PLI ಪ್ರಮಾಣೀಕರಣ ಪಡೆದ ಓಲಾ 3ನೇ ಜನರೇಷನ್ ಸ್ಕೂಟರ್‌ಗಳು

ಭಾರತದ ಜನಪ್ರಿಯ EV ಕಂಪನಿಯಾದ ಓಲಾ ಎಲೆಕ್ಟ್ರಿಕ್, ತನ್ನ ಜೆನ್ 3 ಸ್ಕೂಟರ್‌ಗಳಿಗಾಗಿ ತಯಾರಾಗುವ ಆಟೋಮೊಬೈಲ್ ಮತ್ತು ಆಟೋ ಘಟಕಗಳ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯಡಿ ಅರ್ಹತಾ ಮೌಲ್ಯಮಾಪನ ಅವಶ್ಯಕತೆಗಳ ಪ್ರಮಾಣೀಕರಣವನ್ನು ಪಡೆಯಲಾಗಿದೆ ಎಂದು ಘೋಷಿಸಿದೆ. ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ಆಶ್ರಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾ (ARAI) ಈ ಪ್ರಮಾಣೀಕರಣವನ್ನು ಎಲ್ಲಾ ಏಳು ಓಲಾ S1 ಜನ್ 3 ಸ್ಕೂಟರ್‌ಗಳಿಗೆ ನೀಡಿದೆ ಎಂದು ಓಲಾ ಹೇಳಿದೆ.

ಈ ಮೈಲಿಗಲ್ಲಿನೊಂದಿಗೆ, ಓಲಾ ಎಲೆಕ್ಟ್ರಿಕ್‌ನ ಜೆನ್ 2 ಮತ್ತು ಜನ್ 3 ಸ್ಕೂಟರ್ ಪೋರ್ಟ್‌ಫೋಲಿಯೊ ಈಗ PLI-ಪ್ರಮಾಣೀಕೃತವಾಗಿದೆ. PLI ಪ್ರಮಾಣೀಕರಣವು ಓಲಾ ಎಲೆಕ್ಟ್ರಿಕ್ ಅನ್ನು 2028 ರವರೆಗೆ ನಿರ್ಧರಿಸಿದ ಮಾರಾಟ ಮೌಲ್ಯದ (DSV) 13% ರಿಂದ 18% ವರೆಗಿನ ಪ್ರೋತ್ಸಾಹಕಗಳಿಗೆ ಅರ್ಹವಾಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ola-electric-secures-pli-certification-for-its-gen-3-scooter-portfolio

S1 Pro 3 kWh, S1 Pro 4 kWh, S1 Pro+ 4 kWh, S1 X 2 kWh, S1 X 3 kWh, S1 X 4 kWh ಮತ್ತು S1 X+ 4 kWh ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಜನ್ 3 ಪೋರ್ಟ್‌ಫೋಲಿಯೊ, ಕಂಪನಿಯ ಪ್ರಸ್ತುತ ಮಾರಾಟದ ಬಹುಪಾಲು ಭಾಗವನ್ನು ಪ್ರತಿನಿಧಿಸುತ್ತದೆ.

ಪರಿಣಾಮವಾಗಿ, ಈ ಪ್ರಮಾಣೀಕರಣವು Q2 FY26 ರಿಂದ ಓಲಾ ಎಲೆಕ್ಟ್ರಿಕ್‌ನ ಲಾಭದಾಯಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಜ್ಜಾಗಿದೆ. ನಮ್ಮ ಮಾರಾಟದ ಬಹುಭಾಗವನ್ನು ರೂಪಿಸುವ ನಮ್ಮ Gen 3 ಸ್ಕೂಟರ್‌ಗಳಿಗೆ PLI ಪ್ರಮಾಣೀಕರಣವನ್ನು ಪಡೆಯುವುದು ಲಾಭದಾಯಕತೆಯತ್ತ ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಇದು ನಮ್ಮ ವೆಚ್ಚ ರಚನೆ ಮತ್ತು ಅಂಚುಗಳನ್ನು ನೇರವಾಗಿ ಬಲಪಡಿಸುತ್ತದೆ.

ola-electric-secures-pli-certification-for-its-gen-3-scooter-portfolio

ಹಾಗೆಯೇ ಸುಸ್ಥಿರ ಬೆಳವಣಿಗೆಯನ್ನು ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮ ಆಟೋ ವ್ಯವಹಾರವು EBITDA ಅನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಪ್ರಮಾಣೀಕರಣವು ಆ ಗುರಿಯನ್ನು ಸಾಧಿಸಲು ಬಲವಾದ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಗ್ರಾಹಕರು ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಅತ್ಯುತ್ತಮ EV ಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಎಂದು ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವಕ್ತಾರರು ಹೇಳಿದರು.

