ಮಾರಾಟ ದಿಢೀರ್ ಹೆಚ್ಚಳ: ಜನಕ್ಕೆ ಇಷ್ಟವಾದರೆ ಈ ರೀತಿ ಖರೀದಿ ಮಾಡುತ್ತಾರಾ! ಫುಲ್ ಡಿಮ್ಯಾಂಡ್?
ಬೆಂಗಳೂರು ಮೂಲದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ರಿವರ್ ಮೊಬಿಲಿಟಿ, ತನ್ನ ಜನಪ್ರಿಯ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಏರಿಕೆ ಕಂಡಿದೆ. ಈ ಹಿಂದೆ ತೀರಾ ಕಡಿಮೆ ಮಾರಾಟ ಕಂಡಿದ್ದ ಕಂಪನಿಯು 2024 ರಲ್ಲಿ ರಿವರ್ ಇಂಡಿಯ ಸ್ಕೂಟರ್‌ನ ಒಟ್ಟು ಮಾರಾಟವು ಕೇವಲ 2,515 ಯುನಿಟ್ ಸ್ಕೂಟರ್‌ಗಳಷ್ಟಿತ್ತು. ಆದರೆ 2025 ರ ಮಧ್ಯದಲ್ಲಿಯೇ ಇದಕ್ಕೆ ದುಪ್ಪಟ್ಟು ಬೆಳವಣಿಗೆ ಕಂಡಿದೆ. ಕಂಪನಿಯು 2025 ರ ವರ್ಷ ಪೂರ್ಣಗೊಳ್ಳುವ ಮುನ್ನವೆ ಇಲ್ಲಿಯವರೆಗೆ ಒಟ್ಟು ಮಾರಾಟದಲ್ಲಿ ಶೇಕಡಾ 77 ರಷ್ಟು ಹೆಚ್ಚಳವನ್ನು ಕಂಡಿದೆ.
ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ 2023 ರಲ್ಲಿ ಮಾರಾಟ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 7,000 ಕ್ಕೂ ಹೆಚ್ಚು ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಾಣವಾಗಿರುವುದು ರಿವರ್ ಸ್ಕೂಟರ್‌ನ ಚೈನ್ ಡ್ರೈವ್ ಎಂದು ಹೇಳಲಾಗಿದೆ. ಈ ಹಿಂದೆ ಇದ್ದ ಬೆಲ್ಟ್ ಅನ್ನು ತೆಗೆದು ಈಗ ಚೈನ್ ಡ್ರೈವ್‌ನೊಂದಿಗೆ ಸ್ಕೂಟರ್ ನವೀಕರಣಗೊಂಡಿದೆ.

ಹೊಸ ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.43 ಲಕ್ಷ (ಎಕ್ಸ್ ಶೋರೂಂ) ಇದೆ. ಕಂಪನಿಯು ಇತ್ತೀಚೆಗೆ 100 ಕೋಟಿ ರೂ.ಗಳ ಆದಾಯವನ್ನು ದಾಟಿದ್ದು, ತಿಂಗಳ ಮಾರಾಟದಲ್ಲಿ 1,000 ಯುನಿಟ್ ಸ್ಕೂಟರ್‌ಗಳ ಗಡಿಯನ್ನು ಮುಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 161 ಕಿ.ಮೀ ಓಡಿಸಬಹುದು.
ಹೊಸ ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಪವರ್‌ಫುಲ್ ಮೋಟಾರ್ ಹೊಂದಿದ್ದು, ಇದು 6.7 ಕಿಲೋವ್ಯಾಟ್ ಪವರ್ ಹಾಗೂ 26 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಗಂಟೆಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ 3.7 ಸೆಕೆಂಡುಗಳಲ್ಲಿ 40 ಕಿ.ಮೀ ವೇಗ ತಲುಪಬಲ್ಲದು ಮತ್ತು 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಹೊಸ ಸ್ಕೂಟರ್ 55 ಲೀಟರ್ ಲಾಕ್ ಮಾಡಬಹುದಾದ ಶೇಕರಣಾ ಸ್ಥಳವನ್ನು ನೀಡಲಾಗಿದ್ದು, ಗ್ಲೋವ್‌ಬಾಕ್ಸ್‌ನಲ್ಲಿ 12 ಲೀಟರ್ ಮತ್ತು 43 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ. ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಇಂಡೀ ತನ್ನ ಉಪಯುಕ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಬಿಡಿಭಾಗಗಳನ್ನು ಹೊಂದಿದೆ.
ವೈಶಿಷ್ಟ್ಯಗಳ ಕುರಿತು ಹೇಳುವುದಾದ್ರೆ, ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಇಂಚಿನ ವೀಲ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಸಿಬಿಎಸ್ ಬ್ರೇಕಿಂಗ್, USB ಚಾರ್ಜರ್, 12 - ಲೀಟರ್ ಗ್ಲೋವ್ ಬಾಕ್ಸ್, 43 - ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಹೊಸ ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಸಣ್ಣ ವ್ಯಾಪಾರ ನಿರ್ವಾಹಕರಿಗೆ ತುಂಬಾ ಸೂಕ್ತವಾಗಿದೆ. ಅದರ ದೊಡ್ಡ ಶೇಖರಣಾ ಆಯ್ಕೆಗಳು ಮತ್ತು ಗಟ್ಟಿಮುಟ್ಟಾದ ಬಾಡಿಯಿಂದಾಗಿ ಇತರ ಸ್ಕೂಟರ್‌ಗಳಿಗಿಂತ ವಿಭಿನ್ನವಾಗಿದೆ. ಇನ್ನು ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಯೋಜನಕಾರಿ ಅಂಶಗಳಿಂದಾಗಿ ಮಾರುಕಟ್ಟೆಯಲ್ಲಿ ಇತರ EV ಗಳಿಗಿಂತ ಆಕರ್ಷಕವಾಗಿ ಕಾಣುತ್ತದೆ.
ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವಿಶೇಷತೆ ಎಂದರೆ ಅದರ ವಿನ್ಯಾಸ. ವಾಸ್ತವವಾಗಿ, ರಿವರ್ ಇಂಡೀ ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಅದನ್ನು ಅತ್ಯಂತ ಪ್ರಯೋಜನಕಾರಿ ಮತ್ತು ಬಹುಮುಖವಾಗಿಸುತ್ತದೆ. ಅಲ್ಲದೆ, ಈ ಇವಿ ಸ್ಕೂಟರ್ ಅನ್ನು 'ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಸ್‌ಯುವಿ' ಎಂದು ಕಂಪನಿ ಅಡಿಬರಹವನ್ನು ಸಹ ನೀಡಿದೆ.


Click it and Unblock the Notifications








