Keeway: ಮೊದಲೇ ಅಗ್ಗದ ಬೆಲೆ... ಮತ್ತೇ 71,000 ರೂ. ಬೆಲೆ ಇಳಿಕೆ: ಕೈಗೆಟುಕುವ ಕ್ರೂಸರ್ ಬೈಕ್!
ಭಾರತದಾದ್ಯಂತ ಮೋಟಾರ್‌ಸೈಕಲ್ ಪ್ರಿಯರನ್ನು ಸಂತೋಷಪಡಿಸಲು ಸಜ್ಜಾಗಿರುವ ಪ್ರಮುಖ ವಾಹನ ಕಂಪನಿ 'ಆದೀಶ್ವರ್ ಆಟೋ ರೈಡ್' ಇಂಡಿಯಾ ತನ್ನ ಎರಡು ಜನಪ್ರಿಯ ಮಾಡಲ್‌ಗಳಾದ ಕೀವೇ ಕೆ-ಲೈಟ್ 250ವಿ (Keeway K-Light 250V) ಮತ್ತು ಜೋಂಟೆಸ್ 350ಎಕ್ಸ್ (Zontes 350X) ಮೋಟಾರ್‌ಸೈಕಲ್‌ಗಳ ಮೇಲೆ ಅತ್ಯಾಕರ್ಷಕ ಬೆಲೆ ಇಳಿಕೆಯನ್ನು ಘೋಷಿಸಿದೆ. ಈ ಬೆಲೆ ಪರಿಷ್ಕರಣೆಯು ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಇನ್ನಷ್ಟು ಅಗ್ಗವಾಗಿಸುತ್ತದೆ. ಅವುಗಳನ್ನು ಆಯಾ ವಿಭಾಗಗಳಲ್ಲಿ ಹಣಕ್ಕೆ ತಕ್ಕ ಮೌಲ್ಯದ ಕೊಡುಗೆಗಳಾಗಿ ಮಾಡಿದೆ ಎಂದು ಕಂಪನಿ ಪ್ರಕಟಿಸಿದೆ.
ಕೀವೇ ಕೆ-ಲೈಟ್ 250V ಬೈಕ್ ಮೇಲೆ ರೂ. 71,000 ಬೆಲೆ ಇಳಿಕೆ ಮಾಡಿದ್ದು, ಹೊಸ ಬೆಲೆಯು ಈಗ ಕೇವಲ ರೂ. 2,49,000 (ಎಕ್ಸ್ - ಶೋರೂಂ) ಇದೆ. ಹಾಗೆಯೇ ಝೋಂಟೆಸ್ 350X ಮೋಟಾರ್‌ಸೈಕಲ್ ಮೇಲೆ ರೂ. 59,000 ಬೆಲೆ ಇಳಿಕೆಯಾಗಿದ್ದು, ಈಗ ಕೇವಲ ರೂ. 2,40,000 (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಕೀವೇ ಕೆ-ಲೈಟ್ 250V ವಿಶೇಷತೆಗಳು
ಕೀವೇ ಕೆ-ಲೈಟ್ 250V ಮೋಟಾರ್‌ಸೈಕಲ್ ವಿ - ಟ್ವಿನ್ 249cc ಎಂಜಿನ್ ಹೊಂದಿದ್ದು ರೆನೆಡ್ ಮತ್ತು ಟಾರ್ಕ್ ಕ್ರೂಸರ್ ಪರ್ಫಾಮೆನ್ಸ್ ನೀಡುತ್ತದೆ. ಬೆಲ್ಟ್ ಡ್ರೈವ್‌ನೊಂದಿಗೆ ಬರುವ ಈ ಬೈಕ್‌ನ್ನು ಕಡಿಮೆ ನಿರ್ವಹಣೆಯೊಂದಿಗೆ ಸುಗಮ, ಶಾಂತ ಸವಾರಿ ಮಾಡಬಹುದು. ಪ್ರೀಮಿಯಂ ಕ್ರೂಸರ್ ವಿನ್ಯಾಸದೊಂದಿಗೆ ಆರಾಮದಾಯಕ ಪ್ರಯಾಣ ಅನುಭವವನ್ನು ಖಚಿತಪಡಿಸುತ್ತದೆ ಎಂದು ಕಂಪನಿ ಹೇಳಿದೆ.
ಡಿಸೈನ್ ಬಗ್ಗೆ ಹೇಳುವುದಾದರೆ ಎಲ್ಇಡಿ ಲೈಟಿಂಗ್‌ನೊಂದಿಗೆ ವರ್ಧಿತ ಗೋಚರತೆ ಮತ್ತು ಡಿಸೈನ್‌ಗಾಗಿ ಪೂರ್ಣ ಎಲ್ಇಡಿ ಲೈಟ್ ಸೆಟಪ್ ಒದಗಿಸಲಾಗಿದೆ. ಸ್ಪಷ್ಟ ಮತ್ತು ಕ್ರಿಯಾತ್ಮಕ ಪ್ರದರ್ಶನಕ್ಕಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಪೋರ್ಟಿ ಲುಕ್ ಮತ್ತು ಆಕರ್ಷಣೆಯನ್ನು ಹೆಚ್ಚಿಸಲು ಟ್ವಿನ್ ಎಕ್ಸಾಸ್ಟ್‌ಗಳನ್ನು ನೀಡಿರುವುದು ಪ್ರಮುಖ ಹೈಲೆಟ್‌ಗಳಾಗಿವೆ.

