ವರ್ಷ ಮುಗಿಯಲು ಕೇವಲ ಒಂದೇ ತಿಂಗಳು ಬಾಕಿ: 2026ರ ಆರಂಭದಲ್ಲಿ ಬುಲೆಟ್ 650 ಬಿಡುಗಡೆಗೆ ಸಜ್ಜು
ರಾಯಲ್ ಎನ್‌ಫೀಲ್ಡ್ ತನ್ನ ಬುಲೆಟ್ 650 ಬೈಕ್ ಅನ್ನು 2026 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜುಗೊಳಿಸುತ್ತಿದೆ. ಈ ಬೈಕ್ ಮಿಲನ್‌ನಲ್ಲಿ ನಡೆದ EICMA 2025 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, ತನ್ನ ಬುಲೆಟ್ 650 ಬೈಕ್ ಅನ್ನು 650cc ವಿಭಾಗಕ್ಕೆ ವಿಸ್ತರಿಸಿದೆ. ಈ ಮೋಟಾರ್‌ಸೈಕಲ್ ಬ್ರ್ಯಾಂಡ್‌ನ ಸಾಬೀತಾದ ಪ್ಯಾರಲಲ್-ಟ್ವಿನ್ ಎಂಜಿನ್ ಪಡೆದುಕೊಂಡಿದೆ. ಸಣ್ಣ 350cc ಮಾಡಲ್‌ಗಳಂತೆಯೇ ಬುಲೆಟ್ 650 ರಾಯಲ್ ಎನ್‌ಫೀಲ್ಡ್‌ನ ಶ್ರೇಣಿಯಲ್ಲಿ ಕ್ಲಾಸಿಕ್ 650 ಗಿಂತ ಕೆಳಗಿರುತ್ತದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಬುಲೆಟ್ 650 ಮೋಟಾರ್‌ಸೈಕಲ್ ತನ್ನ ತಮ್ಮನಾದ ಬುಲೆಟ್ 350 ನ ರೆಟ್ರೊ ಡಿಸೈನ್ ಅನ್ನು ಪ್ರತಿಬಿಂಬಿಸುತ್ತದೆ. ಟಿಯರ್ ಡ್ರಾಪ್ ಫ್ಯೂಲ್ ಟ್ಯಾಂಕ್, ಸ್ಟೆಪ್ಡ್ ಸಿಂಗಲ್-ಪೀಸ್ ಸೀಟ್, ಎತ್ತರದ ಹ್ಯಾಂಡಲ್‌ಬಾರ್, ಕ್ರೋಮ್ "ಏರೋವೈಸರ್" ನೇಸೆಲ್ ಮತ್ತು ವೈರ್-ಸ್ಪೋಕ್ ಚಕ್ರಗಳು (19-ಇಂಚಿನ ಮುಂಭಾಗ, 18-ಇಂಚಿನ ಹಿಂಭಾಗ) ಒಳಗೊಂಡಿವೆ.

ಆಧುನಿಕ ಸ್ಪರ್ಶಗಳಲ್ಲಿ ಕ್ಯಾಸ್ಕ್ವೆಟ್-ಮೌಂಟೆಡ್ LED ಹೆಡ್‌ಲ್ಯಾಂಪ್ ಟ್ವಿನ್ "ಟೈಗರ್ - ಐ" ಪೈಲಟ್ ಲ್ಯಾಂಪ್‌ಗಳು, ಇಂಧನ ಮಟ್ಟ, ಟ್ರಿಪ್‌ಗಳು, ಗೇರ್ ಇಂಡಿಕೇಟರ್ ಮತ್ತು ಎಚ್ಚರಿಕೆಗಳನ್ನು ಪ್ರದರ್ಶಿಸುವ ಡಿಜಿ-ಅನಲಾಗ್ LCD ಕನ್ಸೋಲ್ ಜೊತೆಗೆ ಹೊಂದಾಣಿಕೆ ಮಾಡಬಹುದಾದ ಲಿವರ್‌ಗಳು ಸೇರಿವೆ. ಸಸ್ಪೆನ್ಷನ್ ಮುಂಭಾಗದಲ್ಲಿ 43mm ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಟ್ವಿನ್ ಹಿಂಭಾಗದ ಶಾಕ್‌ಗಳನ್ನು ಒಳಗೊಂಡಿದೆ. 320mm ಮುಂಭಾಗ ಮತ್ತು 300mm ಹಿಂಭಾಗದ ಡಿಸ್ಕ್‌ಗಳ ಜೊತೆಗೆ ಡ್ಯುಯಲ್-ಚಾನೆಲ್ ABS ಹೊಂದಿದೆ.
