Amazon: ಹೇಗಿದೆ ಬೈಕ್? ಅಗ್ಗದ ಮೋಟಾರ್‌ಸೈಕಲ್ ಈಗ ಅಮೇಜ್‌ನ್‌ನಲ್ಲಿ ಖರೀದಿಗೆ ಲಭ್ಯ!

ಭಾರತದ ಪ್ರಮುಖ ಸ್ವದೇಶಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ 'ಓಬೆನ್ ಎಲೆಕ್ಟ್ರಿಕ್' (Oben Electric), ತನ್ನ ಜನಪ್ರಿಯ ಎಲೆಕ್ಟ್ರಿಕ್ ಬೈಕ್ ಆಗಿರುವ 'ರೋರ್ ಇಝಡ್' (Rorr EZ) ಅನ್ನು ಅಮೇಜಾನ್ (Amazon) ‌ನಲ್ಲಿ ಖರೀದಿಗೆ ಲಭ್ಯವಾಗಿಸುವುದನ್ನು ಘೋಷಿಸಿದೆ. ಭಾರತದಾದ್ಯಂತ ಇವಿ ವಾಹನಗಳ ಖರೀದಿಯನ್ನು ಹೆಚ್ಚಿಸಲು ಇ-ಕಾಮರ್ಸ್ ಅನ್ನು ಬಳಸಿಕೊಳ್ಳುತ್ತಿದ್ದು, ಒಬೆನ್ ಎಲೆಕ್ಟ್ರಿಕ್‌ನ ಈ ಕ್ರಮವು ಮಹತ್ವದ ಹೆಜ್ಜೆಯಾಗಿದೆ. ಈ ಡಿಜಿಟಲ್ ಆಕ್ರಮಣವು ಕಂಪನಿಯ ವಿಸ್ತರಣಾ ತಂತ್ರದ ಭಾಗವಾಗಿದ್ದು, ಶೋರೂಮ್ ನೆಟ್‌ವರ್ಕ್ ಜೊತೆಗೆ ಆನ್‌ಲೈನ್ ಮಾರಾಟದೊಂದಿಗೆ ಗ್ರಾಹಕರಿಗೆ ಖರೀದಿಯನ್ನು ಇನ್ನೂ ಸುಲಭವಾಗಿಸಲಾಗಿದೆ.

ಒಬೆನ್ ರೋರ್ ಇಝಡ್ ಈಗ ಅಮೆಜಾನ್‌ನಲ್ಲಿ ಕ್ರಮವಾಗಿ ರೂ.1,19,999 ಮತ್ತು ರೂ.1,29,999 ಬೆಲೆಯ 3.4 ಕಿಲೋವ್ಯಾಟ್ ಮತ್ತು 4.4 ಕಿಲೋವ್ಯಾಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಇದರಲ್ಲಿ ಮೂಲ ಬೆಲೆಯಲ್ಲಿ ರೂ. 20,000 ಆಫರ್ ಕೂಡ ಸೇರಿದೆ. ಅಮೆಜಾನ್‌ನೊಂದಿಗಿನ ಈ ಪಾಲುದಾರಿಕೆಯು ಬ್ರ್ಯಾಂಡ್‌ಗೆ ಡಿಜಿಟಲ್, ಮೌಲ್ಯ-ಪ್ರಜ್ಞೆಯುಳ್ಳ ಮತ್ತು ಸುಲಭ ಖರೀದಿಯನ್ನು ಬಯಸುವವರಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

oben-rorr-ez-now-on-amazon-here-is-more-details

ಬೈಕ್ ವಿಶೇಷತೆಗಳು

ನಗರ ಸವಾರರಿಗಾಗಿ ಉದ್ದೇಶಿಸಲಾದ ರೋರ್ ಇಝಡ್ ಅನ್ನು ಹೆಚ್ಚಿನ ಪರ್ಫಾಮೆನ್ಸ್, ಆರಾಮದಾಯಕ ಸವಾರಿ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಒಬೆನ್‌ನ ARX ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಇದು ವಿವಿಧ ನಗರ ಪರಿಸ್ಥಿತಿಗಳಲ್ಲಿ ಚುರುಕಾದ ನಿರ್ವಹಣೆ, ಬಲವಾದ ಸ್ಥಿರತೆ ಮತ್ತು ವರ್ಧಿತ ಸವಾರಿ ಸೌಕರ್ಯವನ್ನು ನೀಡುತ್ತದೆ.

ಗಂಟೆಗೆ 95 ಕಿಮೀ ಗರಿಷ್ಠ ವೇಗ, ಕೇವಲ 3.3 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 40 ಕಿಮೀ ವೇಗವರ್ಧನೆ ಮತ್ತು 52 Nm ಟಾರ್ಕ್‌ನೊಂದಿಗೆ, ರೋರ್ ಇಝಡ್ ಉತ್ತಮ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದೆ. ಇದು 175 ಕಿ.ಮೀ ವರೆಗೆ ಐಡಿಸಿ-ಪ್ರಮಾಣೀಕೃತ ರೇಂಜ್ ನೀಡುತ್ತದೆ. ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಒಬೆನ್‌ನ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಎಲ್‌ಎಫ್‌ಪಿ ಬ್ಯಾಟರಿಯನ್ನು ಹೊಂದಿದೆ.

