ಕೇವಲ ಕೋಡ್ ಷೇರ್ ಮಾಡಿ ರೂ.1,000 ಗಳಿಸಿ: ಯಾರಿಗೂ ಗೊತ್ತಿರದ ಸೈಲೆಂಟ್ ಮೈಲ್ಸ್ ಪ್ರೋಗ್ರಾಂ!

ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಲಯದಲ್ಲಿ ಇತ್ತೀಚೆಗೆ ಹೆಸರು ಗಳಿಸಿದ ಒಕಾಯಾ EV ಕಂಪನಿಯು ಇದೀಗ ಹೆಸರು ಬದಲಿಸಿಕೊಂಡಿದೆ. OPG ಮೊಬಿಲಿಟಿ ಹೆಸರಿನಲ್ಲಿ ಈಗ ಸದ್ದು ಮಾಡುತ್ತಿದೆ. ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿದ ಮಾಲೀಕರಿಗಾಗಿ ಪ್ರತ್ಯೇಕವಾಗಿ ಸೈಲೆಂಟ್ ಮೈಲ್ಸ್ ರೆಫರಲ್ ಪ್ರೋಗ್ರಾಂ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ತನ್ನ ಗ್ರಾಹಕರು ಪ್ರತಿ ಯಶಸ್ವಿ ರೆಫರಲ್‌ನಲ್ಲಿ ಕ್ಯಾಶ್‌ಬ್ಯಾಕ್ ಗಳಿಸುವ ಅವಕಾಶವನ್ನು ಕಂಪನಿ ನೀಡುತ್ತದೆ. ಕಂಪನಿಯ ಪ್ರಕಾರ ಇದರಡಿ ರೂ. 1,000 ಗಳಿಸಬಹುದು ಎಂದು ಕಂಪನಿ ಹೇಳಿದೆ.

ಏನಿದು ಯೋಜನೆ?: ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಫೆರಾಟೊವನ್ನು ಖರೀದಿಸಿದ ಮಾಲೀಕರು, ಇದೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಸ್ನೇಹಿತನೊಂದಿಗೆ ವಿಶಿಷ್ಟ ರೆಫರಲ್ ಕೋಡ್ ಅನ್ನು ಹಂಚಿಕೊಳ್ಳುವ ಮೂಲಕ ರೂ. 1,000 ಗಳಿಸಬಹುದು. ರೆಫರಲ್ ಪ್ರಕ್ರಿಯೆಯು ಸುಗಮವಾಗಿದ್ದು, ಗ್ರಾಹಕರು ತಮ್ಮ ವಿಶಿಷ್ಟ ಕೋಡ್ ಅನ್ನು WhatsApp ಅಥವಾ ಇಮೇಲ್ ಮೂಲಕ ಹಂಚಿಕೊಳ್ಳಬಹುದು.

opg-mobility-launches-the-silent-miles-referral-program

ಅಲ್ಲದೇ ಪ್ರತಿ ಯಶಸ್ವಿ ರೆಫರಲ್‌ಗೆ ತ್ವರಿತ ಕ್ಯಾಶ್‌ಬ್ಯಾಕ್ ಬಹುಮಾನಗಳನ್ನು ಕೂಡ ಗಳಿಸಬಹುದು. ಕೇವಲ ಒಂದು ರೆಫರಲ್ ಮಾತ್ರವಲ್ಲ, ಮಿತಿಯಿಲ್ಲದೆ ಎಷ್ಟು ರೆಫರಲ್ ಬೇಕಾದರು ಮಾಡಬಹುದು. ಗ್ರಾಹಕರು ತಾವು ಇಷ್ಟಪಡುವಷ್ಟು ಸ್ನೇಹಿತರನ್ನು ರೆಫರ್ ಮಾಡಲು ಇದು ಅನುವು ಮಾಡಿಕೊಡುತ್ತದೆ, ಪ್ರತಿ ಯಶಸ್ವಿ ಖರೀದಿಯಿಂದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿದೆ.

ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸುಸ್ಥಿರ ಚಲನಶೀಲತೆ ಪರಿಹಾರಗಳ ವ್ಯಾಪಕ ಅಳವಡಿಕೆಯನ್ನು ಉತ್ತೇಜಿಸಲು ಈ ಉಪಕ್ರಮವು ಉತ್ತಮ ಮಾರ್ಗವಾಗಿದೆ. ಅಲ್ಲದೆ ನಮ್ಮ ಸ್ಕೂಟರ್‌ಗಳನ್ನು ಒಮ್ಮೆ ಬಳಕೆ ಮಾಡುವ ಮೂಲಕ ಅವುಗಳ ಗುಣಮಟ್ಟ ಹಾಗೂ ಪ್ರಾಮುಖ್ಯತೆ ಗ್ರಾಹಕರಿಗೆ ಅರಿಯಲಿದೆ. ಆ ಬಳಿಕ ನಮ್ಮ ಇವಿಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

opg-mobility-launches-the-silent-miles-referral-program

ಇತ್ತೀಚೆಗೆ ಬಿಡುಗಡೆ: OPG ಮೊಬಿಲಿಟಿ ಇತ್ತೀಚೆಗೆ ಜನವರಿ 17, 2025 ರಂದು ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಫೆರಾಟೊ 'DEFY 22' ಅನ್ನು ಅನಾವರಣಗೊಳಿಸಿತು. ಅತ್ಯಾಧುನಿಕ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿರುವ ಈ ಸ್ಕೂಟರ್ ಕೈಗೆಟುಕುವ ಮತ್ತು ಪರಿಸರ ಸ್ನೇಹಿಯಾಗಿದೆ.

ನಮ್ಮ ಗ್ರಾಹಕರು ನಾವು ಮಾಡುವ ಎಲ್ಲದರಲ್ಲೂ ಹೃದಯಭಾಗದಲ್ಲಿದ್ದಾರೆ. ಸೈಲೆಂಟ್ ಮೈಲ್ಸ್ ರೆಫರಲ್ ಪ್ರೋಗ್ರಾಂ ಸುಸ್ಥಿರ ಚಲನಶೀಲತೆಗೆ ಅವರ ಬದ್ಧತೆಯನ್ನು ಗುರುತಿಸುವ ನಮ್ಮ ಮಾರ್ಗವಾಗಿದೆ. ಈ ಉಪಕ್ರಮವು ಕೇವಲ ಉಲ್ಲೇಖಗಳ ಬಗ್ಗೆ ಅಲ್ಲ, ಇದೊಂದು ಚಳುವಳಿಯನ್ನು ನಿರ್ಮಿಸುವ ಬಗ್ಗೆ ಎಂದು OPG ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಅಂಶುಲ್ ಗುಪ್ತಾ ಹೇಳಿದರು.

ನಾವೀನ್ಯತೆ, ಕಾರ್ಯಕ್ಷಮತೆ ಮತ್ತು ಹಸಿರು ಭವಿಷ್ಯದ ಬಗ್ಗೆ ನಮ್ಮ ಉತ್ಸಾಹವನ್ನು ಹಂಚಿಕೊಳ್ಳುವ ಬಲವಾದ ಸಮುದಾಯವನ್ನು ನಾವು ಬೆಳೆಸುತ್ತಿದ್ದೇವೆ. ಇದಕ್ಕಾಗಿ ತಂದಿರುವ ಹೊಸ ಕಾರ್ಯಕ್ರಮವು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ನಾಗರಿಕರಾದ ಎಲ್ಲಾ ಫೆರಾಟೊ ದ್ವಿಚಕ್ರ ವಾಹನ ಮಾಲೀಕರಿಗೆ ಮುಕ್ತವಾಗಿದೆ. ಫೆರಾಟೊ ದ್ವಿಚಕ್ರ ವಾಹನದ ಯಶಸ್ವಿ ಖರೀದಿಯ ಮೇಲೆ ಕ್ಯಾಶ್‌ಬ್ಯಾಕ್ ಅನ್ನು ತಕ್ಷಣವೇ ಜಮಾ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 5, 2025, 15:51 [IST]
English summary
Opg mobility launches the silent miles referral program
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+