Ola: ರೂ.84,999.. 200 Km ರೇಂಜ್.. ಓಲಾದ ಮೊದಲ ಎಲೆಕ್ಟ್ರಿಕ್ ಬೈಕ್‌ನ ವಿತರಣೆ ಶುರು.. ಸಂಭ್ರಮದಲ್ಲಿ ಗ್ರಾಹಕರು!
ಓಲಾ ಎಲೆಕ್ಟ್ರಿಕ್ (Ola Electric), ಇದೇ ಫೆಬ್ರವರಿಯಲ್ಲಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ರೋಡ್‌ಸ್ಟರ್ ಎಕ್ಸ್'ನ್ನು ಬಿಡುಗಡೆಗೊಳಿಸಿತ್ತು. ಈ ನೂತನ ಇ-ಬೈಕ್ ಹೆಚ್ಚು ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ. ಸದ್ಯ, ಈ ಹೊಸ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ವಿತರಣೆಯನ್ನು ಕೂಡ ಪ್ರಾರಂಭ ಮಾಡಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರಿಗೆ ಹೊಚ್ಚ ಹೊಸ 'ರೋಡ್‌ಸ್ಟರ್ ಎಕ್ಸ್' ಇ-ಬೈಕ್‌ನ್ನು ವಿತರಿಸುವ ಕಾರ್ಯಕ್ಕೆ 'ಓಲಾ ಎಲೆಕ್ಟ್ರಿಕ್' ಚಾಲನೆ ನೀಡಿದೆ. ಈ ಕುರಿತ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಶುಕ್ರವಾರದಿಂದಲೇ ಅಧಿಕೃತವಾಗಿ ಡೆಲಿವರಿ ಮಾಡುವುದಕ್ಕೆ ಶುರು ಮಾಡಲಾಯಿತು. ಆದರೂ ವಾರಾಂತ್ಯ ದಿನವಾದ ಭಾನುವಾರದಂದು ಖರೀದಿದಾರರು ನಾಮುಂದು - ತಾಮುಂದು ಎಂಬಂತೆ ವಿತರಣೆ ಪಡೆದರು.

ಓಲಾ ಎಲೆಕ್ಟ್ರಿಕ್ ಶೋರೂಂಗಳ ಮುಂದೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಗ್ರಾಹಕರಿಗೆ ಡೀಲರ್‌ಶಿಪ್ ಸಿಬ್ಬಂದಿ ಖುಷಿಯಿಂದಲೇ 'ರೋಡ್‌ಸ್ಟರ್ ಎಕ್ಸ್' ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ವಿತರಣೆ ಮಾಡಿದರು. ನೂತನ ಇ-ಬೈಕ್‌ನ್ನು ಡೆಲಿವರಿ ಪಡೆದುಕೊಂಡ ಖರೀದಿದಾರರ ಸಂತಸಕ್ಕೆ ಪಾರವೇ ಇರಲಿಲ್ಲ. ಖುಷಿಯಿಂದಲೇ ಗಾಡಿಯ ಕೀಯನ್ನು ಪಡೆದರು.
ಓಲಾ ರೋಡ್‌ಸ್ಟರ್ ಎಕ್ಸ್ (Ola Roadster X) ವಿಶೇಷತೆಗಳೇನು..
ಇದೊಂದು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದ್ದು, ಅತಿ ಕಡಿಮೆ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಇದು ಬ್ಯಾಟರಿ ಪ್ಯಾಕ್‌ಗೆ ಅನುಗುಣವಾಗಿ ಕನಿಷ್ಠ ರೂ.84,999 ಮತ್ತು ಗರಿಷ್ಠ ರೂ.1.05 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದೆ. ಇದರ 2.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 117 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಇನ್ನೊಂದು 4.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 159 ಕಿಲೋಮೀಟರ್ ಓಡುತ್ತದೆ. ಮತ್ತೊಂದು 4.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ಪೂರ್ತಿ ಚಾರ್ಜ್‌ನಲ್ಲಿ 200 ಕಿಲೋಮೀಟರ್ ಕ್ರಮಿಸುತ್ತದೆ.
ಈ ಓಲಾ ರೋಡ್‌ಸ್ಟರ್ ಎಕ್ಸ್ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ 4.3-ಇಂಚಿನ ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ, ಟರ್ನ್- ಬೈ-ಟರ್ನ್ ನ್ಯಾವಿಗೇಶನ್, ಕ್ರೂಸ್ ಕಂಟ್ರೋಲ್ ಮತ್ತು ಒಟಿಎ ಅಪ್‌ಡೇಟ್‌ಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಡಿಸ್ಕ್ & ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಇನ್ನು, ನೂತನ 'ಓಲಾ ರೋಡ್‌ಸ್ಟರ್ ಎಕ್ಸ್' ಎಲೆಕ್ಟ್ರಿಕ್ ಬೈಕ್‌ನ್ನು ಗ್ರಾಹಕರು ಖುಷಿಯಿಂದಲೇ ವಿತರಣೆ ಪಡೆಯುತ್ತಿದ್ದಾರೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಲಭ್ಯವಿದೆ. ಈ ಹಿನ್ನೆಲೆ, ಮುಂಬರುವ ಹಬ್ಬದ ಋತುವಿನಲ್ಲಿ ಈ ಮೋಟಾರ್‌ಸೈಕಲ್‌ಗೆ ಖರೀದಿದಾರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








