109 ಕಿ.ಮೀ ರೇಂಜ್.. ರಿವರ್ಸ್ ಮೋಡ್, 64,999 ರೂಪಾಯಿ.. ಬೆಂಗಳೂರು ಬ್ರ್ಯಾಂಡ್‌ನಿಂದ ಹೊಸ ಇ-ಸ್ಕೂಟರ್ ಬಿಡುಗಡೆ!

ಬೆಂಗಳೂರು (Bengaluru) ಮೂಲದ ನ್ಯೂಮೆರೋಸ್ ಮೋಟಾರ್ಸ್ (Numeros Motors), ಪ್ರಮುಖ ಇವಿ (ಎಲೆಕ್ಟ್ರಿಕ್ ವೆಹಿಕಲ್) ಸ್ಟಾರ್ಟ್ಅಪ್ ಕಂಪನಿಯಾಗಿದೆ. ಗುರುವಾರ ಹೊಚ್ಚ ಹೊಸ ಎನ್-ಫಸ್ಟ್ (n-First) ಹೆಸರಿನ ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ನೋಡಲು ತುಂಬಾ ಸರಳವಾಗಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಕೈಗೆಟುಕುವ ದರದಲ್ಲೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ನ್ಯೂಮೆರೋಸ್ ಎನ್-ಫಸ್ಟ್ (Numeros n-First) ಇ-ಸ್ಕೂಟರ್, ರೂ.64,999 (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. ಮ್ಯಾಕ್ಸ್ (Max), ಐ-ಮ್ಯಾಕ್ಸ್ (i-Max) ಹಾಗೂ ಐ-ಮ್ಯಾಕ್ಸ್ ಪ್ಲಸ್ (i-Max+) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಮೊದಲ 1000 ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕೇವಲ ರೂ.499 ಮುಂಗಡ ಹಣವನ್ನು ಪಾವತಿಸಿ ಬುಕ್ಕಿಂಗ್ ಮಾಡಬಹುದು. 2026ರ ಜನವರಿಯಿಂದ ವಿತರಣೆಗಳು ಶುರುವಾಗಲಿವೆ.

Numeros N-First Electric Scooter Launched In India Rs 64 999 Price Details

'ಎನ್-ಫಸ್ಟ್'ನ ಆರಂಭಿಕ-ಶ್ರೇಣಿ ರೂಪಾಂತರ 'ಮ್ಯಾಕ್ಸ್' ಹಾಗೂ ಮಧ್ಯಮ ಶ್ರೇಣಿ ರೂಪಾಂತರ 'ಐ-ಮ್ಯಾಕ್ಸ್'ಗಳು 2.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಪಡೆದಿವೆ. ಸಂಪೂರ್ಣ ಚಾರ್ಜ್‌ನಲ್ಲಿ 91 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತವೆ. 1.8 ಕೆಡಬ್ಲ್ಯೂ ಮೋಟಾರ್‌ನ್ನು ಹೊಂದಿವೆ. 55 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿವೆ.

ಅದೇ ರೀತಿಯಲ್ಲಿ ನೂತನ ನ್ಯೂಮೆರೋಸ್ ಎನ್-ಫಸ್ಟ್ ಇ-ಸ್ಕೂಟರ್‌ನ ಗರಿಷ್ಠ ಶ್ರೇಣಿ ರೂಪಾಂತರ 'ಐ-ಮ್ಯಾಕ್ಸ್ ಪ್ಲಸ್' 3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 109 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. 2.5 ಕೆಡಬ್ಲ್ಯೂ ಮೋಟಾರ್‌ನ್ನು ಪಡೆದಿದೆ. 70 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

Numeros N-First Electric Scooter Launched In India Rs 64 999 Price Details

ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯತ್ತಮವಾದ ವಿನ್ಯಾಸವನ್ನು ಪಡೆದಿದೆ. ರೌಂಡ್ ಹೆಡ್‌ಲ್ಯಾಂಪ್‌ ಮತ್ತು ಟು-ಪೀಸ್ ಸೀಟ್‌ನ್ನು ಪಡೆದಿದೆ. ಟ್ರಾಫಿಕ್ ರೆಡ್ & ಪ್ಯೂರ್ ವೈಟ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 1,979 ಮಿ.ಮೀ ಉದ್ದ, 686 ಮಿ.ಮೀ ಅಗಲ ಹಾಗೂ 1,125 ಮಿ.ಮೀ ಎತ್ತರವಿದೆ. 159 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,341 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಕನ್ಸೋಲ್, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್, ಇಮೊಬಿಲೈಸೇಶನ್, ಮೊಬೈಲ್ ಫೋನ್ ಹೋಲ್ಡರ್‌, ಏಪ್ರನ್ ಮೌಂಟೆಡ್ ಮೊಬೈಲ್ ಚಾರ್ಜರ್ ಥೆಫ್ಟ್ & ಟೋ ಅಲರ್ಟ್‌ಗಳನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಪಡೆದಿದೆ.

Numeros N-First Electric Scooter Launched In India Rs 64 999 Price Details

ಹೊಸ 'ನ್ಯೂಮೆರೋಸ್ ಎನ್-ಫಸ್ಟ್' ಇ-ಸ್ಕೂಟರ್‌, ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಹೈಡ್ರಾಲಿಕ್ ಡ್ಯಾಂಪರ್‌ಗಳೊಂದಿಗೆ ಡುಯಲ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಜೊತೆಗಿದು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ (Numeros Diplos Max) ಕೂಡ ಖರೀದಿಗೆ ಲಭ್ಯ:

ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಡುಯಲ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಇನ್ಸ್ಟ್ರುಮೆಂಟ್ ಸ್ಕ್ರೀನ್ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Friday, November 7, 2025, 13:43 [IST]
English summary
Numeros n first electric scooter launched in india rs 64999 price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+