ಭರ್ಜರಿ ಮೈಲೇಜ್, ಕಡಿಮೆ ಬೆಲೆ: ಹೊಸ ಯಮಹಾ FZ-S ಹೈಬ್ರಿಡ್ ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ (Yamaha) ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ 40 ವರ್ಷಗಳ ಅಸ್ತಿತ್ವವನ್ನು ಆಚರಿಸುತ್ತಿದೆ. 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಯಮಹಾ ತನ್ನ ಪೆವಿಲಿಯನ್‌ನಲ್ಲಿ ಪರಂಪರೆಯ ಐಕಾನಿಕ್ ಮಾದರಿಗಳನ್ನು ಪ್ರದರ್ಶಿಸಿತು. ಯಮಹಾ ತನ್ನ ಐಕಾನಿಕ್ ಮಾದರಿಗಳಾದ RX100 ಮತ್ತು RD350 ಮೋಟಾರ್‌ಸೈಕಲ್‌ಗಳ ಜೊತೆಗೆ, ಜಪಾನೀಸ್ ಬ್ರ್ಯಾಂಡ್ YZF R15 ಮತ್ತು FZ ಸರಣಿಯ ಬೈಕುಗಳ ಮೊದಲ ತಲೆಮಾರಿನ ಮಾದರಿಗಳನ್ನು ಸಹ ಪ್ರದರ್ಶಿಸಿತು. ಇದರೊಂದಿಗೆ ಯಮಹಾ ಕಂಪನಿಯು ಯಮಹಾ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಭಾರತದ ಮೊದಲ 150 ಸಿಸಿ ಪ್ರಯಾಣಿಕ ಬೈಕು FZ-S ಅನ್ನು ಪರಿಚಯಿಸಿದರು.

ಪ್ರಮುಖ ಮುಖ್ಯಾಂಶಗಳು: ಯಮಹಾದ ಫ್ಯಾಸಿನೊ ಮತ್ತು ರೇ ZR ಸ್ಕೂಟರ್‌ಗಳ ನಂತರ ಹೈಬ್ರಿಡ್ ಸಿಸ್ಟಂ ಅನ್ನು FZ ಸರಣಿಗೆ ತರಲಾಗಿದೆ. ಯಮಹಾ ಬೈಕ್ ಸ್ಟಾಪ್/ಸ್ಟಾರ್ಟ್‌ನೊಂದಿಗೆ ಸ್ಮಾರ್ಟ್ ಮೋಟಾರ್ ಜನರೇಟರ್, ನ್ಯಾವಿಗೇಷನ್‌ನೊಂದಿಗೆ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ತಾಜಾ ಬಣ್ಣಗಳೊಂದಿಗೆ ಹೊಸ ವಿನ್ಯಾಸ ಮತ್ತು ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್‌ಗಳು ಈ ಎಂಟ್ರಿ ಲೆವೆಲ್ ನೇಕೆಡ್ ಬೈಕ್‌ನ ಪ್ರಮುಖ ಮುಖ್ಯಾಂಶಗಳಾಗಿವೆ.

Yamaha FZ-S Hybrid

ಯಮಹಾ FZ-S ಬೈಕಿನಲ್ಲಿರುವ ಹೈಬ್ರಿಡ್ ತಂತ್ರಜ್ಞಾನವು ಯಮಹಾ ಮತ್ತು ಟಿವಿಎಸ್ ಸ್ಕೂಟರ್‌ಗಳಲ್ಲಿ ಕಂಡುಬರುವ ರೀತಿಯ ಐಎಸ್‌ಜಿಯೊಂದಿಗೆ ಬರುತ್ತದೆ. ಈ ಬೈಕ್‌ನ ಗರಿಷ್ಠ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಣ್ಣ ಪವರ್ ವರ್ಧಕವನ್ನು ಒದಗಿಸುತ್ತದೆ. ಈ ಯಮಹಾ FZ-S ಬೈಕಿನಲ್ಲಿ ಈಗ ಸೇರಿಸಲಾದ ಇತರ ಎರಡು ವೈಶಿಷ್ಟ್ಯಗಳೆಂದರೆ ಸ್ಟಾರ್ಟ್/ಸ್ಟಾಪ್ ಟೆಕ್ ಮತ್ತು ಸೈಲೆಂಟ್ ಸ್ಟಾರ್ಟ್ ಆಗಿದೆ.

