ಇತ್ತೀಚೆಗೆ ಬಿಡುಗಡೆ.. 150 Km ರೇಂಜ್, ಬಜೆಟ್ ಬೆಲೆ, ದಿನಬಳಕೆಗೆ ಈ ಎಲೆಕ್ಟ್ರಿಕ್ ಬೈಕ್ ಬೆಸ್ಟ್, ಪ್ರಮುಖಾಂಶಗಳಿವು!

ರಿವೋಲ್ಟ್ ಮೋಟಾರ್ಸ್ (Revolt Motors) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಹೊಚ್ಚ ಹೊಸ ಆರ್‌ವಿ ಬ್ಲೇಜ್‌ಎಕ್ಸ್ (RV BlazeX) ಇ-ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಇದು ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೂ ದೊರೆಯುತ್ತದೆ. ಬನ್ನಿ.. ಈ ಹೊಸ ಬೈಕ್ ಹೇಗಿದೆ ಎಂಬುದರ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ (Price): ನೂತನ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ (Revolt RV BlazeX) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.1.14 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈಗಾಗಲೇ ಬುಕ್ಕಿಂಗ್‌ನ್ನು ಆರಂಭಿಸಲಾಗಿದ್ದು, ಈ ತಿಂಗಳ ಮೊದಲ ವಾರದಿಂದಲೇ ವಿತರಣೆಗಳು ಶುರುವಾಗುವ ನಿರೀಕ್ಷೆಯಿದೆ.

Revolt RV BlazeX Electric Bike Top 5 Things You Should Must Know

ಕಾರ್ಯಕ್ಷಮತೆ (Performance): ಹೊಸ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್ 3.24 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಉಪಯೋಗ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 4 ಕೆಡಬ್ಲ್ಯೂ ಪೀಕ್ ಪವರ್ ಹೊರಹಾಕುತ್ತದೆ.

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ 0 ರಿಂದ 80 ಚಾರ್ಜ್ ಆಗುವುದಕ್ಕೆ 80 ನಿಮಿಷ ಬೇಕಾಗುತ್ತದೆ. ಹೋಂ ಚಾರ್ಜ‌ರ್‌ನ್ನು ಬಳಕೆ ಮಾಡಿದಾಗ ಈ ಬ್ಯಾಟರಿಯು ಪೂರ್ತಿ ಚಾರ್ಜ್ ಆಗಲು 3 ಗಂಟೆ 30 ನಿಮಿಷ ಸಮಯಾವಕಾಶ ಸಾಕು.

Revolt RV BlazeX Electric Bike Top 5 Things You Should Must Know

ವಿನ್ಯಾಸ & ಬಣ್ಣಗಳು (Design & Colors): ಹೊಸ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್‌ ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ರೌಂಡ್-ಎಲ್ಇಡಿ ಹೆಡ್‌ಲೈಟ್, ಲಾಂಗ್ ಸೀಟ್‌ನ್ನು ಪಡೆದಿದೆ. ಸ್ಟರ್ಲಿಂಗ್ ಸಿಲ್ವರ್ ಬ್ಲ್ಯಾಕ್ ಮತ್ತು ಎಕ್ಲಿಪ್ಸ್ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಾಗುತ್ತದೆ.

ವೈಶಿಷ್ಟ್ಯಗಳು (Features): ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಎಲ್‌ಸಿಡಿ ಸ್ಕ್ರೀನ್ (6-ಇಂಚು), ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಓಟಿಎ ಅಪ್ಡೇಟ್ಸ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ ಅಂಡರ್ ಸೀಟ್ ಚಾರ್ಜಿಂಗ್ ಕಂಪಾರ್ಟ್ಮೆಂಟ್ & ಸ್ಟೋರೇಜ್ ಕಂಪಾರ್ಟ್ಮೆಂಟ್ ಅನ್ನು ಪಡೆದಿದೆ.

Revolt RV BlazeX Electric Bike Top 5 Things You Should Must Know

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ನೂತನ ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ ಇ-ಬೈಕ್‌ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಇದರೊಟ್ಟಿಗೆ ಸವಾರರ ಸುರಕ್ಷತೆಗಾಗಿ ಮುಂದೆ & ಹಿಂದೆ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಬೈಕ್ ಕೂಡ ಖರೀದಿಗೆ ಲಭ್ಯ: ಇದು ರೂ.1.19 ಲಕ್ಷದಿಂದ ರೂ.1.40 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಸಿಗುತ್ತದೆ. 3.24 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ಓಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 1, 2025, 16:23 [IST]
English summary
Revolt rv blazex electric bike top things you should must know
Read more on revolt india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+