ಇತ್ತೀಚೆಗೆ ಬಿಡುಗಡೆಯಾದ 2025 ಹೀರೋ ಸೂಪರ್ ಸ್ಪ್ಲೆಂಡರ್ XTEC ವಿಶೇಷತೆಗಳು
ದೇಶದಲ್ಲಿ ದ್ವಿಚಕ್ರ ವಾಹನಗಳ ಪ್ರಮುಖ ತಯಾರಕರಾದ ಹೋಂಡಾ' ತಮ್ಮ ಪ್ರಮುಖ ಬ್ರಹ್ಮಾಸ್ತ್ರವಾದ 2025ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್‌ನ್ನು(2025 Hero Super Splendor XTEC) ಹೆಚ್ಚಿನ ಮೈಲೇಜ್, ಆಧುನಿಕ ಫೀಚರ್ಸ್, ಆಕರ್ಷಕ ಡಿಸೈನ್‌ನೊಂದಿಗೆ ಅಪ್‌ಡೇಟ್ ಮಾಡಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಸದ್ಯ ಪೈಪೋಟಿ ಹೆಚ್ಚಿಸಿದ್ದು, ಮೈಲೇಜ್ ಬೈಕ್‌ಗಳ ನಡುವೆ ಸ್ಪರ್ದೆ ಹೆಚ್ಚಾಗಿದೆ. ಈ ಮಟ್ಟದ ಪೈಪೋಟಿ ಹೆಚ್ಚಾಗಲು ಇತ್ತೀಚೆಗೆ ಬಿಡುಗಡೆಯಾಗಿರುವ 2025ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ತನ್ನ ಹಳೆಯ ಮಾಡಲ್‌ಗಿಂತ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿದೆ ತಿಳಿಯೋಣ.
ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್ ಟೆಕ್ ಬೆಲೆ ವಿಷಯಕ್ಕೆ ಬಂದರೆ, ಹೊಸ ಬೆಲೆಗಳು ಡ್ರಮ್ ಬ್ರೇಕ್ ವೇರಿಯೆಂಟ್ 88,128 ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಡಿಸ್ಕ್ ಬ್ರೇಕ್ ಹೊಂದಿರುವ ರೂಪಾಂತರದ ಬೆಲೆಯು ರೂ.92,028 (ಎಕ್ಸ್ ಶೋರೂಂ) ಆಗಿದೆ. ಈ ಬೆಲೆಗಳು ಹಳೆಯ ಆವೃತ್ತಿಗಿಂತ ಪ್ರತಿ ರೂಪಾಂತರಕ್ಕೆ 2,000 ರೂ.ಗಳಷ್ಟು ಹೆಚ್ಚಾಗಿದೆ.

ಇನ್ನು ಎಂಜಿನ್ ವಿಷಯ್ಕಕೆ ಬಂದರೆ ಇದು ದೊಡ್ಡ ಲಿಕ್ವಿಡ್-ಕೂಲ್ಡ್, ಮಲ್ಟಿ-ಸಿಲಿಂಡರ್ ಎಂಜಿನ್ ಬದಲಿಗೆ, ಒಬಿಡಿ -2 ಬಿ ಮಾನದಂಡಗಳಿಗೆ ಅನುಸಾರವಾಗಿ ಅಪ್‌ಡೇಟ್ ಆಗಿದೆ. ಈ ಎಂಜಿನ್ 124.7 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಸಹಾಯದಿಂದ 10.72 ಬಿಹೆಚ್ ಪವರ್ ಮತ್ತು 10.6 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಎಂಜಿನ್ ನವೀಕರಣದ ಈ ಬದಲಾವಣೆಗಳನ್ನು ಹೊರತುಪಡಿಸಿ, ವಿನ್ಯಾಸ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಮೋಟಾರ್ ಸೈಕಲ್ ಯಾವುದೇ ಬದಲಾವಣೆ ಆಗಿಲ್ಲ. ಇದು ನಮಗೆ ಪರಿಚಿತವಾದ ಸರಳ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಹಾಗೂ ಸ್ಪೋರ್ಟಿ ನೋಟವನ್ನು ಹಾಗೇ ಉಳಿಸಿಕೊಂಡಿದೆ. ಮ್ಯಾಟ್ ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಮ್ಯಾಟ್ ಗ್ರೇ, ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತದೆ.

ಇನ್ನು ಹಳೆಯ ಮಾಡಲ್‌ನಲ್ಲಿ ನೋಡುವ ಅದೇ ಟೆಲಿಸ್ಕೋಪಿಕ್ ಫೋರ್ಕ್ ಗಳು, ಮುಂಭಾಗದಲ್ಲಿ ಡಿಸ್ಕ್ ಅಥವಾ ಡ್ರಮ್ ಬ್ರೇಕ್ ಗಳ ಆಯ್ಕೆ, ಹಿಂಭಾಗದಲ್ಲಿ ಡ್ರಮ್ ಬ್ರೇಕ್, ಡ್ಯುಯಲ್ ರಿಯರ್ ಶಾಕ್ ಗಳು, ಅಲಾಯ್ ಚಕ್ರಗಳು, ಫೋನ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.
ಹೀರೋ ತನ್ನ ಹೆಚ್ಚಿನ ಉತ್ಪನ್ನಗಳಾದ ಎಕ್ಸ್‌ಪಲ್ಸ್, ಎಕ್ಸ್ ಟ್ರೀಮ್ ಶ್ರೇಣಿ, ಸ್ಪ್ಲೆಂಡರ್, ಗ್ಲಾಮರ್ ಮತ್ತು ಸೂಪರ್ ಸ್ಪ್ಲೆಂಡರ್ ನಂತಹ ಹೆಚ್ಚು ಮಾರಾಟವಾಗುವ ಪ್ರಯಾಣಿಕರ ದೀರ್ಘ ಪಟ್ಟಿಯನ್ನು ಸದ್ದಿಲ್ಲದೆ ನವೀಕರಿಸುತ್ತಿದೆ. ಹೀರೋ ಸ್ಪ್ಲೆಂಡರ್ ಶ್ರೇಣಿಯು ಕಂಪನಿಗೆ ಹೆಚ್ಚು ಮಾರಾಟವಾಗುವ ಉತ್ಪನ್ನವಾಗಿರುವ ಕಾರಣ ಮೊದಲು 2025ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್ ಟೆಕ್ ಬೈಕ್‌ನ್ನು ನವೀಕರಿಸಿದೆ.

ಮುಂಬರುವ ತಿಂಗಳುಗಳಲ್ಲಿ ಕಂಪನಿಯು ತನ್ನ ಇತರ ಮಾದರಿಗಳನ್ನು ಒಂದೊಂದಾಗಿ ನವೀಕರಣ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಹೊಸ 2025 ರ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಬೈಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications