ಬೆಂಗಳೂರು ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. 140 ಕಿ.ಮೀ ರೇಂಜ್.. 86,999 ಬೆಲೆ!

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ನ್ಯೂಮೆರೋಸ್ ಮೋಟಾರ್ಸ್ (Numeros Motors), 2024ರ ಮಾರ್ಚ್‌ನಲ್ಲಿ ಹೊಚ್ಚ ಹೊಸ ಡಿಪ್ಲೋಸ್ ಪ್ರೊ (Diplos Pro) ಇ-ಸ್ಕೂಟರ್‌ನ್ನು ಮಾರಾಟಕ್ಕೆ ತಂದಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್ ವಾಣಿಜ್ಯ ಬಳಕೆಗೆ ಮಾತ್ರ ಯೋಗ್ಯವಾಗಿತ್ತು. ಸದ್ಯ ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ನೂತನ ಡಿಪ್ಲೋಸ್ ಮ್ಯಾಕ್ಸ್ (Diplos Max) ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಇದು ಪ್ರಯಾಣಿಕ ದ್ವಿಚಕ್ರ ವಾಹನವಾಗಿದೆ.

ಹೊಚ್ಚ ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ (Numeros Diplos Max) ಎಲೆಕ್ಟ್ರಿಕ್ ಸ್ಕೂಟರ್ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ರೂ.86,999 (ಪಿಎಂ ಇ-ಡ್ರೈವ್ ಸೇರಿ) ಆರಂಭಿಕ ದರವನ್ನು ಹೊಂದಿದೆ. ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದ್ದು, ರೌಂಡ್-ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ನ್ನು ಹೊಂದಿದೆ. ಇದರ ಬಾಡಿ ಪ್ಯಾನೆಲ್‌ಗಳು ಸಾಕಷ್ಟು ಗಟ್ಟಿಮುಟ್ಟಾಗಿವೆ.

Numeros Diplos Max Electric Scooter Launched In Auto Expo 2025 Details

ಈ ಸ್ಕೂಟರ್ 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಡುಯಲ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 140 ಕಿ.ಮೀ (ಐಡಿಸಿ) ರೇಂಜ್ ನೀಡುತ್ತದೆ. ಇದರಲ್ಲಿ 'ಹಬ್' ಎಲೆಕ್ಟ್ರಿಕ್ ಮೋಟರ್‌ ಉಪಯೋಗಿಸಲಾಗಿದ್ದು, 3.58 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 138 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರ ಬ್ಯಾಟರಿ ಪ್ಯಾಕ್ ಬೇರೆ - ಬೇರೆ 'ಚಾರ್ಜಿಂಗ್ ಪೋರ್ಟ್' ಆಯ್ಕೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವುದಕ್ಕೆ 3 ರಿಂದ 4 ಗಂಟೆ ಬೇಕಾಗುತ್ತದೆ. ಈ ಸ್ಕೂಟರ್ ಬರೋಬ್ಬರಿ 137 ಕೆಜಿ ತೂಕವಿದೆ.

Numeros Diplos Max Electric Scooter Launched In Auto Expo 2025 Details

ನೂತನ ಸ್ಕೂಟರ್ ಪುಟ್ಟದಾಗಿರುವ ಇನ್ಸ್ಟ್ರುಮೆಂಟ್ ಸ್ಕ್ರೀನ್ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಈ ಸ್ಕೂಟರ್ 1,960 ಎಂಎಂ ಉದ್ದ, 720 ಎಂಎಂ ಅಗಲ ಮತ್ತು 1,125 ಎಂಎಂ ಎತ್ತರವಿದೆ. 1,430 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಈ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಅಡ್ಜೆಸ್ಟೇಬಲ್ ಡುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. 12-ಇಂಚಿನ ವೀಲ್‌ಗಳು & 90/90 ಟ್ಯೂಬ್‌ಲೆಸ್ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 17, 2025, 17:54 [IST]
English summary
Numeros diplos max electric scooter launched in auto expo 2025 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+