ಮೊಬೈಲ್ ದರಕ್ಕೆ ಹೊಸ ಸ್ಕೂಟರ್‌ಗಳು.. ಜಸ್ಟ್ 49,999.. ಈ ಜನಪ್ರಿಯ ಕಂಪನಿಯಿಂದ ಭಾರೀ ಬೆಲೆ ಇಳಿಕೆ ಘೋಷಣೆ!

ನವದೆಹಲಿ ಮೂಲದ ಒಕಾಯಾ ಇವಿ (Okaya EV) ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ನಿಧಾನವಾಗಿ ಅಂಬೆಗಾಲು ಇಡುತ್ತಿದೆ. ಸದ್ಯ ಇದೇ ಕಂಪನಿಗೆ ಒಪಿಜಿ ಮೊಬಿಲಿಟಿ (OPG Mobility) ಎಂದು ಮರುನಾಮಕರಣ ಮಾಡಲಾಗಿದೆ. ಈ ಕಂಪನಿ ದೇಶೀಯವಾಗಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡುರುವ ವಿವಿಧ ಇ-ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಬದಲಾಗುತ್ತಿರುವ ಮಾರುಕಟ್ಟೆ ಕಾರ್ಯತಂತ್ರಗಳಿಗೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಕೂಡ ಒಪಿಜಿ ಮೊಬಿಲಿಟಿ ಮುಂದಾಗಿದ್ದು, 'ಫೆರಾಟೊ' ಸೀರೀಸ್‌ನ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿದೆ.

ಒಪಿಜಿ ಮೊಬಿಲಿಟಿಯು ಫೆರಾಟೊ ಫಾಸ್ಟ್ ಎಫ್4, ಫೆರಾಟೊ ಫಾಸ್ಟ್ ಎಫ್2ಎಫ್ & ಫೆರಾಟೊ ಫ್ರೀಡಂ ಎಲ್ಎ ಸೇರಿದಂತೆ ವಿವಿಧ ಇ-ಸ್ಕೂಟರ್‌ಗಳ ದರವನ್ನು ರೂ.5000 ರಿಂದ ರೂ.15,000 ವರೆಗೆ ಕಡಿತಗೊಳಿಸಿದೆ. ಇದರೊಂದಿಗೆ ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ.49,999 ರಿಂದ ರೂ.1,09,999 ಎಕ್ಸ್-ಶೋರೂಂ ದರವನ್ನು ಹೊಂದಿವೆ.

OPG Ferrato Electric Scooters Get Huge Price Cut Details

ಈ ಬೆಲೆ ಇಳಿಕೆ ಮಾತ್ರವಲ್ಲದೆ, ಫೆರಾಟೊ ಡಿಸ್ರಪ್ಟರ್ ಇ-ಬೈಕ್ ಸೇರಿ ಫೆರಾಟೊ ಮೋಟೋ ಫಾಸ್ಟ್ ಹಾಗೂ ಫೆರಾಟೊ ಫಾಸ್ಟ್ ಎಫ್3 ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆಯೂ ರೂ.5000 ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಪ್ರಸ್ತುತ ಕೊಡುಗೆಗಳು ಎಲ್ಲಿಯವರೆಗೆ ಮಾನ್ಯವಾಗಿರುತ್ತವೆ ಎಂಬುದರ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಫೆರಾಟೊ ಸೀರೀಸ್‌ನ ಇ-ಸ್ಕೂಟರ್‌ಗಳ ವಿಶೇಷತೆಗಳೇನು..

ಫೆರಾಟೊ ಫ್ರೀಡಮ್ ಎಲ್ಎ (Ferrato FREEDUM LA): ಇದು ರೂ.49,999 (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 55 ಕಿ.ಮೀ ಓಡುತ್ತದೆ. ಜೊತೆಗೆ 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್, ಬರೋಬ್ಬರಿ 10 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

OPG Ferrato Electric Scooters Get Huge Price Cut Details

ಫೆರಾಟೊ ಕ್ಲಾಸಿಕ್ (Ferrato CLASSIQ): ಈ ಎಲೆಕ್ಟ್ರಿಕ್ ಸ್ಕೂಟರ್ ರೂ.59,999 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 60 ರಿಂದ 70 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 25 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಫೆರಾಟೊ ಫಾಸ್ಟ್ ಎಫ್2ಎಫ್ (Ferrato FAAST F2F): ಇದು ರೂ.79,999 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 2.16 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿಯನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 70 ರಿಂದ 80 ಕಿ.ಮೀ ಕ್ರಮಿಸುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಕೊಂಡಿದೆ.

ಫೆರಾಟೊ ಫಾಸ್ಟ್ ಎಫ್4 (Ferrato FAAST F4): ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1,09,999 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 4.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 140 ರಿಂದ 160 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 65 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದ್ದು, ಮೆಟಾಲಿಕ್ ರೆಡ್, ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಸಿಲ್ವರ್ ಮತ್ತು ಮೆಟಾಲಿಕ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 13, 2025, 10:12 [IST]
English summary
Opg ferrato electric scooters get huge price cut details
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+