150 ಸಿಸಿ ವಿಭಾಗದಲ್ಲಿ ಇದೇ ಮೊದಲು.. 'ಯಮಹಾ ಎಫ್‌ಝಡ್‌-ಎಸ್' ಹೈಬ್ರಿಡ್ ಬೈಕ್ ಬಿಡುಗಡೆ, ಬೆಲೆ ಇಷ್ಟೇನಾ?

ಜಪಾನ್ ಮೂಲದ ಯಮಹಾ (Yamaha) ಜನಪ್ರಿಯ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಯಮಹಾ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಟೆಕ್ನಾಲಜಿಯನ್ನು ಒಳಗೊಂಡಿರುವ ಹೊಚ್ಚ ಹೊಸ ಎಫ್‌ಝಡ್‌-ಎಸ್ ಫೈ (FZ-S Fi) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತಂದಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನೂತನ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ (Yamaha FZ-S Fi Hybrid) ಬೈಕ್, ಸ್ವಲ್ಪ ಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿಯೇ ಬಿಡುಗಡೆಗೊಂಡಿದೆ. ಇದು ರೂ.1.45 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಹೊಂದಿದೆ. ಜೊತೆಗೆ ಈ 'ಎಫ್‌ಝಡ್‌-ಎಸ್ ಫೈ' 150 ಸಿಸಿ ವಿಭಾಗದಲ್ಲಿ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ದೇಶದ ಮೊದಲ ಬೈಕ್ ಆಗಿಯೂ ಹೊರಹೊಮ್ಮಿದೆ.

New Yamaha FZ-S Fi Hybrid Bike Launched In India Rs 1 45 Lakh Price Details

2025ರ ಹೊಸ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಮೋಟಾರ್‌ಸೈಕಲ್‌, ಹೊರಭಾಗದಲ್ಲಿ ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಇದು ಉತ್ತಮವಾಗಿರುವ ಹೈಡ್‌ಲೈಟ್, ದೊಡ್ಡದಾಗಿರುವ ಫ್ಯುಯೆಲ್ ಟ್ಯಾಂಕ್ ಹಾಗೂ ಇಂಟಿಗ್ರೇಟೆಡ್ ಫ್ರಂಟ್ ಟರ್ನ್ ಸಿಗ್ನಲ್‌ಗಳನ್ನು ಒಳಗೊಂಡಿದೆ. ರೇಸಿಂಗ್ ಬ್ಲೂ & ಸಯಾನ್ ಮೆಟಾಲಿಕ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಈ ಬೈಕ್ 149 ಸಿಸಿ ಫೋರ್-ಸ್ಟ್ರೋಕ್, ಟೂ-ವಾಲ್ವ್, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ನ್ನು ಹೊಂದಿದೆ. 7,250 ಆರ್‌ಪಿಎಂನಲ್ಲಿ 12.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5,500 ಆರ್‌ಪಿಎಂನಲ್ಲಿ 13.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಸ್ಲಿಪ್ಪರ್ ಕ್ಲಚ್ ಆಯ್ಕೆಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ ಇದರ ಪವರ್‌ಟ್ರೇನ್‌ ಒಬಿಡಿ-2ಬಿ (OBD-2B) ಮಾನದಂಡಗಳನ್ನು ಪೂರೈಸಿದೆ.

New Yamaha FZ-S Fi Hybrid Bike Launched In India Rs 1 45 Lakh Price Details

ನೂತನ ಯಮಹಾ ಎಫ್‌ಝಡ್‌-ಎಸ್ ಫೈ ಮೋಟಾರ್‌ಸೈಕಲ್‌, ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಟೆಕ್ನಾಲಜಿ ಹೊಂದಿರುವುದರಿಂದ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ. ಇದರೊಟ್ಟಿಗೆ ಹೆಚ್ಚಿನ ಮೈಲೇಜ್ ನೀಡಲು ಕೂಡ ಸಹಕಾರಿಯಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಫ್ಯಾಸಿನೊ ಹಾಗೂ ರೇ ಜಡ್ಆರ್ ಹೈಬ್ರಿಡ್ ಸ್ಕೂಟರ್‌ಗಳು 71 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡಬಲ್ಲವು.

ಹೊಸ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಬೈಕ್, ಎಸ್‌ಎಂಜಿ (ಸ್ಮಾರ್ಟ್ ಮೋಟಾರ್ ಜನರೇಟರ್) ಮತ್ತು ಎಸ್‌ಎಸ್‌ಎಸ್ (ಸ್ಟಾಪ್ & ಸ್ಟಾರ್ಟ್ ಸಿಸ್ಟಮ್) ಟೆಕ್ನಾಲಜಿಯನ್ನು ಪಡೆದಿದೆ. ಹಾಗೆಯೇ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 4.2-ಇಂಚಿನ ಫುಲ್-ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಇದು ಬ್ಲೂಟೂತ್ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ, ಗೂಗಲ್ ಮ್ಯಾಪ್ಸ್, ಕಾಲ್ & ಎಸ್‌ಎಂಎಸ್ ಅಲರ್ಟ್‌ನ್ನು ಬೆಂಬಲಿಸುತ್ತದೆ.

ನೂತನ ಎಫ್‌ಝಡ್‌-ಎಸ್ ಫೈ ಮೋಟಾರ್‌ಸೈಕಲ್‌, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಈ ಬೈಕ್ ಬರೋಬ್ಬರಿ 138 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 11, 2025, 16:40 [IST]
English summary
New yamaha fz s fi hybrid bike launched in india rs 1 45 lakh price details
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+