oben-rorr-ez-now-on-amazon-here-is-more-details

ಇದು ಎರಡು ಪಟ್ಟು ಬ್ಯಾಟರಿ ಬಾಳಿಕೆ, ಶೇ50 ಕ್ಕೂ ಹೆಚ್ಚಿನ ಶಾಖ ಪ್ರತಿರೋಧ ಮತ್ತು ಭಾರತೀಯ ರಸ್ತೆಗಳು, ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ನೈಜ-ಪ್ರಪಂಚದ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ರೋರ್ ಇಝಡ್ ಜಿಯೋ-ಫೆನ್ಸಿಂಗ್, ಥೆಫ್ಟ್ ಪ್ರೊಟೆಕ್ಷನ್, ಯೂನಿಫೈಡ್ ಬ್ರೇಕ್ ಅಸಿಸ್ಟ್ (ಯುಬಿಎ) ಮತ್ತು ಡ್ರೈವ್ ಅಸಿಸ್ಟ್ ಸಿಸ್ಟಮ್ (ಡಿಎಎಸ್) ಸೇರಿದಂತೆ ಸುಧಾರಿತ ಸಂಪರ್ಕ ಮತ್ತು ರೈಡರ್ ಅಸಿಸ್ಟೆನ್ಸ್ ತಂತ್ರಜ್ಞಾನಗಳನ್ನು ಸಹ ಒಳಗೊಂಡಿದೆ.

ಎಲೆಕ್ಟ್ರೋ ಆಂಬರ್, ಸರ್ಜ್ ಸಯಾನ್, ಲುಮಿನಾ ಗ್ರೀನ್ ಮತ್ತು ಫೋಟಾನ್ ವೈಟ್ ಎಂಬ ನಾಲ್ಕು ಗಮನಾರ್ಹ ಬಣ್ಣಗಳಲ್ಲಿ ಲಭ್ಯವಿದೆ. ದೀರ್ಘಾವಧಿಯ ಮಾಲೀಕತ್ವದ ಭರವಸೆಯನ್ನು ಮತ್ತಷ್ಟು ಬಲಪಡಿಸಲು, ಒಬೆನ್ ಎಲೆಕ್ಟ್ರಿಕ್ ಕೇವಲ ರೂ.9,999 ಗೆ ಪ್ರೊಟೆಕ್ಟ್ 8/80 ಬ್ಯಾಟರಿ ವಾರೆಂಟಿ ಯೋಜನೆಯನ್ನು ನೀಡುತ್ತಿದೆ. ಇದು ಎಂಟು ವರ್ಷಗಳು ಅಥವಾ 80,000 ಕಿಲೋಮೀಟರ್‌ಗಳವರೆಗೆ ವಾರೆಂಟಿ ನೀಡುತ್ತದೆ.

ಒಬೆನ್ ಎಲೆಕ್ಟ್ರಿಕ್ ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ 50 ಕ್ಕೂ ಹೆಚ್ಚು ನಗರಗಳಲ್ಲಿ 150 ಕ್ಕೂ ಹೆಚ್ಚು ಶೋರೂಮ್‌ಗಳಿಗೆ ತನ್ನ ಬ್ರಾಂಡ್ ವಿಸ್ತರಿಸುವ ಗುರಿಯನ್ನು ಹೊಂದಿದೆ. ತನ್ನ ಇತ್ತೀಚಿನ ಡಿಜಿಟಲ್ ಕ್ಷೇತ್ರದ ವಿಸ್ತರಣೆಯೊಂದಿಗೆ, ಒಬೆನ್ ಎಲೆಕ್ಟ್ರಿಕ್ ಭಾರತದಲ್ಲಿ EV ಗಳ ಖರೀದಿಯನ್ನು ಇನ್ನೂ ಸುಲಭಗೊಳಿಸಿದೆ.

ಒಬೆನ್ ಎಲೆಕ್ಟ್ರಿಕ್‌ನ ಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರ್ವಾಲ್ ಮಾತನಾಡಿ, "ಅಮೆಜಾನ್‌ನಲ್ಲಿ ರೋರ್ ಇಝಡ್ ಲಭ್ಯವಾಗುವಂತೆ ಮಾಡುವುದು ಭಾರತೀಯ ಗ್ರಾಹಕರ ವಿಕಸನಗೊಳ್ಳುತ್ತಿರುವ ಖರೀದಿ ನಡವಳಿಕೆಯೊಂದಿಗೆ ಹೊಂದಿಕೊಳ್ಳುವ ಒಂದು ಕಾರ್ಯತಂತ್ರದ ಕ್ರಮವಾಗಿದೆ. ಅಮೆಜಾನ್‌ನಲ್ಲಿ ರೋರ್ ಇಝಡ್‌ನ ಪ್ರಾರಂಭವು ಇವಿ ಅಳವಡಿಕೆಯನ್ನು ಅನುಕೂಲಕರ ಮತ್ತು ವ್ಯಾಪಕವಾಗಿಸುವ ನಮ್ಮ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ" ಎಂದರು.

Article Published On: Monday, July 14, 2025, 16:52 [IST]
English summary
Oben rorr ez now on amazon here is more details
Read more on oben electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+