Royal Enfield: ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್ ಬೈಕ್ ಬಿಡುಗಡೆ.. ಬೆಲೆ ಎಷ್ಟು?

ಗೋವಾದಲ್ಲಿ ನಡೆಯುತ್ತಿರುವ ಮೋಟೋವರ್ಸ್-2025 (MotoVerse-2025) ಸಮಾರಂಭದಲ್ಲಿಂದು, ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್ (Royal Enfield Himalayan 450 Mana Black Edition) ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ನೂತನ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್' ಬೈಕ್, ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.3.37 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗುವ ನೀರಿಕ್ಷೆಯಿದೆ.

Royal Enfield Himalayan 450 Mana Black Edition Launched In India Rs 3 37 Lakh Price Details

ಉತ್ತರಾಖಂಡದಲ್ಲಿರುವ ವಿಶ್ವದ ಅತಿ ಎತ್ತರದ ರಸ್ತೆ ಮನಾ ಪಾಸ್‌ನಿಂದ ಪ್ರೇರಣೆಗೊಂಡು ಈ ಮೋಟಾರ್‌ಸೈಕಲ್‌ನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗಿದು ಎಲ್ಇಡಿ ಹೆಡ್‌ಲ್ಯಾಂಪ್ & ಎಲ್ಇಡಿ ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. ಬಾಡಿ ಪ್ಯಾನೆಲ್‌ಗಳು 'ಬ್ಲ್ಯಾಕ್' ಕಲರ್‌ನಿಂದ ಆವೃತ್ತವಾಗಿವೆ. ಫ್ಯುಯೆಲ್ ಟ್ಯಾಂಕ್ ಮೇಲೆ ಅತ್ಯಾಕರ್ಷಕವಾದ 'ಗ್ರೇ ಕಲರ್ ಗ್ರಾಫಿಕ್ಸ್' ಇದೆ. ಬ್ಲ್ಯಾಕ್ ರ‍್ಯಾಲಿ ಸೀಟ್, ಬ್ಲ್ಯಾಕ್ ರ‍್ಯಾಲಿ ಹ್ಯಾಂಡ್‌ಗಾರ್ಡ್‌ಗಳು, ರ‍್ಯಾಲಿ ಮಡ್‌ಗಾರ್ಡ್, ವೈರ್-ಸ್ಪೋಕ್ಡ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್​​ಗಳನ್ನು ಹೊಂದಿದೆ.

Royal Enfield Himalayan 450 Mana Black Edition Launched In India Rs 3 37 Lakh Price Details

ಹೊಸ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್' ಬೈಕ್, ಹೆಚ್ಚು ವಿಶಾಲ ಗಾತ್ರದಲ್ಲಿದೆ. 2,285 ಮಿ.ಮೀ ಉದ್ದ, 900 ಮಿ.ಮೀ ಅಗಲ ಹಾಗೂ 1,316 ಮಿ.ಮೀ ಎತ್ತರವಿದೆ. 230 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,510 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 195 ಕೆಜಿ ತೂಕವಿದೆ.

ಈ ಬೈಕ್ ಸಾಕಷ್ಟು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 452 ಸಿಸಿ ಲಿಕ್ವಿಡ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8,000 ಆರ್‌ಪಿಎಂನಲ್ಲಿ 40 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5,500 ಆರ್‌ಪಿಎಂನಲ್ಲಿ 40 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 30 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.

Royal Enfield Himalayan 450 Mana Black Edition Launched In India Rs 3 37 Lakh Price Details

ಇದು ಹತ್ತಾರು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 4-ಇಂಚಿನ ರೌಂಡ್ ಟಿಎಫ್‌ಟಿ ಡಿಸ್‌ಪ್ಲೇ, ಫೋನ್ ಕನೆಕ್ಟಿವಿಟಿ, ಫುಲ್ ಮ್ಯಾಪ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ರೈಡ್-ಬೈ-ವೈರ್ ಥ್ರೊಟಲ್‌, ಯುಎಸ್‌‍ಬಿ ಟೈಪ್ ಸಿ ಚಾರ್ಜಿಂಗ್ ಪಾಯಿಂಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್‌ಗಳನ್ನು ಪಡೆದಿದೆ. ಸೀಟ್ ಎತ್ತರವು 860 ಮಿ.ಮೀ ಇದ್ದು, ಬರೋಬ್ಬರಿ 17 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

ನೂತನ 'ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಮನಾ ಬ್ಲ್ಯಾಕ್ ಎಡಿಷನ್' ಬೈಕ್, ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 43 ಮಿ.ಮೀ ಅಪ್‌ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗ (ರೇರ್) ಲಿಂಕೇಜ್ ಟೈಪ್ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) & ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ಈ 'ಮನಾ ಬ್ಲ್ಯಾಕ್ ಎಡಿಷನ್' ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಕೆಟಿಎಂ 390 ಅಡ್ವೆಂಚರ್, ಕೆಟಿಎಂ 390 ಅಡ್ವೆಂಚರ್ ಎಕ್ಸ್ ಹಾಗೂ ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಹೊಸ ಬೈಕ್‌ನ ವಿತರಣೆ ಶುರುವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, November 21, 2025, 23:17 [IST]
English summary
Royal enfield himalayan 450 mana black edition launched in india rs 3 37 lakh price details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+