ಗುಡ್‌ನ್ಯೂಸ್‌: ಶೋರೂಂಗೆ ಹೋಗುವ ಅಗತ್ಯವಿಲ್ಲ.. ಸೆ.22ರಿಂದ ಫ್ಲಿಪ್‌ಕಾರ್ಟ್‌ನಲ್ಲಿ Royal Enfield ಬೈಕ್‌ಗಳು ಖರೀದಿ ಲಭ್ಯ!

ರಾಯಲ್ ಎನ್‌ಫೀಲ್ಡ್ (Royal Enfield), ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಕಂಪನಿಯ ಬೈಕ್‌ಗಳನ್ನು ಖರೀದಿ ಮಾಡಲು ಶೋರೂಂಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಇಷ್ಟದ ಮೋಟಾರ್‌ಸೈಕಲ್‌ನ್ನು ಆರ್ಡರ್ ಮಾಡಬಹುದು. ಅದಕ್ಕಾಗಿ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ (Flipkart) ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸೆಪ್ಟೆಂಬರ್ 22ರಿಂದ ರಾಯಲ್ ಎನ್‌ಫೀಲ್ಡ್‌ನ ವಿವಿಧ ಬೈಕ್‌ಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಗೊಳಿಸಲಾಗುತ್ತದೆ. ಗ್ರಾಹಕರಿಗೆ ಹೊಂದಿಕೊಳ್ಳುವ ಪಾವತಿ ಆಯ್ಕೆಗಳು ಸಹ ಲಭ್ಯವಾಗಲಿದೆ. 350 ಸಿಸಿ ವಿಭಾಗದಲ್ಲಿ ಖರೀದಿದಾರರಿಗೆ ಲಭ್ಯವಿರುವ ಬುಲೆಟ್ 350, ಕ್ಲಾಸಿಕ್ 350, ಹಂಟರ್ 350, ಗೋವಾನ್ ಕ್ಲಾಸಿಕ್ 350 ಹಾಗೂ ಮೀಟಿಯರ್ 350 ಮೋಟಾರ್‌ಸೈಕಲ್‌ಗಳನ್ನು ಮಾರಲಾಗುತ್ತದೆ.

Royal Enfield 350 CC Bikes Available In Flipkart From September 22 Details

ಬೆಂಗಳೂರು, ಗುರುಗ್ರಾಮ, ಕೋಲ್ಕತ್ತಾ, ಲಕ್ನೋ ಹಾಗೂ ಮುಂಬೈ ನಗರಗಳ ಗ್ರಾಹಕರು, ಫ್ಲಿಪ್‌ಕಾರ್ಟ್‌ ಮೂಲಕ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕೊಳ್ಳಲು ಸಾಧ್ಯವಾಗಲಿದೆ. ಅವರಿಗೆ ಸಂಪೂರ್ಣ 'ಜಿಎಸ್‌ಟಿ' ಲಾಭಗಳು ಸಹ ದೊರೆಯಲಿವೆ. ಈ ಮೂಲಕ ದಸರಾ ಹಬ್ಬಕ್ಕೆ ಹೊಸ ಮೋಟಾರ್‌ಸೈಕಲ್‌ನ್ನು ಖರೀದಿಸಬೇಕೆಂದು ಆಲೋಚಿಸಿರುವ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ.

ಈ ಬಗ್ಗೆ ರಾಯಲ್ ಎನ್‌ಫೀಲ್ಡ್‌ನ ಸಿಇಒ ಬಿ.ಗೋವಿಂದರಾಜನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಫ್ಲಿಪ್‌ಕಾರ್ಟ್‌ನೊಂದಿಗಿನ ಒಪ್ಪಂದವು ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಆನ್‌ಲೈನ್‌ನಲ್ಲಿಯೇ ಖರೀದಿದಾರರು ತಮ್ಮಿಷ್ಟದ ಮೋಟಾರ್‌ಸೈಕಲ್‌ಗಳನ್ನು ಹುಡುಕಬಹುದು ಹಾಗೂ ಕೊಂಡುಕೊಳ್ಳಬಹುದು. ಸದ್ಯ 5 ನಗರಗಳ ಜನರಿಗೆ ಮಾತ್ರ ಈ ಸೇವೆ ಸಿಗಲಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು' ಎಂದು ಹೇಳಿದ್ದಾರೆ.

Royal Enfield 350 CC Bikes Available In Flipkart From September 22 Details

ಈಚೆಗೆ 2025ರ ನೂತನ ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350 ಮೋಟಾರ್‌ಸೈಕಲ್‌ ಬಿಡುಗಡೆಯಾಗಿದೆ:

ಇದು ರೂ.1.95 ಲಕ್ಷದಿಂದ ರೂ.2.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಫೈರ್‌ಬಾಲ್, ಸ್ಟೆಲ್ಲಾರ್, ಅರೋರಾ ಹಾಗೂ ಸೂಪರ್‌ನೋವಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಫೈರ್‌ಬಾಲ್ ಆರೆಂಜ್, ಫೈರ್‌ಬಾಲ್ ಗ್ರೇ, ಸ್ಟೆಲ್ಲಾರ್ ಮ್ಯಾಟ್ ಗ್ರೇ, ಸ್ಟೆಲ್ಲಾರ್ ಮೆರೈನ್ ಬ್ಲೂ, ಅರೋರಾ ರೆಟ್ರೊ ಗ್ರೀನ್ ಹಾಗೂ ಅರೋರಾ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಬೈಕ್ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 349 ಸಿಸಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 35 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎಂದು ಅಂದಾಜಿಸಲಾಗಿದೆ. 15 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.

ಹೊಸ ಮಿಟಿಯೋರ್ 350 ಮೋಟಾರ್‌ಸೈಕಲ್‌, 120 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 15 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌‍ಬಿ ಟೈಪ್-ಸಿ ಫಾಸ್ಟ್-ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,400 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 191 ಕೆಜಿ ತೂಕವಿದೆ.

ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ & ಹಿಂಭಾಗ (ರೇರ್) ಟ್ವಿನ್ ಟ್ಯೂಬ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಈ ಬೈಕ್‌ಗೆ ಹೋಂಡಾ ಸಿಬಿ350, ಜಾವಾ 350, ಬೆನೆಲ್ಲಿ ಇಂಪೀರಿಯಲ್ 400ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Saturday, September 20, 2025, 13:55 [IST]
English summary
Royal enfield 350 cc bikes available in flipkart from september 22 details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+