ಮೊನ್ನೆಯಷ್ಟೆ ಬಿಡುಗಡೆಯಾದ 6 ಹೊಸ ಸ್ಕೂಟರ್‌ಗಳು: ಬೆಲೆ ಕೇವಲ 45,000... ವಿಶೇಷತೆಗಳೇನು?

ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವ ದೇಶಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ವಾರಿವೋ (Warivo) 6 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೋವಾ ಮತ್ತು ಎಡ್ಜ್ ಎಂಬ ಎರಡು ಸೀರೀಸ್ ಅಡಿಯಲ್ಲಿ ಈ ಆರು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಬೆಲೆಗಳು ಕೇವಲ 44,999 ರೂ.ಗಳಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತವೆ, ಈ ಆರು ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಸದ್ಯ ಈ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಅತ್ಯಂತ ಬಜೆಟ್ ಸ್ನೇಹಿ ಎಲೆಕ್ಟ್ರಿಕ್‌ಗಳಾಗಿವೆ. ಹಗುರವಾದ ವಿನ್ಯಾಸದೊಂದಿಗೆ ಸ್ಟೈಲಿಷ್ ಲುಕ್‌ನಲ್ಲಿ ಪರಿಚಯಿಸಲಾದ ಈ ಸ್ಕೂಟರ್‌ಗಳ ಮೇಲೆ 3 ವರ್ಷಗಳ ಸಮಗ್ರ ವಾರಂಟಿ ನೀಡುತ್ತಿರುವುದಾಗಿ ಕಂಪನಿ ಹೇಳಿದೆ. ಉತ್ತಮ ಮಾರಾಟದ ನಂತರದ ಬೆಂಬಲ, ಸುಧಾರಿತ ಬಿಡಿಭಾಗಗಳ ಲಭ್ಯತೆ, ಮೀಸಲಾದ ಗ್ರಾಹಕ ಸೇವೆಗಳನ್ನು ನೀಡುವುದು ಕಂಪನಿಯ ಗುರಿಯಾಗಿದೆ.

newly-launched-warivo-ev-scooters-top-things

ನೋವಾ ಸಿರೀಸ್: ವಾರಿವೊ ಮೋಟಾರ್ಸ್‌ನ ಟಾಪ್-ಆಫ್-ಲೈನ್ ಸಿರೀಸ್ ಇದಾಗಿದ್ದು, ನೋವಾ, ನೋವಾ-ಎಕ್ಸ್ ಮತ್ತು ನೋವಾ-ಎಸ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಎಲ್ಲವು ಪ್ರತಿ ಚಾರ್ಜ್‌ಗೆ 120 ಕಿ.ಮೀ ರೇಂಜ್ ನೀಡುತ್ತವೆ. ಮೂರು ವರ್ಷಗಳ ವಾರಂಟಿಯನ್ನು ನೀಡುತ್ತವೆ. ನೋವಾ-ಎಸ್ ಬೆಲೆ 64,999 ರೂ., ನೋವಾ-ಎಕ್ಸ್ 59,999 ರೂ., ಎಂಟ್ರಿ ಲೆವೆಲ್ ನೋವಾ ಬೆಲೆ 55,999 ರೂ. ಬೆಲೆಯಲ್ಲಿ ಖರೀದಿಗೆ ಸಿಗಲಿವೆ.

ಎಡ್ಜ್ ಸಿರೀಸ್: ಎಡ್ಜ್ ಸಿರೀಸ್‌ನಲ್ಲಿ ಎಡ್ಜ್ ಮತ್ತು ಎಡ್ಜ್+ ಎಂಬ ಎರಡು ಸ್ಕೂಟರ್‌ಗಳು ಸಿಗಲಿವೆ. ಎಡ್ಜ್+ ಬೆಲೆಯು ರೂ. 49,999 (ಎಕ್ಸ್-ಶೋರೂಂ) ಮತ್ತು ಎಡ್ಜ್ ಬೆಲೆಯು ರೂ. 44,999 (ಎಕ್ಸ್-ಶೋರೂಂ) ಇದೆ. ಎಡ್ಜ್ ಪ್ಲಸ್ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 760 ಎಂಎಂ ಸೀಟ್ ಎತ್ತರದೊಂದಿಗೆ ಬರುತ್ತದೆ. ಎಡ್ಜ್ 195 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 800 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.

ನೋವಾ 810 ಎಂಎಂ ಸೀಟ್ ಎತ್ತರ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ನೋವಾ ಎಕ್ಸ್ 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 775 ಎಂಎಂ ಸ್ಯಾಡಲ್ ಎತ್ತರವನ್ನು ಹೊಂದಿದೆ. ನೋವಾ ಎಸ್ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 780 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಎಲ್‌ಇಡಿ ಲೈಟ್‌ಗಳು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಹೋಂದಿವೆ.

'ನೋವಾ ಸಿರೀಸ್' ಅನ್ನು ಪ್ರೀಮಿಯಂ ಅನುಭವ, ಆಧುನಿಕ ನೋಟ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಬಯಸುವವರಿಗಾಗಿ ತಯಾರಿಸಲಾಗಿದೆ. 'ಎಡ್ಜ್ ಸಿರೀಸ್' ಅನ್ನು ದೈನಂದಿನ ಬಳಕೆಗಾಗಿ ಸರಳ, ವಿಶ್ವಾಸಾರ್ಹ ಮತ್ತು ಕೈಗೆಟುಕುವ ಪ್ರಯಾಣದ ಮೇಲೆ ಕೇಂದ್ರೀಕರಿಸಿ ನಿರ್ಮಿಸಲಾಗಿದೆ. ಸ್ಕೂಟರ್‌ಗಳು ಸ್ಮಾರ್ಟ್ ಮೊಬೈಲ್ ಅಪ್ಲಿಕೇಶನ್ ಸಂಪರ್ಕವನ್ನು ಸಹ ನೀಡುತ್ತವೆ.

ಹೊಸದಾಗಿ ಬಿಡುಗಡೆಯಾದ ಸ್ಕೂಟರ್‌ಗಳು ಈಗ ಭಾರತದಾದ್ಯಂತದ ಅಧಿಕೃತ ವಾರಿವೊ ಡೀಲರ್ ಶಿಪ್‌ಗಳಲ್ಲಿ ಲಭ್ಯವಿದೆ. ವಾರಿವೋ ಈಗಾಗಲೇ ಸಿಆರ್ಎಕ್ಸ್, ಝಡ್‌ಬಿ, ಎಲ್ -1 ಪ್ಲಸ್, ಎಲ್ -2 ಮತ್ತು ನೆಕ್ಸಾ ಡಿಎಸ್‌ನಂತಹ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಗಳನ್ನು ಮಾರಾಟ ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 7, 2025, 14:00 [IST]
English summary
Newly launched warivo ev scooters top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+