Oben Electric: ಹುಬ್ಬಳ್ಳಿ ಜನರಿಗೆ ಸಿಹಿಸುದ್ದಿ: ದೇಶದ 10 ನಗರಗಳಲ್ಲಿ ಚೋಟಾ ಮುಂಬೈಗೆ ಸ್ಥಾನ!

ಭಾರತದ 76ನೇ ಗಣರಾಜ್ಯೋತ್ಸವದಂದು ದೇಶೀಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಒಬೆನ್ ಎಲೆಕ್ಟ್ರಿಕ್ (Oben Electric), ದೇಶದ ಪ್ರಮುಖ ನಗರಗಳಲ್ಲಿ 10 ಹೊಸ ಶೋರೂಂಗಳು ಮತ್ತು ಸೇವಾ ಕೇಂದ್ರಗಳನ್ನು ಪ್ರಾರಂಭಿಸಿದೆ. ಈ ವಿಸ್ತರಣೆಯೊಂದಿಗೆ ಒಬೆನ್ ಎಲೆಕ್ಟ್ರಿಕ್ ಈಗ 14 ನಗರಗಳು ಮತ್ತು 7 ರಾಜ್ಯಗಳನ್ನು ಒಳಗೊಂಡ 22 ಶೋರೂಂಗಳನ್ನು ಒಳಗೊಂಡಿದೆ. ಕರ್ನಾಟದ ವಿಷಯಕ್ಕೆ ಬಂದರೆ ಚೋಟಾ ಮುಂಬೈ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಕಂಪನಿ ಆಯ್ಕೆ ಮಾಡಿರುವುದು ವಿಶೇಷ. ಉಳಿದಂತೆ ದೇಶದ ಪುಣೆ, ಕೇರಳ, ಛತ್ತೀಸ್‌ಗಢ, ನವದೆಹಲಿ, ಉತ್ತರ ಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆದಿದೆ.

ಹೊಸ ಶೋರೂಂಗಳು ಶಿವಾಜಿನಗರ ಮತ್ತು ಧನಕವಾಡಿ (ಪುಣೆ), ಹುಬ್ಬಳ್ಳಿ (ಕರ್ನಾಟಕ), ಮಲಪ್ಪುರಂ ಮತ್ತು ತ್ರಿಶೂರ್ (ಕೇರಳ), ಬಿಲಾಸ್ಪುರ್ (ಛತ್ತೀಸ್‌ಗಢ), ಲಕ್ನೋ, ಮೈನ್‌ಪುರಿ, ಬುಡೌನ್ (ಉತ್ತರ ಪ್ರದೇಶ) ಮತ್ತು ಅಧಿಚಿನಿ (ನವದೆಹಲಿ) ಗಳಲ್ಲಿವೆ. ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ಉದಯೋನ್ಮುಖ ಇವಿ ಮಾರುಕಟ್ಟೆಗಳಿಗೆ ಒಬೆನ್‌ನ ಮೊದಲ ಪ್ರವೇಶವಾಗಿದ್ದು, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿರುವುದಾಗಿ ಕಂಪನಿ ಹೇಳಿದೆ.