ಜೋಂಟೆಸ್ 350X ವಿಶೇಷತೆಗಳು
ಜೋಂಟೆಸ್ 350X ಮೋಟಾರ್‌ಸೈಕಲ್ 348cc ಲಿಕ್ವಿಡ್ - ಕೂಲ್ಡ್ ಎಂಜಿನ್ ಹೊಂದಿದ್ದು, 39.5 PS ಪವರ್ ಹೊರಹಾಕುತ್ತದೆ. ಸುಧಾರಿತ ರೈಡರ್ ಅನುಕೂಲತೆಗಾಗಿ ಕೀ - ಲೆಸ್ ಕಂಟ್ರೋಲ್ ಸಿಸ್ಟಮ್, ಬ್ಲೂಟೂತ್, ಸಂಚರಣೆ ಮತ್ತು ಸವಾರಿ ಡೇಟಾ ಏಕೀಕರಣಕ್ಕಾಗಿ ಪೂರ್ಣ ಟಿಎಫ್‌ಟಿ ಕಲರ್ಡ್ ಡಿಸ್ಪ್ಲೆ, ಫ್ಯೂಚರಿಸ್ಟಿಕ್ ಸ್ಟೈಲಿಂಗ್‌ಗಾಗಿ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಮ್ ನೀಡಲಾಗಿದೆ.
ಇವಿಷ್ಟೆ ಅಲದೆ ಪ್ರಯಾಣದಲ್ಲಿರುವಾಗ ಟೂರಿಂಗ್ ಸೌಕರ್ಯಕ್ಕಾಗಿ ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ವಿಂಡ್‌ಶೀಲ್ಡ್, ವರ್ಧಿತ ಹ್ಯಾಂಡ್ಲಿಂಗ್ ಡೈನಾಮಿಕ್ಸ್‌ಗಾಗಿ ಹಗುರವಾದ ಅಲಾಯ್ ವೀಲ್‌ಗಳು, ದೀರ್ಘ - ದೂರ ಪ್ರವಾಸಕ್ಕೆ ಯಾವುದೇ ತೊಂದರೆಯಾಗದಂತೆ ದೊಡ್ಡ 17 - ಲೀಟರ್ ಇಂಧನ ಟ್ಯಾಂಕ್ ಅನ್ನು ಒದಗಿಸಿರುವುದು ಪ್ರಮುಖ ಹೈಲೆಟ್ ಆಗಿದೆ.

ಆದೀಶ್ವರ್ ಆಟೋ ರೈಡ್ ಇಂಡಿಯಾ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಅಪ್ರತಿಮ ಮೌಲ್ಯದಲ್ಲಿ ಪ್ರೀಮಿಯಂ ಮೋಟಾರ್ ಸೈಕಲ್‌ಗಳನ್ನು ನೀಡುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಿದೆ. ಇದು ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಶೈಲಿಯನ್ನು ಹುಡುಕುವ ಉತ್ಸಾಹಿಗಳಿಗೆ ಈ ಮಾದರಿಗಳನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಮಹಾವೀರ್ ಗ್ರೂಪ್‌ನ ಭಾಗವಾಗಿರುವ ಆದೀಶ್ವರ್ ಆಟೋ ರೈಡ್ ಇಂಡಿಯಾ (AARI) ಭಾರತದಲ್ಲಿ ಪ್ರಮುಖ ಆಟೋಮೋಟಿವ್ ವಿತರಕರಾಗಿದ್ದಾರೆ. ಭಾರತದಲ್ಲಿ ಬೆನೆಲ್ಲಿ ಮತ್ತು ಕೀವೇಯಂತಹ ಬ್ರ್ಯಾಂಡ್‌ಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. ಕಂಪನಿಯು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಲು ಮತ್ತು ವಿತರಿಸಲು ಮೋಟೋ ಮೊರಿನಿ, ಜೋಂಟೆಸ್ ಮತ್ತು QJ ಮೋಟಾರ್‌ನಂತಹ ಜಾಗತಿಕ ಮೋಟಾರ್‌ಸೈಕಲ್ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.


Click it and Unblock the Notifications