ಹೊಸ ಸ್ಪೋರ್ಟಿ ಪಲ್ಸರ್ N160 ಬಿಡುಗಡೆ: ಬೆಲೆ ಇಷ್ಟೇನಾ? ಎಲ್ಲಾ ಬ್ರಾಂಡ್‌ಗಳಿಗೆ ಸರಿಯಾದ ಪೈಪೋಟಿ!
ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ ಲಿಮಿಟೆಡ್, ಇಂದು ಗೋಲ್ಡ್ USD ಫೋರ್ಕ್‌ಗಳು ಮತ್ತು ಸಿಂಗಲ್ ಪೀಸ್ ಸೀಟ್ ಕಾನ್ಫಿಗರೇಶನ್ ಹೊಂದಿರುವ ಪಲ್ಸರ್ N160 ನ ಹೊಸ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ನವೀಕರಣವು ಜನಪ್ರಿಯ N ಸಿರೀಸ್‌ಗೆ ಸುಧಾರಿತ ಸೌಕರ್ಯ ಮತ್ತು ಉತ್ತಮ ರೈಡಿಂಗ್ ಡೈನಾಮಿಕ್ಸ್ ಅನ್ನು ತರುತ್ತದೆ. ಇದು ಭಾರತದಲ್ಲಿ ಸ್ಪೋರ್ಟಿ ಮೋಟಾರ್‌ಸೈಕ್ಲಿಂಗ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ಖರೀದಿಸುವಂತೆ ಮಾಡುತ್ತದೆ. ಹೊಸ ವೇರಿಯೆಂಟ್ ಬೆಲೆ ರೂ. 1,23,983 (ಎಕ್ಸ್-ಶೋರೂಂ) ಇದ್ದು, ಇಂದಿನಿಂದ ಭಾರತದಾದ್ಯಂತ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
USD ಫೋರ್ಕ್‌ಗಳು ನೀಡುವ ನಿಖರತೆ, ನಿಯಂತ್ರಣ ಮತ್ತು ಕಮಾಂಡಿಂಗ್ ರಸ್ತೆ ಉಪಸ್ಥಿತಿಯೊಂದಿಗೆ ಸಿಂಗಲ್ - ಸೀಟ್ ಕಾನ್ಫಿಗರೇಶನ್‌ನ ಸೌಕರ್ಯವನ್ನು ಬಯಸುವ ಸವಾರರಿಗಾಗಿ ವಿನ್ಯಾಸಗೊಳಿಸಲಾದ ಹೊಸ ಪಲ್ಸರ್ N160 ವೇರಿಯೆಂಟ್, ಪಲ್ಸರ್ ಬ್ರ್ಯಾಂಡ್ ಹೆಸರುವಾಸಿಯಾದ ಸ್ಪೋರ್ಟಿ, ಆಕ್ರಮಣಕಾರಿ ನಿಲುವನ್ನು ವರ್ಧಿಸುವ ಜೊತೆಗೆ ದೈನಂದಿನ ಸವಾರಿಯನ್ನು ಹೆಚ್ಚಿಸುತ್ತದೆ ಎಂದು ಬಜಾಜ್ ಭರವಸೆ ನೀಡಿದೆ.

ಬಜಾಜ್ ಪಲ್ಸರ್ N160 ಮೊದಲು ಸ್ಪ್ಲಿಟ್ ಸೀಟ್‌ನೊಂದಿಗೆ ಬಿಡುಗಡೆಯಾದಾಗ, ಇದು ಬಹಳ ಚೆನ್ನಾಗಿ ಸ್ವೀಕರಿಸಲ್ಪಟ್ಟಿತು. N160 ಖರೀದಿದಾರರಲ್ಲಿ ಗಮನಾರ್ಹ ಪಾಲು ಒಂದೇ ಸೀಟನ್ನು ಇಷ್ಟಪಡುವವರಾಗಿದ್ದು, ಪಲ್ಸರ್‌ನ ನಿಖರತೆ ಮತ್ತು ನಿಯಂತ್ರಣದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಸಂಶೋಧನೆ ತೋರಿಸಿದೆ. ಹಾಗಾಗಿ ಹೊಸ ಸಿಂಗಲ್-ಸೀಟ್, ಗೋಲ್ಡ್ USD ಫೋರ್ಕ್ ವೇರಿಯೆಂಟ್ ಅನ್ನು ಬಿಡುಗಡೆ ಮಾಡಲಾಗಿದೆ.
ಹೊಸ ಪರ್ಲ್ ಬಜಾಜ್ ಪಲ್ಸರ್ N160 ಮೆಟಾಲಿಕ್ ವೈಟ್, ರೇಸಿಂಗ್ ರೆಡ್, ಪೋಲಾರ್ ಸ್ಕೈ ಬ್ಲೂ ಮತ್ತು ಬ್ಲ್ಯಾಕ್ ಎಂಬ ನಾಲ್ಕು ಗಮನಾರ್ಹ ಬಣ್ಣಗಳಲ್ಲಿ ಲಭ್ಯವಿದೆ - ಈ ವೇರಿಯೆಂಟ್ ಪಲ್ಸರ್ N ಸಿರೀಸ್‌ನ ಬಲವಾದ ವಿನ್ಯಾಸದ DNA ಮೇಲೆ ನಿರ್ಮಿಸಲ್ಪಟ್ಟಿದೆ. ಯುವ ಸವಾರರ ಆದ್ಯತೆಗಳಿಗೆ ಅನುಗುಣವಾಗಿ ಈ ಬೈಕ್ ಅನ್ನು ಅಪ್‌ಡೇಟ್ ಮಾಡಿರುವ ಕಾರಣ ಉತ್ತಮ ಮಾರಾಟ ಕಾಣುವ ನಿರೀಕ್ಷೆಯಲ್ಲಿ ಕಂಪನಿಯಿದೆ.

