನಿಯು ಅಧ್ಯಯನ ನಡೆಸುತ್ತಿದೆ ಎಂದು ವರದಿಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ವಿನ್‌ಫಾಸ್ಟ್' ಇವೊ ಗ್ರ್ಯಾಂಡ್, ಕ್ಲಾರಾ ನಿಯೋ, ಫೆಲಿಜ್, ವೆರೋ ಎಕ್ಸ್ ಹಾಗೂ ವೆಂಟೊ ಎಸ್ ಸೇರಿದಂತೆ ವಿವಿಧ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ಹೆಚ್ಚು ಅತ್ಯಾಕರ್ಷಕವಾಗಿದ್ದು, ದೇಶೀಯವಾಗಿ ಅಗ್ಗದ ದರದಲ್ಲೂ ಗ್ರಾಹಕರ ಖರೀದಿಗೆ ನಿರೀಕ್ಷೆಯಿದೆ.
ವಿನ್‌ಫಾಸ್ಟ್‌ನ ಪ್ರಮುಖ ಇ-ಸ್ಕೂಟರ್‌ಗಳ ಕುರಿತ ಸಂಕ್ಷಿಪ್ತ ಪರಿಚಯ:
ವಿನ್‌ಫಾಸ್ಟ್ ಇವೊ ಗ್ರ್ಯಾಂಡ್: ಈ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತವಾದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ಸಂಪೂರ್ಣ ಚಾರ್ಜ್‌ನಲ್ಲಿ 134 ರಿಂದ 262 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿ ಬಳಸಿರುವ ಬ್ಯಾಟರಿಯು 6.5 ಗಂಟೆಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗಿ ಬಿಡುತ್ತದೆ.

ವಿನ್‌ಫಾಸ್ಟ್ ಕ್ಲಾರಾ ನಿಯೋ: ಇದು ಬಲಿಷ್ಠವಾದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 112 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 60 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಉಪಯೋಗಿಸಿರುವ ಬ್ಯಾಟರಿಯು 5 ಗಂಟೆ 20 ನಿಮಿಷಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗುತ್ತದೆ.
ವಿನ್‌ಫಾಸ್ಟ್ ಫೆಲಿಜ್: ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮವಾದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 134 ರಿಂದ 262 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿರುವ ಬ್ಯಾಟರಿಯು ಶೇಕಡ 0 ರಿಂದ 100% ಚಾರ್ಜ್ ಆಗಲು 6.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ವಿನ್‌ಫಾಸ್ಟ್ ವೆರೋ ಎಕ್ಸ್: ಇದು ಉತ್ತಮವಾದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ತಕ್ಕಂತೆ ಸಂಪೂರ್ಣ ಚಾರ್ಜ್‌ನಲ್ಲಿ 134 ರಿಂದ 262 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಳಸಿರುವ ಬ್ಯಾಟರಿಯು 6.5 ಗಂಟೆಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗುತ್ತದೆ.
ವಿನ್‌ಫಾಸ್ಟ್ ವೆಂಟೊ ಎಸ್: ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕವಾದ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 160 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. 89 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇದರಲ್ಲಿ ಉಪಯೋಗಿಸಿರುವ ಬ್ಯಾಟರಿಯು ಶೇಕಡ 0 ರಿಂದ 100% ಚಾರ್ಜ್ ಆಗಲು 6 ಗಂಟೆ ಹಿಡಿಯುತ್ತದೆ.
ಒಟ್ಟಾರೆಯಾಗಿ 'ವಿನ್‌ಫಾಸ್ಟ್'ನ ನೂತನ ಇ-ಸ್ಕೂಟರ್‌ಗಳನ್ನು ಮಾರಾಟಕ್ಕೆ ತರುತ್ತದೆ ಎಂಬ ವಿಚಾರವು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಕಂಪನಿಯು ಬಜಾಜ್, ಟಿವಿಎಸ್, ಹೀರೋ, ಎಥರ್, ಸಿಂಪಲ್ ಒನ್, ಅಲ್ಟ್ರಾವೈಲೆಟ್ ಹಾಗೂ ಓಲಾದ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೂ ಸ್ಪರ್ಧಿಸಬೇಕಾಗಿದೆ.


Click it and Unblock the Notifications








