Revolt: ಹೊಸ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ.. ಬೆಲೆ ಇಷ್ಟೇನಾ.. ಹೇಗಿದೆ?

ರಿವೋಲ್ಟ್ ಮೋಟಾರ್ಸ್ (Revolt Motors) ಜನಪ್ರಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆರ್‌ವಿ1 ಹಾಗೂ ಆರ್‌ವಿ400 ಇ-ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಸದ್ಯ ಕಂಪನಿಯು ಹೊಚ್ಚ ಹೊಸ ಆರ್‌ವಿ ಬ್ಲೇಜ್‌ಎಕ್ಸ್ (RV BlazeX) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಇದು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ.. ಈ ನೂತನ ಇ-ಬೈಕ್‌ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ.

ಹೊಸ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ (Revolt RV BlazeX) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ದಿನಬಳಕೆಗೆ ಸುಲಭವಾಗಿ ಬಳಕೆ ಮಾಡುವಂತೆ ಸಿದ್ದಪಡಿಸಲಾಗಿದೆ. ಇದು ರೂ.1.14 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ನಿನ್ನೆಯಿಂದಲೇ ಬುಕ್ಕಿಂಗ್ ಶುರುವಾಗಿದ್ದು, ಮಾರ್ಚ್ ಮೊದಲ ವಾರದಿಂದ ವಿತರಣೆಗಳು ಶುರುವಾಗಲಿದೆ.

Revolt RV BlazeX Electric Bike Launched In India Rs 1 14 Lakh Price Details

ನೂತನ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್‌, 3.24 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 4 ಕೆಡಬ್ಲ್ಯೂ ಪೀಕ್ ಪವರ್ ಉತ್ಪಾದಿಸುತ್ತದೆ. ಪೂರ್ತಿ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ 85 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ. ಇದರ ಬ್ಯಾಟರಿ ಪ್ಯಾಕ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 0 ರಿಂದ 80 ಚಾರ್ಜ್ ಆಗುವುದಕ್ಕೆ 80 ನಿಮಿಷ ತೆಗೆದುಕೊಳ್ಳುತ್ತದೆ. ಹೋಂ ಚಾರ್ಜ‌ರ್‌ನ್ನು ಉಪಯೋಗಿಸಿದಾಗ ಈ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆ 30 ನಿಮಿಷ ಬೇಕಾಗುತ್ತದೆ.

Revolt RV BlazeX Electric Bike Launched In India Rs 1 14 Lakh Price Details

ನೂತನ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್‌ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ರೌಂಡ್ - ಎಲ್ಇಡಿ ಹೆಡ್‌ಲೈಟ್, ಲಾಂಗ್ ಸೀಟ್‌ನ್ನು ಹೊಂದಿದೆ. ಜೊತೆಗೆ ಸ್ಟರ್ಲಿಂಗ್ ಸಿಲ್ವರ್ ಬ್ಲ್ಯಾಕ್ ಹಾಗೂ ಎಕ್ಲಿಪ್ಸ್ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಾಗುತ್ತದೆ.

ಈ ಆರ್‌ವಿ ಬ್ಲೇಜ್‌ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಹತ್ತಾರು ವೈಶಿಷ್ಟ್ಯಗಳನ್ನೂ ಹೊಂದಿದೆ. 6 - ಇಂಚಿನ ಎಲ್‌ಸಿಡಿ ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಓಟಿಎ ಅಪ್ಡೇಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಇದರೊಟ್ಟಿಗೆ ಅಂಡರ್ ಸೀಟ್ ಚಾರ್ಜಿಂಗ್ ಕಂಪಾರ್ಟ್ಮೆಂಟ್ ಹಾಗೂ ಸ್ಟೋರೇಜ್ ಕಂಪಾರ್ಟ್ಮೆಂಟ್ ಅನ್ನು ಒಳಗೊಂಡಿದೆ.

Revolt RV BlazeX Electric Bike Launched In India Rs 1 14 Lakh Price Details

ಹೊಸ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್‌ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಇದು ಮಾತ್ರವಲ್ಲದೆ, ಸವಾರರ ರಕ್ಷಣೆಗಾಗಿ ಮುಂದೆ & ಹಿಂದೆ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಒಟ್ಟಾರೆಯಾಗಿ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ನೀಡಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ ಈ ಬೈಕ್‌ಗೆ ದೇಶೀಯ ಗ್ರಾಹಕರಿಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 26, 2025, 15:53 [IST]
English summary
Revolt rv blaze electric bike launched in india rs 1 14 lakh price details
Read more on revolt india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+