ಮೊನ್ನೆಯಷ್ಟೆ ಬಿಡುಗಡೆಯಾದ DEFY 22 ಸ್ಕೂಟರ್ ವಿಶೇಷತೆಗಳು: ಖರ್ಚಿಲ್ಲದೆ 80 ಕಿ.ಮೀ ಓಡಿಸಿ!

ಜನವರಿ 17, 2025 ರಂದು ಆರಂಭವಾದ ಆಟೋ ಎಕ್ಸ್‌ಪೋದಲ್ಲಿ ನೂರಾರು ಎಲೆಕ್ಟ್ರಿಕ್ ವಾಹನಗಳನ್ನು ಹೊಸ ಬ್ರಾಂಡ್‌ಗಳು ಬಿಡುಗಡೆ ಮಾಡಿವೆ. ಇದರಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ OPG ಮೊಬಿಲಿಟಿ ಕೂಡ ಒಂದಾಗಿದ್ದು, ತನ್ನ ಬಹುನಿರೀಕ್ಷಿತ ಫೆರಾಟೊ 'DEFY 22' ಸ್ಕೂಟರನ್ನು ರೂ. 99,999 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 'DEFY 22' ಅಸಾಧಾರಣ ಶೈಲಿ, ಸಾಟಿಯಿಲ್ಲದ ಪವರ್ ಮತ್ತು ಉನ್ನತ-ಶ್ರೇಣಿಯ ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಕಂಪನಿ ತಿಳಿಸಿದೆ. ಸ್ಕೂಟರ್ ಮುಖ್ಯಾಂಶಗಳು ಇಲ್ಲಿವೆ.

ಭಾರತೀಯರಿಗೆ ದೈನಂದಿನ ಪ್ರಯಾಣದ ಅದ್ಭುತ ಸವಾರಿ ಅನುಭವವನ್ನು ಒದಗಿಸುವ ಸೊಗಸಾದ ಪ್ರಾಯೋಗಿಕ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ನಾವು ರೋಮಾಂಚನಗೊಂಡಿದ್ದೇವೆ. ಗ್ರಾಹಕರ ವೈವಿಧ್ಯಮಯ ಅಗತ್ಯಗಳಿಗೆ ಹೊಂದಿಕೊಳ್ಳುತ್ತಾ, OPG ಮೊಬಿಲಿಟಿಯಲ್ಲಿ ನಾವು, ಸುರಕ್ಷತೆ ಮತ್ತು ಬಾಳಿಕೆಯನ್ನು ಖಚಿತಪಡಿಸಿಕೊಂಡು ನವೀನ ಉತ್ಪನ್ನಗಳನ್ನು ಪರಿಚಯಿಸುತ್ತೇವೆ.

opg-mobility-ferrato-electric-scooter-defy-22-top-things

ಮುಂಬರುವ ದಿನಗಳಲ್ಲಿ ಹೊಸ 'DEFY 22' ಸ್ಕೂಟರ್ ಭಾರತದಲ್ಲಿ ದ್ವಿಚಕ್ರ ವಾಹನಗಳ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವುದು ಖಚಿತ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅನ್ಶುಲ್ ಗುಪ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಾಂಬಿ ಡಿಸ್ಕ್ ಬ್ರೇಕ್ ಸಿಸ್ಟಮ್ ಅನ್ನು ಹೊಂದಿದ್ದು, ಫುಲ್‌ ಚಾರ್ಜ್‌ನಲ್ಲಿ 80 ಕಿ.ಮೀ ರೇಂಜ್ ಹಾಗೂ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಇದು ವಿದ್ಯಾರ್ಥಿಯಾಗಿರಲಿ, ಕೆಲಸ ಮಾಡುವ ವೃತ್ತಿಪರರಾಗಿರಲಿ ಅಥವಾ ಕುಟುಂಬವಾಗಿರಲಿ ಎಲ್ಲರಿಗೂ ಪರಿಪೂರ್ಣ ಒಡನಾಡಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ಪ್ರಯಾಣವನ್ನು ವಿಶ್ವಾಸದೊಂದಿಗೆ ಮಾಡಬಹುದು ಎಂದು ಕಂಪನಿ ಭರವಸೆ ನೀಡಿದೆ. ಇದರೊಂದಿಗೆ, ಫೆರಾಟೊ 'DEFY 22' ಅತ್ಯುತ್ತಮ ಕಾರ್ಯಕ್ಷಮತೆ, ಸುಧಾರಿತ ಸುರಕ್ಷತೆ ಮತ್ತು ಇತರ iOT ವೈಶಿಷ್ಟ್ಯಗಳನ್ನು ಹೊಂದಿದೆ.

