Ola Electric: ಓಲಾ ಕಥೆ ಮುಗೀತು ಎಂದವರಿಗೆ ಸರಿಯಾಗಿ ಉತ್ತರ: ಜನವರಿಯಲ್ಲಿ ಅಬ್ಬರ!
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ (Ola electric), ಜನವರಿ ತಿಂಗಳ ಮಾರಾಟದಲ್ಲಿ ಶೇ25 ರಷ್ಟು ಮಾರುಕಟ್ಟೆ ಪಾಲನ್ನು ಸಾಧಿಸಿರುವುದಾಗಿ ಪ್ರಕಟಿಸಿದೆ. ಅಂದರೆ 24,341 ಯುನಿಟ್ ವಾಹನಗಳನ್ನು (ವಾಹನ್ ದತ್ತಾಂಶದ ಪ್ರಕಾರ) ನೋಂದಾಯಿಸಿದೆ. ಈ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇತ್ತೀಚೆಗೆ ದೇಶಾದ್ಯಂತ 4,000 ಶೋರೂಂಗಳನ್ನು ವಿಸ್ತರಿಸುವ ಮೂಲಕ ಮಾರಾಟ ಮತ್ತು ಸೇವಾ ಜಾಲವನ್ನು ಹೆಚ್ಚಿಸಿದೆ. ಕಂಪನಿಯು ನೋಂದಣಿಗಳಲ್ಲಿ ತಿಂಗಳಿನಿಂದ ತಿಂಗಳಿಗೆ ಶೇ76.4 ರಷ್ಟು ಬೃಹತ್ ಬೆಳವಣಿಗೆಯನ್ನು ಕಂಡಿರುವುದಾಗಿ ಹೇಳಿಕೊಂಡಿದೆ.
ಇತ್ತೀಚಿನ Gen 3 S1 ಸ್ಕೂಟರ್‌ಗಳ ಜೊತೆಗೆ, ಕಂಪನಿಯು ತನ್ನ Gen 2 ಸ್ಕೂಟರ್‌ಗಳನ್ನು ರೂ.35,000 ವರೆಗಿನ ರಿಯಾಯಿತಿಯಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಘೋಷಿಸಿದೆ. ಈ ಮೂಲಕ S1 Pro, S1 X (2kWh, 3kWh, ಮತ್ತು 4kWh) ಈಗ ಕ್ರಮವಾಗಿ ರೂ.1,14,999, ರೂ.69,999, ರೂ.79,999 ಮತ್ತು ರೂ.89,999 (ಎಕ್ಸ್ ಶೋರೂ) ನಿಂದ ಪ್ರಾರಂಭವಾಗುತ್ತದೆ.

ಕಂಪನಿಯು ಫೆಬ್ರವರಿ ಮಧ್ಯದಿಂದ MoveOS 5 ಬೀಟಾವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. MoveOS 5 ಸ್ಮಾರ್ಟ್‌ವಾಚ್ ಅಪ್ಲಿಕೇಶನ್, ಸ್ಮಾರ್ಟ್ ಪಾರ್ಕ್, ಓಲಾ ಮ್ಯಾಪ್ಸ್‌ನಿಂದ ನಡೆಸಲ್ಪಡುವ ರೋಡ್ ಟ್ರಿಪ್ ಮೋಡ್, ಲೈವ್ ಲೊಕೇಶನ್ ಶೇರಿಂಗ್, ಎಮರ್ಜೆನ್ಸಿ SOS ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡುತ್ತದೆ.
ಕಂಪನಿಯು ಈ ಹಿಂದೆ ಓಲಾ ಗಿಗ್, ಓಲಾ ಗಿಗ್+, ಓಲಾ S1 Z, ಮತ್ತು ಓಲಾ S1 Z+ ಅನ್ನು ಒಳಗೊಂಡಿರುವ ತನ್ನ ಗಿಗ್ ಮತ್ತು S1 Z ಸ್ಕೂಟರ್ ಶ್ರೇಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಹೊಸ ಸ್ಕೂಟರ್‌ಗಳು ತೆಗೆಯಬಹುದಾದ ಬ್ಯಾಟರಿಗಳು ಸೇರಿದಂತೆ ಬಾಳಿಕೆ ಬರುವ, ಕೈಗೆಟುಕುವ ಬೆಲೆಯನ್ನು ಹೊಂದಿರಲಿವೆ ಎಂದು ಕಂಪನಿ ಹೇಳಿದೆ.