ಹೊಸ USD ಫೋರ್ಕ್‌ಗಳು ಮತ್ತು ಸಿಂಗಲ್ ಪೀಸ್ ಸೀಟ್ ಕಾನ್ಫಿಗರೇಶನ್ ಹೊಂದಿರುವ ಪಲ್ಸರ್ N160 ಬಿಡುಗಡೆಯ ಕುರಿತು ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ MCBU ಅಧ್ಯಕ್ಷ ಸಾರಂಗ್ ಕನಡೆ, "ಗೋಲ್ಡ್ USD ಫೋರ್ಕ್‌ಗಳು ಮತ್ತು ಒಂದೇ ಸೀಟನ್ನು ಹೊಂದಿರುವ ಹೊಸ ಪಲ್ಸರ್ N160 ಅನ್ನು ಗ್ರಾಹಕರ ಒಳನೋಟಗಳು ಮತ್ತು ಉದ್ಯಮದ ವಿಕಸನಗೊಳ್ಳುತ್ತಿರುವ ಅಗತ್ಯಗಳಿಗೆ ನಮ್ಮ ಬದ್ಧತೆಯಿಂದ ಅಭಿವೃದ್ಧಿಪಡಿಸಲಾಗಿದೆ.
ಈ ಅಪ್‌ಗ್ರೇಡ್ N ಸಿರೀಸ್‌ನಲ್ಲಿ ಉಳಿಯುವುದರೊಂದಿಗೆ ಪ್ರೀಮಿಯಂ ಲುಕ್‌ನ ವರ್ಧಿತ ಸೌಕರ್ಯವನ್ನು ನೀಡುತ್ತದೆ - ಪವರ್, ನಿಖರತೆ, ನಿಯಂತ್ರಣ ಮತ್ತು ಸಾಟಿಯಿಲ್ಲದ ಸವಾರಿ ಅನುಭವವನ್ನು ಪ್ರತಿನಿಧಿಸುತ್ತದೆ. ಹೊಸ ಪಲ್ಸರ್ N160 ನೊಂದಿಗೆ ಪಲ್ಸರ್ ಮೇನಿಯಾಕ್‌ಗಳ ಪೀಳಿಗೆಯನ್ನು ಸೇರಿಸಲು ಮತ್ತು ಅವರನ್ನು ಡೆಫಿನಿಟಿ ಡೇರಿಂಗ್ ಜಗತ್ತಿಗೆ ಪರಿಚಯಿಸಲು ನಾವು ಆಶಿಸುತ್ತೇವೆ" ಎಂದು ಬಜಾಜ್ MCBU ಅಧ್ಯಕ್ಷ ಸಾರಂಗ್ ಕನಡೆ ಹೇಳಿದರು.

ಹೊಸ ವೇರಿಯೆಂಟ್ ವರ್ಧಿತ ಸೌಕರ್ಯ, ಸಾಟಿಯಿಲ್ಲದ ನಿಖರತೆ ಮತ್ತು ಕಮಾಂಡಿಂಗ್ ರಸ್ತೆ ಉಪಸ್ಥಿತಿಗಾಗಿ ಗೋಲ್ಡ್ USD ಫೋರ್ಕ್‌ಗಳನ್ನು ಸಿಂಗಲ್-ಸೀಟ್ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. ಪರ್ಲ್ ಮೆಟಾಲಿಕ್ ವೈಟ್, ರೇಸಿಂಗ್ ರೆಡ್, ಪೋಲಾರ್ ಸ್ಕೈ ಬ್ಲೂ ಮತ್ತು ಬ್ಲಾಕ್ ಬಣ್ಣಗಳು ಇಂದಿನ ಯುವಕರ ಆದ್ಯತೆಯ ಬಣ್ಣಗಲಾಗಿರುವ ಕಾರಣ ನೀಡಲಾಗಿದೆ. ಬೆಲೆ ಕೂಡ ಕೈಗೆಟುಕುವಂತೆ ಕೇವಲ ರೂ. 1,23,983 (ಎಕ್ಸ್-ಶೋರೂಂ) ನಲ್ಲಿ ನೀಡಲಾಗುತ್ತಿದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