ತನ್ನ ವಾರ್ಷಿಕ 'ಸಂಕಲ್ಪ್' ಕಾರ್ಯಕ್ರಮದ ಸಂದರ್ಭದಲ್ಲಿ, ಕಂಪನಿಯು 5.2 kWh ಮತ್ತು 4 kWh ಸಾಮರ್ಥ್ಯವಿರುವ S1 Pro ಸ್ಪೋರ್ಟ್, S1 Pro+ 5.2 kWh ಮತ್ತು 4680 ಭಾರತ್ ಸೆಲ್‌ನಿಂದ ನಡೆಸಲ್ಪಡುವ ರೋಡ್‌ಸ್ಟರ್ X+ 9.1 kWh ಅನ್ನು ಕ್ರಮವಾಗಿ ರೂ. 1,49,999, ರೂ. 1,69,999 ಮತ್ತು ರೂ. 1,89,999 ಪರಿಚಯಾತ್ಮಕ ಬೆಲೆಯಿಂದ ಪ್ರಾರಂಭಿಸುವುದಾಗಿ ಘೋಷಿಸಿತು.

ola-electric-secures-pli-certification-for-its-gen-3-scooter-portfolio

S1 Pro ಸ್ಪೋರ್ಟ್ ವಿತರಣೆಗಳು ಜನವರಿ 2026 ರಲ್ಲಿ ಪ್ರಾರಂಭವಾಗಲಿದ್ದು, S1 Pro+ 5.2 kWh ಮತ್ತು ರೋಡ್‌ಸ್ಟರ್ X+ 9.1 kWh ವಿತರಣೆಗಳು ಈ ನವರಾತ್ರಿಯಲ್ಲಿ ಪ್ರಾರಂಭವಾಗಲಿವೆ. ಒಟ್ಟಾರೆ ಈ ವರ್ಷ ಓಲಾ ತನ್ನ ಲಾಭವನ್ನು ದುಪ್ಪಟ್ಟುಗೊಳಿಸುವ ವಿಶ್ವಾಸದಲ್ಲಿದ್ದು, ಈ ಬಾರಿಯ ಹಬ್ಬದ ಸೀಸನ್ ಯಾವಮಟ್ಟಿಗೆ ಲಾಭ ತಂದುಕೊಡಲಿದೆ ಕಾದುನೋಡಬೇಕು.

ಓಲಾ ಬಗ್ಗೆ: ಇವಿಗಳು ಮತ್ತು ನಿರ್ಣಾಯಕ ಘಟಕಗಳನ್ನು ಉತ್ಪಾದಿಸುವ ತಮಿಳುನಾಡಿನಲ್ಲಿರುವ ಓಲಾ ಫ್ಯೂಚರ್‌ಫ್ಯಾಕ್ಟರಿ, ಸೆಲ್ ಮತ್ತು ಬ್ಯಾಟರಿ ತಂತ್ರಜ್ಞಾನವನ್ನು ಸಹ ಅಭಿವೃದ್ಧಿಪಸುತ್ತಿದೆ. ಓಲಾದ ಬೆಂಗಳೂರು ಮೂಲದ ಬ್ಯಾಟರಿ ಇನ್ನೋವೇಶನ್ ಸೆಂಟರ್ (ಬಿಐಸಿ) ನಿಂದ ಬೆಂಬಲಿತವಾಗಿದೆ. ಓಲಾದ ಆರ್ & ಡಿ ಪ್ರಯತ್ನಗಳು ಭಾರತ, ಯುಕೆ ಮತ್ತು ಯುಎಸ್‌ನಲ್ಲಿ ವ್ಯಾಪಿಸಿ, ನವೀನ ಇವಿ ಉತ್ಪನ್ನಗಳು ಮತ್ತು ಕೋರ್ ಘಟಕಗಳ ಮೇಲೆ ಕೇಂದ್ರೀಕರಿಸುತ್ತವೆ.

ಪ್ರಸ್ತುತ ಓಲಾ ಭಾರತದಾದ್ಯಂತ 4,000 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ನೇರ - ಗ್ರಾಹಕ ವಿತರಣಾ ಜಾಲವನ್ನು ಮತ್ತು ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ಹೊಂದಿದೆ. ಇದು ಓಲಾ ಎಲೆಕ್ಟ್ರಿಕ್ ಅನ್ನು ದೇಶದಲ್ಲಿ ಅತಿದೊಡ್ಡ ಕಂಪನಿ - ಮಾಲೀಕತ್ವದ ಆಟೋಮೋಟಿವ್ ಅನುಭವ ಕೇಂದ್ರಗಳ ಜಾಲವನ್ನಾಗಿ ಮಾಡಿದೆ ಎಂದು ಹೇಳಬಹುದು.

More from DriveSpark

Article Published On: Tuesday, August 26, 2025, 15:25 [IST]
English summary
Ola electric secures pli certification for its gen 3 scooter portfolio
Read more on ola electric india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+