ಹೊಸ ಅಪ್‌ಡೇಟ್‌ಗಳು: ಕಂಪನಿಯು ಇತ್ತೀಚೆಗೆ ತನ್ನ Gen 3 ಸ್ಕೂಟರ್ ಆಗಿರುವ ಹೊಸ S1 Pro+ ಅನ್ನು 5.3kWh ಬ್ಯಾಟರಿ ಮತ್ತು 4kWh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕ್ರಮವಾಗಿ ರೂ.1,69,999 ಮತ್ತು ರೂ.1,54,999 ಇದೆ. 4kWh ಮತ್ತು 3kWh ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರುವ S1 Pro ಬೆಲೆ ಕ್ರಮವಾಗಿ ರೂ.1,34,999 ಮತ್ತು ರೂ.1,14,999 (ಇವೆಲ್ಲವು ಎಕ್ಸ್ ಸೋರೂಂ ಬೆಲೆಗಳು) ಇದೆ.
S1 X ಶ್ರೇಣಿಯ 2kWh ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆಯು ರೂ.79,999, 3kWh ಬ್ಯಾಟರಿ ಹೊಂದಿರುವ ಸ್ಕೂಟರ್‌ಗೆ ರೂ.89,999 ಮತ್ತು 4kWh ಬ್ಯಾಟರಿ ಹೊಂದಿರುವ ಸ್ಕೂಟರ್‌ಗೆ ರೂ.99,999 ಬೆಲೆಯಿದೆ. S1 X+ 4kWh ಬ್ಯಾಟರಿಯೊಂದಿಗೆ ಲಭ್ಯವಿದ್ದು, ಇದರ ಬೆಲೆಯು 1,07,999 (ಇವೆಲ್ಲವು ಎಕ್ಸ್ ಸೋರೂಂ ಬೆಲೆಗಳು) ಇದೆ.

Gen 3 ಪ್ಲಾಟ್‌ಫಾರ್ಮ್ ಡ್ಯುಯಲ್ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು EV ಸ್ಕೂಟರ್‌ಗಳಿಗೆ ಪೇಟೆಂಟ್ ಪಡೆದ ಬ್ರೇಕ್-ಬೈ-ವೈರ್ ತಂತ್ರಜ್ಞಾನವನ್ನು ಹೊಂದಿದೆ. ಇದು ಬ್ರೇಕ್ ಪೊಸಿಷನ್ ಸೆನ್ಸರ್ ಆಧರಿಸಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ. ಇದು ಎಲ್ಲಾ ಸವಾರಿ ಪರಿಸ್ಥಿತಿಗಳಲ್ಲಿ ಸುರಕ್ಷತೆ, ನಿಯಂತ್ರಣ ಮತ್ತು ಹೆಚ್ಚು ಪರಿಣಾಮಕಾರಿ ಬ್ರೇಕಿಂಗ್ ಅನ್ನು ನೀಡುವುದಾಗಿ ಓಲಾ ತಿಳಿಸಿದೆ.
ಸಂಪೂರ್ಣ ಎಲ್ಲಾ ವಾಹನಗಳು ಈಗ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮಿಡ್-ಡ್ರೈವ್ ಮೋಟಾರ್ ಮತ್ತು ಚೈನ್ ಡ್ರೈವ್ ಅನ್ನು ಹೊಂದಿವೆ. ಉತ್ತಮ ರೇಂಜ್ ಮತ್ತು ದಕ್ಷತೆಗಾಗಿ ಸಂಯೋಜಿತ MCU (ಮೋಟಾರ್ ಕಂಟ್ರೋಲ್ ಯೂನಿಟ್) ಅನ್ನು ಹೊಂದಿವೆ. Gen 2 ರಲ್ಲಿ, Gen 3 ಗರಿಷ್ಠ ಪವರ್‌ನ್ಲಲಿ ಶೇ20 ರಷ್ಟು ಹೆಚ್ಚಳ, ವೆಚ್ಚದಲ್ಲಿ ಶೇ11 ರಷ್ಟು ಕಡಿತ ಮತ್ತು ಪವರ್ ದಕ್ಷತೆಯಲ್ಲಿ ಶೇ4 ರಷ್ಟು ಹೆಚ್ಚಳವನ್ನು ಹೊಂದಿದೆ.
ಕಂಪನಿಯು ಕಳೆದ ವರ್ಷ ರೋಡ್‌ಸ್ಟರ್ X (2.5 kWh, 3.5 kWh, 4.5 kWh), ರೋಡ್‌ಸ್ಟರ್ (3.5 kWh, 4.5 kWh, 6 kWh), ಮತ್ತು ರೋಡ್‌ಸ್ಟರ್ ಪ್ರೊ (8 kWh, 16 kWh) ಗಳನ್ನು ಒಳಗೊಂಡಿರುವ ತನ್ನ ರೋಡ್‌ಸ್ಟರ್ ಮೋಟಾರ್‌ಸೈಕಲ್ ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಮೋಟಾರ್‌ಸೈಕಲ್‌ಗಳು ಆಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರಲಿವೆ ಎಂದು ಕಂಪನಿ ಭರವಸೆ ನೀಡಿದೆ.


Click it and Unblock the Notifications