ಎಂಜಿನ್: ಯಮಹಾ ಬೈಕಿನಲ್ಲಿ ಏರ್-ಕೂಲ್ಡ್, 149cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಪ್ರಸ್ತುತ 12.4 hp ಪವರ್ ಮತ್ತು 13.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೈಬ್ರಿಡ್ ಮಾದರಿಯ ಪವರ್ ಉತ್ಪಾದನೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇದಲ್ಲದೇ ಬೈಕ್‌ನ ಮೈಲೇಜ್ ನಲ್ಲೂ ಸುಧಾರಿಸಲಿದೆ. ಮುಂದಿನ ದಿನಗಳಲ್ಲಿ ಯಮಹಾ ಅಧಿಕೃತವಾಗಿ ವಿವರಗಳನ್ನು ಬಹಿರಂಗಪಡಿಸುತ್ತದೆ.

Yamaha FZ-S Hybrid

ಯಮಹಾ FZ-X ಹೈಬ್ರಿಡ್ (Yamaha FZ-S Hybrid) ಮಾದರಿಯು ಕಾಲ್/ನೋಟಿಫಿಕೆಶನ್ ಅಲರ್ಟ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಕಂಟ್ರೋಲ್ ಗಳೊಂದಿಗೆ ಬಣ್ಣದ TFT ಡಿಸ್ ಪ್ಲೇಯನ್ನು ಹೊಂದಿದೆ. ಇತರ ಕಾರ್ಯಗಳನ್ನು ನಿರ್ವಹಿಸಲು ಹೊಸ ಸ್ವಿಚ್ ಗೇರ್ ಅನ್ನು ಒದಗಿಸಲಾಗಿದೆ. ಇತ್ತೀಚಿನ R15 ಮಾದರಿಗಳಲ್ಲಿ ಕಂಡುಬರುವಂತೆ ಇದು DLX ರೂಪಾಂತರದಲ್ಲಿ ಲಭ್ಯವಿರುತ್ತದೆ. ಹೊಸ ಯಮಹಾ FZ-X ಮೋಟಾರ್‌ಸೈಕಲ್ ಟ್ಯಾಂಕ್ ವಿಸ್ತರಣೆಗಳಲ್ಲಿ ಫಾಕ್ಸ್ ಏರ್ ವೆಂಟ್‌ಗಳಲ್ಲಿ LED ಇಂಡಿಕೇಟರ್ಸ್ ಗಳನ್ನು ಹೊಂದಿದೆ.

ಇದರ ಹೊರತಾಗಿ, ಸ್ಟ್ಯಾಂಡರ್ಡ್ ಮಾದರಿಯಿಂದ ಹೈಬ್ರಿಡ್ ಆವೃತ್ತಿಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಯಮಹಾ FZ-S ಈ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಹೆಚ್ಚಿನ ಸುರಕ್ಷತೆಗಾಗಿ ಈ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

Yamaha FZ-S Hybrid

ಸಸ್ಪೆಕ್ಷನ್ ಸೆಟಪ್ ಈ ಹೊಸ ಯಮಹಾ FZ-S ಹೈಬ್ರಿಡ್ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್ ಹೊಂದಾಣಿಕೆ ಮೊನೊಶಾಕ್ ಮೂಲಕ ನಿರ್ವಹಿಸಲಾಗುತ್ತದೆ. ಇನ್ನು ಯಮಹಾ FZ-S ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 24, 2025, 17:12 [IST]
English summary
New yamaha fz s hybrid bike top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+