opg-mobility-ferrato-electric-scooter-defy-22-top-things

ಹೊಸ ಸ್ಕೂಟರ್ ಏಳು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಷಾಂಪೇನ್ ಕ್ರೀಮ್, ಬ್ಲ್ಯಾಕ್ ಫೈರ್, ಕೋಸ್ಟಲ್ ಐವರಿ, ಯೂನಿಟಿ ವೈಟ್, ರೆಸಿಲಿಯನ್ಸ್ ಬ್ಲ್ಯಾಕ್, ಡವ್ ಗ್ರೇ ಮತ್ತು ಮ್ಯಾಟ್ ಗ್ರೀನ್ ಎಂಬ ಏಳು ರಿಫ್ರೆಶ್ ಬಣ್ಣಗಳಲ್ಲಿ ಖರೀದಿಸಬಹುದು. ಹೊಸ 'DEFY 22' ಎಲೆಕ್ಟ್ರಿಕ್ ಸ್ಕೂಟರ್ ರೂ. 99,999 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಸಬಹುದು.

ನವೀನ ವೈಶಿಷ್ಟ್ಯಗಳು ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳ ಮೇಲೆ ಕೇಂದ್ರೀಕರಿಸಿದ ಈ ಹೊಸ ಸ್ಕೂಟರ್‌ನಲ್ಲಿ ಮ್ಯೂಸಿಕ್ ಫೀಚರ್‌ನೊಂದಿಗೆ 7-ಇಂಚಿನ ಟಚ್ ಡಿಸ್ಪ್ಲೇ ಸ್ಪೀಡೋಮೀಟರ್ ಮತ್ತು 12-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ. ವಿಶ್ವಾಸಾರ್ಹತೆ, ದಕ್ಷತೆಯನ್ನು ನೀಡುವುದರ ಜೊತೆಗೆ ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೆಚ್ಚು ಬಾಳಿಕೆ ಬರುವ IP67-ರೇಟೆಡ್ LFP ಬ್ಯಾಟರಿ ಮತ್ತು ಹವಾಮಾನ ನಿರೋಧಕ IP65-ರೇಟೆಡ್ ಚಾರ್ಜರ್ ಅನ್ನು ಒಳಗೊಂಡಿದೆ. 1200W ಮೋಟಾರ್ ಪವರ್ ಮತ್ತು 2500W ಗರಿಷ್ಠ ಪವರ್, 72V 30Ah (2.2 kWh) LFP ಬ್ಯಾಟರಿಯನ್ನು ನೀಡಲಾಗಿದೆ. ಫೆರಾಟೊ-ಬ್ರಾಂಡೆಡ್ ಹೆಲ್ಮೆಟ್‌ಗಳು, ಹೆಲ್ಮೆಟ್ ಲಾಕ್‌ಗಳು, ಮೊಬೈಲ್ ಸ್ಟ್ಯಾಂಡ್‌ಗಳು, ಗ್ಲೌಸ್, ಜಾಕೆಟ್‌ಗಳು, ಸೀಟ್ ಕವರ್‌ಗಳನ್ನು ಸಹ ಪ್ರದರ್ಶಿಸಲಾಯಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 20, 2025, 11:13 [IST]
English summary
Opg mobility ferrato electric scooter defy 22 top things
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+