oben-electric-opened-10-new-showrooms-on-republic-day-in-india

ಒಬೆನ್ ಎಲೆಕ್ಟ್ರಿಕ್ ತನ್ನ ಹೊಸ ರೋರ್ ಎಲೆಕ್ಟ್ರಿಕ್ ಬೈಕ್‌ನೊಂದಿಗೆ ಭಾರತೀಯ ಇ-ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಕಂಪನಿಯು ಇತ್ತೀಚೆಗೆ ರೂ. 89,999 ಬೆಲೆಯಿಂದ ಆರಂಭವಾಗುವ ಒಬೆನ್ ರೋರ್ EZ ಅನ್ನು ಬಿಡುಗಡೆ ಮಾಡಿದೆ. ಇದು 3.3 ಸೆಕೆಂಡುಗಳಲ್ಲಿ 40 ಕಿ.ಮೀ ವೇಗ ಹಾಗೂ 95 ಕಿ.ಮೀ ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಮೂರು ಬ್ಯಾಟರಿ ವೇರಿಯೆಂಟ್‌ಗಳನ್ನು ಒಳಗೊಂಡಿರುವ ರೋರ್ ಬೈಕ್ ತನ್ನ ಟಾಪ್‌ ವೇರಿಯೆಂಟ್ ಸಿಂಗಲ್ ಚಾರ್ಜ್‌ನಲ್ಲಿ 175 ಕಿ.ಮೀ (IDC) ವರೆಗಿನ ರೇಂಜ್ ನೀಡುತ್ತದೆ. ಇದು ಹೈ - ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. ಎಲ್ಲಾ ಒಬೆನ್ ಮೋಟಾರ್‌ಸೈಕಲ್‌ಗಳು ಹೆಚ್ಚಿನ ಕಾರ್ಯಕ್ಷಮತೆಯ LFP (ಲಿಥಿಯಂ ಐರನ್ ಫಾಸ್ಫೇಟ್) ಬ್ಯಾಟರಿ ತಂತ್ರಜ್ಞಾನವನ್ನು ಒಳಗೊಂಡಿವೆ.

oben-electric-opened-10-new-showrooms-on-republic-day-in-india

ಕಂಪನಿಯ ಗುರಿ: ಒಬೆನ್ ಎಲೆಕ್ಟ್ರಿಕ್ ಭಾರತದ ಪ್ರಮುಖ ಮತ್ತು ಉದಯೋನ್ಮುಖ ಇವಿ ಮಾರುಕಟ್ಟೆಗಳಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುವ ಜೊತೆಗೆ ನಗರ ಮತ್ತು ಎರಡನೇ ಹಂತದ ನಗರಗಳಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. FY26 ರ ವೇಳೆಗೆ 50 ನಗರಗಳಲ್ಲಿ 100 ಹೊಸ ಶೋರೂಮ್‌ಗಳು ಮತ್ತು ಸೇವಾ ಕೇಂದ್ರಗಳನ್ನು ತೆರೆಯುವ ಯೋಜನೆ ಹೊಂದಿರುವುದಾಗಿ ತಿಳಿಸಿದೆ.

ಒಬೆನ್ ಎಲೆಕ್ಟ್ರಿಕ್ ಉನ್ನತ-ಕಾರ್ಯಕ್ಷಮತೆಯ ಎಲ್‌ಎಫ್‌ಪಿ ಬ್ಯಾಟರಿಗಳು, ಮೋಟಾರ್‌ಗಳು, ವೇಗದ ಚಾರ್ಜರ್‌ಗಳು ಮತ್ತು ವಾಹನ ನಿಯಂತ್ರಣ ಘಟಕಗಳು ಸೇರಿದಂತೆ ಎಲ್ಲಾ ನಿರ್ಣಾಯಕ ಘಟಕಗಳನ್ನು ಸ್ವಂತವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುತ್ತದೆ. ಇವೆಲ್ಲವನ್ನು ಭಾರತೀಯ ಗ್ರಾಹಕರಿಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಓಬೆನ್ ಕಂಪನಿ ಹೇಳಿದೆ.

oben-electric-opened-10-new-showrooms-on-republic-day-in-india

ಇತ್ತೀಚಿನ ಹೊಸ ಶೋರೂಂಗಳ ಬಗ್ಗೆ ಪ್ರತಿಕ್ರಿಯಿಸಿದ ಒಬೆನ್ ಎಲೆಕ್ಟ್ರಿಕ್‌ನ ಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರ್ವಾಲ್, "ದೇಶಾದ್ಯಂತ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸುವುದು ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. 10 ಹೊಸ ಶೋರೂಮ್‌ಗಳನ್ನು ತೆರೆಯುವ ಮೂಲಕ EV ಮಾರುಕಟ್ಟೆಗಳಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸುತ್ತಿದ್ದೇವೆ ಎಂದರು.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 27, 2025, 13:55 [IST]
English summary
Oben electric opened 10 new showrooms on republic day in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+