ಸದ್ದಿಲ್ಲದೇ ಕಾಣಿಸಿಕೊಳ್ತು ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್.. ಬಿಡುಗಡೆಗೆ ಸನ್ನಿಹಿತವೇ?

ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ರಾಯಲ್ ಎನ್‌ಫೀಲ್ಡ್ (Royal Enfield) ಗುರುತಿಸಿಕೊಂಡಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350, ಹಂಟರ್ 350, ಕಾಂಟಿನೆಂಟಲ್ ಜಿಟಿ 650, ಬುಲೆಟ್ 350 ಮತ್ತು ಗೆರಿಲ್ಲಾ 450 ಸೇರಿದಂತೆ ವಿವಿಧ ಎಲೆಕ್ಟ್ರಿಕ್ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಚ್ಚ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ವೊಂದನ್ನು ಬಿಡುಗಡೆಗೊಳಿಸಲು ಸಾಕಷ್ಟು ತಯಾರಿಯನ್ನು ಮಾಡಿಕೊಳುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ, ಕಳೆದ ವರ್ಷ ಇಟಲಿಯಲ್ಲಿ ಆಯೋಜಿಸಿದ್ದ 'ಮಿಲನ್ ಮೋಟಾರ್‌ ಶೋ'ನಲ್ಲಿ ಕಂಪನಿಯ ತನ್ನ ಮೊಟ್ಟ ಮೊದಲ 'ಫ್ಲೈಯಿಂಗ್ ಫ್ಲಿಯಾ ಸಿ6' ಹೆಸರಿನ ಎಲೆಕ್ಟ್ರಿಕ್ ಬೈಕ್‌ನ್ನು ಅದ್ದೂರಿಯಾಗಿ ಅನಾವರಣಗೊಳಿಸಿತ್ತು.

Royal Enfield 1st Electric Bike Flying Flea C6 Spotted Testing In India Details

ಸದ್ಯ ದೇಶೀಯ ರಸ್ತೆಯಲ್ಲಿಯೂ ಸದ್ದಿಲ್ಲದೇ ನೂತನ ರಾಯಲ್ ಎನ್‌ಫೀಲ್ಡ್‌ ಫ್ಲೈಯಿಂಗ್ ಫ್ಲಿಯಾ ಸಿ6 (Royal Enfield Flying Flea C6) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಪ್ರಾಯೋಜಿಕ ಸಂಚಾರ ನಡೆಸುವಾಗ ಕಾಣಿಸಿಕೊಂಡಿದೆ. ಅದು ಸಹ ಪ್ರಪ್ರಥಮ ಬಾರಿಗೆ ಎಂಬುದು ವಿಶೇಷವಾಗಿದೆ. ಅದಕ್ಕೆ ಸಂಬಂಧಿಸಿದ ಸ್ಪೈ ಫೋಟೋಗಳು ಆನ್‌ಲೈನ್‌ನಲ್ಲಿಯೂ ಸೋರಿಕೆಯಾಗಿವೆ.

ಈ ಸ್ಪೈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಸ ರಾಯಲ್ ಎನ್‌ಫೀಲ್ಡ್‌ ಫ್ಲೈಯಿಂಗ್ ಫ್ಲಿಯಾ ಸಿ6 ಅದ್ಬುತವಾದ ವಿನ್ಯಾಸವನ್ನು ಹೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದು ಎಲ್ಇಡಿ ಲೈಟಿಂಗ್, ಸ್ಪ್ಲಿಟ್ ಸೀಟ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿದೆ. ಆದರೆ, ಕಪ್ಪು ಬಣ್ಣದ ಕವರ್‌ನಿಂದ ಮುಚ್ಚಿದ್ದ ಹಿನ್ನೆಲೆ, ವಿನ್ಯಾಸದ ಕುರಿತಂತೆ ಎಲ್ಲ ಅಂಶಗಳನ್ನು ತಿಳಿಯಲಾಗಲಿಲ್ಲ.

Royal Enfield 1st Electric Bike Flying Flea C6 Spotted Testing In India Details

ಈವರೆಗೆ ಹೊಸ ರಾಯಲ್ ಎನ್‌ಫೀಲ್ಡ್‌ ಫ್ಲೈಯಿಂಗ್ ಫ್ಲಿಯಾ ಸಿ6 ಇ-ಬೈಕ್‌ನ ಕಾರ್ಯಕ್ಷಮತೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಇದು ಶಕ್ತಿಯುತವಾದ ಬ್ಯಾಟರಿ ಹೊಂದಿರಲಿದ್ದು, ಗರಿಷ್ಠ ರೇಂಜ್ (ಮೈಲೇಜ್) ನೀಡಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಬಹುದು ಎನ್ನಲಾಗದೆ.

ಈ ಹಿಂದೆ, ಮಿಲನ್ ಮೋಟಾರ್‌ಸೈಕಲ್ ಶೋನಲ್ಲಿ ಪ್ರದರ್ಶಿಸಲಾದ ಇದೇ 'ಫ್ಲೈಯಿಂಗ್ ಫ್ಲಿಯಾ ಸಿ6' ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿತ್ತು. ಬಹುಮುಖ್ಯವಾಗಿ ಪುಲ್-ಟಿಎಫ್‌ಟಿ ಕ್ಲಸ್ಟರ್‌, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್ ಹಾಗೂ ಕಾರ್ನರಿಂಗ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿತ್ತು.

Royal Enfield 1st Electric Bike Flying Flea C6 Spotted Testing In India Details

ಎಲ್ಲವು ಅಂದುಕೊಂಡಂತೆ ನಡೆದರೆ ಹೊಸ ರಾಯಲ್ ಎನ್‌ಫೀಲ್ಡ್‌ ಫ್ಲೈಯಿಂಗ್ ಫ್ಲಿಯಾ ಸಿ6 ಮೋಟಾರ್‌ಸೈಕಲ್, 2026ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಆ ಬಳಿಕ ಹೊಸ ಇತಿಹಾಸ ಬರೆಯಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ಆಗಿರುವುದು ಸ್ವಲ್ಪ ಹೆಚ್ಚಿನ ದರವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಕೆಲವೇ ದಿನಗಳಲ್ಲಿ ಕಂಪನಿ ಕಡೆಯಿಂದ ಈ ಮೋಟಾರ್‌ಸೈಕಲ್ ಕುರಿತ ಗ್ರಾಹಕರ ಎಲ್ಲ ಗೊಂದಲಗಳಿಗೆ ತೆರೆಬೀಳಲಿದೆ. ಅಲ್ಲಿಯವರೆಗೆ ಖರೀದಿದಾರರು ಕಾಯಲೇಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source Link: GaadiWaadi

Article Published On: Friday, April 25, 2025, 17:15 [IST]
English summary
Royal enfield 1st electric bike flying flea c6 spotted testing in india details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+