Yamaha: ಇತ್ತೀಚೆಗೆ ಬಿಡುಗಡೆಯಾಗಿದೆ ಪವರ್‌ಫುಲ್ ಯಮಹಾ ಸ್ಕೂಟರ್: ವಿಶೇಷತೆಗಳೇನು?

ಯಮಹಾ (Yamaha) ರೇಸಿಂಗ್ ಡಿಎನ್‌ಎಯನ್ನು ಪ್ರತಿಬಿಂಬಿಸುವ ಬಾಡಿ ಮತ್ತು ಸೈಡ್ ಫೇರಿಂಗ್‌ಗಳಲ್ಲಿ ನವೀಕರಿಸಿದ ಡಿಸೈನ್‌ನೊಂದಿಗೆ ಇತ್ತೀಚೆಗೆ 2025 ರ ಏರೋಕ್ಸ್ 155 ಆವೃತ್ತಿ S ಮಾದರಿಗೆ ಗಮನಾರ್ಹವಾದ ಹೊಸ ಬಣ್ಣಗಳನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಯಮಹಾ ತನ್ನ ಪ್ರೀಮಿಯಂ ಬ್ರ್ಯಾಂಡ್ ಅಭಿಯಾನ - ದಿ ಕಾಲ್ ಆಫ್ ದಿ ಬ್ಲೂ ಅಡಿಯಲ್ಲಿ 2025 ರ ಏರೋಕ್ಸ್ 155 ಆವೃತ್ತಿ S ಅನ್ನು ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ ಯುವ ಗ್ರಾಹಕರನ್ನು ಆಕರ್ಷಿಸುವುದು ಪಕ್ಕಾ ಎಂದು ಕಂಪನಿ ಭರವಸೆ ನೀಡಿದೆ.

ಯಮಹಾ ತನ್ನ ಈ ಹೊಸ ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಿದೆ. ಸಂಪೂರ್ಣ ಏರೋಕ್ಸ್ ಶ್ರೇಣಿಯು ಈಗ OBD-2B ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿದೆ. ಏರೋಕ್ಸ್ 155 ಆವೃತ್ತಿ S ಅನ್ನು ಐಸ್ ಫ್ಲೂ ವರ್ಮಿಲಿಯನ್ ಮತ್ತು ರೇಸಿಂಗ್ ಬ್ಲೂ ಎರಡೂ ಬಣ್ಣಗಳನ್ನು ರೂ. 1,53,430/- (ಎಕ್ಸ್-ಶೋರೂಂ)ಗೆ ಮಾರಾಟ ಮಾಡಲಿದೆ.

newly-launched-yamaha-aerox-155-version-s-top-things

ಮೆಟಾಲಿಕ್ ಬ್ಲ್ಯಾಕ್ ಬಣ್ಣದಲ್ಲಿರುವ ಏರೋಕ್ಸ್ 155 ರೂ. 150,130/- (ಎಕ್ಸ್-ಶೋರೂಂ) ನಲ್ಲಿ ಲಭ್ಯವಿರುತ್ತದೆ. ಹೊಸ ಐಸ್ ಫ್ಲೂ ವರ್ಮಿಲಿಯನ್ ಶೇಡ್ ಜೊತೆಗೆ, ರೇಸಿಂಗ್ ಬ್ಲೂ ಬಣ್ಣದಲ್ಲಿರುವ ಏರೋಕ್ಸ್ 155 ಆವೃತ್ತಿ S ರಿಫ್ರೆಶ್ಡ್ ಗ್ರಾಫಿಕ್ಸ್ ಅನ್ನು ಹೊಂದಿದೆ, ಇದು ತನ್ನ ಸ್ಪೋರ್ಟಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಏರೋಕ್ಸ್ 155 ಮಾದರಿಗಳು ದಿಟ್ಟ ಬಾಡಿ ವಿನ್ಯಾಸ ಮತ್ತು ಗಮನಾರ್ಹವಾದ X ಸೆಂಟರ್ ಮೋಟಿಫ್ ಅನ್ನು ಹೊಂದಿದ್ದು, ಅವುಗಳನ್ನು ಎಲ್ಲರಿಗೂ ವಿಶಿಷ್ಟ ಆಯ್ಕೆಯನ್ನಾಗಿ ಮಾಡುತ್ತದೆ. ಇದಲ್ಲದೆ, ಏರೋಕ್ಸ್ 155 ಆವೃತ್ತಿ S ನಲ್ಲಿರುವ ಸ್ಮಾರ್ಟ್ ಕೀ ವೈಶಿಷ್ಟ್ಯವು ಸುಧಾರಿತ ತಂತ್ರಜ್ಞಾನದ ಮೂಲಕ ಅನುಕೂಲತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ.

