Ola: 1ರೂ. ಖರ್ಚಿಲ್ಲದೆ 501 ಕಿ.ಮೀ ಓಡುವ ಓಲಾ ಬೈಕ್ ಡೆಲಿವರಿ ಪ್ರಾರಂಭ! ರೂ.10,000 ಆಫರ್!
ಭಾರತದ ಪ್ರಮುಖ EV ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ (Ola Electric), ತನ್ನ ರೋಡ್‌ಸ್ಟರ್ ಎಕ್ಸ್ (Roadster X) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ವಿತರಣೆಯನ್ನು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಪ್ರಾರಂಭಿಸಿದೆ. ಕಂಪನಿಯು ತನ್ನ 'ರೈಡ್ ದಿ ಫ್ಯೂಚರ್' ಅಭಿಯಾನದ ಭಾಗವಾಗಿ ವಿಸ್ತೃತ ವಾರೆಂಟಿ, ಮೂವ್‌ಓಎಸ್+ ಮತ್ತು ಎಸೆನ್ಷಿಯಲ್ ಕೇರ್ ಅನ್ನು ಉಚಿತವಾಗಿ ಪಡೆಯುವ ಮೊದಲ 5,000 ಗ್ರಾಹಕರಿಗೆ ರೂ. 10,000 ಮೌಲ್ಯದ ಆಫರ್‌ಗಳನ್ನು ಘೋಷಿಸಿದೆ. ಈ ಹೊಸ ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ವಿವಿರಗಳನ್ನು ಇಲ್ಲಿ ನೋಡೋಣ.
ರೋಡ್‌ಸ್ಟರ್ X ಮೋಟಾರ್‌ಸೈಕಲ್‌ಗಳು ಪರ್ಫಾಮೆನ್ಸ್ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಮಿಡ್ - ಡ್ರೈವ್ ಮೋಟಾರ್‌ನೊಂದಿಗೆ ಬರುತ್ತವೆ. ಇವು ಚೈನ್ ಡ್ರೈವ್ ಮತ್ತು ಪರಿಣಾಮಕಾರಿ ಟಾರ್ಕ್ ವರ್ಗಾವಣೆಗಾಗಿ ಸಂಯೋಜಿತ MCU ಅನ್ನು ಸಹ ಒಳಗೊಂಡಿವೆ. ಈ ಮೂಲಕ ಉತ್ತಮ ವೇಗವರ್ಧನೆ ಮತ್ತು ಸುಧಾರಿತ ರೇಂಜ್ ಒದಗಿಸುತ್ತವೆ ಎಂದು ಕಂಪನಿ ತಿಳಿಸಿದೆ.

ರೋಡ್‌ಸ್ಟರ್ X ಮೋಟಾರ್‌ಸೈಕಲ್‌ಗಳಲ್ಲಿ ಫ್ಲಾಟ್ ಕೇಬಲ್‌ಗಳನ್ನು ಸಹ ನೀಡಲಾಗಿದೆ. ಇದು ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಹೊಸ ಕ್ರಾಂತಿಯಾಗಿದ್ದು, ಈ ಕೇಬಲ್‌ಗಳು ಪ್ಯಾಕೇಜಿಂಗ್ ದಕ್ಷತೆಯನ್ನು ಸುಧಾರಿಸುತ್ತದೆ. ತೂಕವನ್ನು ಕಡಿಮೆ ಮಾಡಿ ಹೀಟಿಂಗ್ ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ, ಒಟ್ಟಾರೆ ಬಾಳಿಕೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸುತ್ತದೆ ಎಂದು ಓಲಾ ತಿಳಿಸಿದೆ.
ರೋಡ್‌ಸ್ಟರ್ ಎಕ್ಸ್ ಮೋಟಾರ್‌ಸೈಕ್ಲಿಂಗ್ ವಿಭಾಗಕ್ಕೆ ನಮ್ಮ ಪ್ರವೇಶವನ್ನು ಗುರುತಿಸುವ ಒಂದು ದಿಟ್ಟ ಹೆಜ್ಜೆಯಾಗಿದೆ. ಭವಿಷ್ಯದ ಬೈಕ್ ಅನ್ನು ಓಡಿಸಲು ಬಯಸುವ ಪೀಳಿಗೆಗಾಗಿ ರೋಡ್‌ಸ್ಟರ್ ಎಕ್ಸ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ. ಇಂದಿನಿಂದ ಡೆಲಿವರಿಗಳು ಪ್ರಾರಂಭವಾಗುವುದರೊಂದಿಗೆ, ರೋಡ್‌ಸ್ಟರ್ ಎಕ್ಸ್ ದ್ವಿಚಕ್ರ ವಾಹನ ವಿಭಾಗದಲ್ಲಿ EV ಗಳ ನಿಜವಾದ ಸಾಮರ್ಥ್ಯವನ್ನು ತೋರಿಸಲಿವೆ ಎಂದು ಓಲಾ ಹೇಳಿಕೊಂಡಿದೆ.

ರೋಡ್‌ಸ್ಟರ್ X ವಿಶೇಷತೆಗಳು: ರೋಡ್‌ಸ್ಟರ್ X ಮೋಟಾರ್‌ಸೈಕಲ್ ಸಿಂಗಲ್ ABS ನೊಂದಿಗೆ ಪೇಟೆಂಟ್ ಪಡೆದ ಬ್ರೇಕ್ - ಬೈ - ವೈರ್ ತಂತ್ರಜ್ಞಾನ ಮತ್ತು ಸುಧಾರಿತ ರೀಜೆನ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್‌ನಂತಹ ಸ್ಮಾರ್ಟ್ ಮೂವ್‌ಓಎಸ್ 5 ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ರೋಡ್‌ಸ್ಟರ್ X ಸರಣಿಯ ಬ್ಯಾಟರಿ ವ್ಯವಸ್ಥೆಯು IP67 ಜಲನಿರೋಧಕ ಮತ್ತು ಧೂಳು - ನಿರೋಧಕ ಪ್ರಮಾಣೀಕರಣ, ಸುಧಾರಿತ ವೈರ್ ಬಾಂಡಿಂಗ್ ತಂತ್ರಜ್ಞಾನ ಮತ್ತು ಸುಲಭ ನಿರ್ವಹಣೆಯನ್ನು ಸಕ್ರಿಯಗೊಳಿಸುವ ಬ್ಯಾಟರಿ ನಿರ್ವಹಣಾ ವ್ಯವಸ್ಥೆ (BMS) ಅನ್ನು ಹೊಂದಿದೆ ಎಂದು ಓಲಾ ಎಲೆಕ್ಟ್ರಿಕ್ ತಿಳಿಸಿದೆ.
ಓಲಾ ಎಲೆಕ್ಟ್ರಿಕ್‌ನ ರೋಡ್‌ಸ್ಟರ್ X ಸರಣಿಯ 2.5kWh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 99,999, 3.5kWh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 1,09,999 ಮತ್ತು 4.5 kWh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 1,24,999 ನಿಂದ ಪ್ರಾರಂಭವಾಗುತ್ತವೆ.
ರೋಡ್‌ಸ್ಟರ್ X+ 4.5kWh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆ ರೂ. 1,29,999 ಆಗಿದೆ. ಹಾಗೆಯೇ ರೋಡ್‌ಸ್ಟರ್ X+ 9.1kWh ಬ್ಯಾಟರಿ ಹೊಂದರಿವ ವೇರಿಯೆಂಟ್ ಬೆಲೆ ರೂ. 1,99,999 ಆಗಿದೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ). ಇದು ಪ್ರತಿ ಚಾರ್ಜ್‌ಗೆ 501 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