ಎಂಜಿನ್ ಮತ್ತು ಕಾರ್ಯಕ್ಷಮತೆ: ಪರಿಚಿತ 647.9cc ಏರ್/ಆಯಿಲ್-ಕೂಲ್ಡ್ ಪ್ಯಾರಲಲ್ - ಟ್ವಿನ್ ಎಂಜಿನ್ ಹೊಂದಿದೆ, ಇದು 7,250rpm ನಲ್ಲಿ 46bhp ಪವರ್ ಮತ್ತು 5,650rpm ನಲ್ಲಿ 52.3Nm ಟಾರ್ಕ್ ಹೊರಹಾಕುತ್ತದೆ. ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್‌ನೊಂದಿಗೆ 6 - ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ರೋಡ್‌ಸ್ಟರ್ ಪಾತ್ರಕ್ಕೆ ಸರಿಹೊಂದುವಂತಹ ಕರ್ಬ್ ತೂಕ ಸುಮಾರು 243 ಕೆ.ಜಿ ಇದ್ದು, ಸ್ಥಿರ ಹೆದ್ದಾರಿ ಕ್ರೂಸಿಂಗ್ ಭರವಸೆ ನೀಡುತ್ತದೆ.
ಬ್ಯಾಟಲ್‌ಶಿಪ್ ಬ್ಲೂ ಮತ್ತು ಕ್ಯಾನನ್ ಬ್ಲ್ಯಾಕ್, ಗೋಲ್ಡನ್ ಪಿನ್‌ಸ್ಟ್ರೈಪ್‌ಗಳು ಮತ್ತು ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಬ್ಯಾಡ್ಜ್‌ನೊಂದಿಗೆ ಕಂಪನಿಯು ಈ ಬೈಕನ್ನು ಎರಡು ಬಣ್ಣಗಳ ಆಯ್ಕೆಗಳಲ್ಲಿ ನೀಡುತ್ತದೆ. ಬುಲೆಟ್ ಅನ್ನು ಸಾಂಪ್ರದಾಯಿಕವಾಗಿ ಕ್ಲಾಸಿಕ್‌ಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತಿರುವುದರಿಂದ, 650 ಸಿಸಿ ಮಾದರಿಗೂ ಅದೇ ತಂತ್ರ ಮುಂದುವರಿಯುವ ಸಾಧ್ಯತೆಯಿದೆ.
ಬೆಲೆ ಮತ್ತು ಸ್ಪರ್ಧೆ: ನಿರೀಕ್ಷಿತ ಎಕ್ಸ್-ಶೋರೂಂ ಬೆಲೆಯು ರೂ. 3.4 ಲಕ್ಷವಿರಲ್ಲಿದ್ದು, ಮಧ್ಯಮ - ಸಾಮರ್ಥ್ಯದ ರೆಟ್ರೊ ಜಾಗದಲ್ಲಿ ಸುಲಭವಾಗಿ ಸ್ಥಾನ ಪಡೆಯುತ್ತದೆ. ಪ್ರತಿಸ್ಪರ್ಧಿಗಳಲ್ಲಿ ಬಿಎಸ್‌ಎ ಗೋಲ್ಡ್ ಸ್ಟಾರ್, ಇಂಟರ್‌ಸೆಪ್ಟರ್, ಸೂಪರ್ ಮೀಟಿಯರ್ ಮತ್ತು ಶಾಟ್‌ಗನ್ ಮಾಡಲ್‌ಗಳನ್ನು ಒಳಗೊಂಡಂತೆ ರಾಯಲ್ ಎನ್‌ಫೀಲ್ಡ್‌ನ 650 ಸಿಸಿ ಶ್ರೇಣಿಯಲ್ಲೇ ಸ್ಪರ್ಧೆ ತೀವ್ರಗೊಳ್ಳಲಿದೆ.
ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಗಾಗಿ ಕಾರ್ಖಾನೆಯಲ್ಲಿ ಅಳವಡಿಸಲಾದ ವ್ಯಾಪಕ ಶ್ರೇಣಿಯ ಅಕ್ಸೆಸೊರಿಗಳನ್ನು ಸಹ ನೀಡಲಿದೆ. ಇವುಗಳಲ್ಲಿ ಎಂಜಿನ್ ಗಾರ್ಡ್, ಫಾಗ್ ಲ್ಯಾಂಪ್‌ಗಳು, ಸಂಪ್ ಗಾರ್ಡ್, ಸಾಫ್ಟ್ ಲಗೇಜ್ ಸ್ಯಾಡಲ್ ಬ್ಯಾಗ್‌ಗಳು, ಟೂರಿಂಗ್ ಸೀಟ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್ ಸೇರಿವೆ, ಇದು ಖರೀದಿದಾರರಿಗೆ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಬೈಕ್ ಅನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