newly-launched-yamaha-aerox-155-version-s-top-things

ಜೊತೆಗೆ ಸುಧಾರಿತ ಸ್ಮಾರ್ಟ್ ಕೀ ತಂತ್ರಜ್ಞಾನದೊಂದಿಗೆ ಮ್ಯಾಕ್ಸಿ-ಸ್ಪೋರ್ಟ್ಸ್ ಸ್ಕೂಟರ್, ಐಕಾನಿಕ್ - ರೇಸಿಂಗ್ ಬ್ಲೂ ಮತ್ತು ವಿಶಿಷ್ಟ - ಐಸ್ ಫ್ಲೂ ವರ್ಮಿಲಿಯನ್ ಶೇಡ್ ಮತ್ತು ಹೊಸ ಕಲರ್ ಸ್ಕೀಮ್‌ನಲ್ಲಿ ಲಭ್ಯವಿದೆ. ಮ್ಯಾಕ್ಸಿ - ಸ್ಪೋರ್ಟ್ಸ್ ಸ್ಕೂಟರ್‌ಗಳು ಲಿಕ್ವಿಡ್ - ಕೂಲ್ಡ್, 4 - ಸ್ಟ್ರೋಕ್ SOHC, 155cc ಎಂಜಿನ್‌ನೊಂದಿಗೆ ಜೋಡಿಯಾಗಿ ಬರುತ್ತವೆ.

ಈ ಎಂಜಿನ್ 8,000 rpm ನಲ್ಲಿ 11.0kW (15.0PS)ಗರಿಷ್ಠ ಪವರ್ ಮತ್ತು 6,500 rpm ನಲ್ಲಿ 13.9 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ನಗರ ಮತ್ತು ಹೆದ್ದಾರಿ ಕ್ರೂಸಿಂಗ್ ಎರಡಕ್ಕೂ ಸೂಕ್ತವಾದ ವೇರಿಯಬಲ್ ವಾಲ್ವ್ ಆಕ್ಟಿವೇಷನ್ (VVA), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್(ABS), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(TCS), ಟ್ವಿನ್ ಶಾಕ್ ಅಬ್ಸಾರ್ಬರ್‌ಗಳು ಏರೋಕ್ಸ್‌ಗೆ ಉನ್ನತ ಪರ್ಫಾಮೆನ್ಸ್ ಮತ್ತು ನಿರ್ವಹಣಾ ಕೌಶಲ್ಯವನ್ನು ನೀಡುತ್ತದೆ.

ಈ ಅತ್ಯಾಕರ್ಷಕ ನವೀಕರಣಗಳು ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಬ್ರ್ಯಾಂಡ್ ಅನುಭವವನ್ನು ಹೆಚ್ಚಿಸಲು ಯಮಹಾದ ಬದ್ಧತೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಮ್ಯಾಕ್ಸಿ-ಸ್ಪೋರ್ಟ್ಸ್ ಸ್ಕೂಟರ್ ವಿಭಾಗದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡುಕೊಳ್ಳಲಿದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 9, 2025, 14:12 [IST]
English summary
Newly launched yamaha aerox 155 version s top things
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+