ಇದು ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್ ಬೈಕ್: ಕೇವಲ 1.5 ಲಕ್ಷ ಬೆಲೆ, ವಿಶೇಷತೆಗಳೇನು?
2025 ರ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಸದ್ಯ ಭಾರತದಲ್ಲಿ ಪ್ರತಿ ಯುವಕನ ಮನೆಮಾತಾಗಿದೆ. ಈ ಬೈಕ್ ಹೊಸ ನವೀಕರಣಗಳು, ಹೆಚ್ಚುವರಿ ವೈಶಿಷ್ಟ್ಯಗಳು, ಯಾಂತ್ರಿಕ ಬದಲಾವಣೆಗಳು ಮತ್ತು ಹೊಸ ಬಣ್ಣಗಳನ್ನು ಪಡೆದಿದೆ. ಒಟ್ಟು ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಈ ಬೈಕ್ ವೇರಿಯೆಂಟ್‌ವಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಉಳಿದಂತೆ ಮೂರು ವೇರಿಯೆಂಟ್‌ಗಳಿಗೆ ತಕ್ಕಂತೆ ಒಂದಷ್ಟು ವಿನ್ಯಾಸ ಬದಲಾವಣೆಗಳು ಹಾಗೂ ಫೀಚರ್ಸ್ ಸೇರ್ಪಡೆ ಮಾಡಲಾಗಿದೆ. ಹಾಗಾದ್ರೆ ವೇರಿಯೆಂಟ್ ಶ್ರೇಣಿಯನ್ನು ವಿವರವಾಗಿ ನೋಡೋಣ.
ವೈಶಿಷ್ಟ್ಯಗಳ ಸೇರ್ಪಡೆಗಳಲ್ಲದೆ, ಹಂಟರ್ 350 ಬೈಕಿನಲ್ಲಿ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಗಳಂತಹ ಕೆಲವು ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ರಾಯಲ್ ಎನ್ ಫೀಲ್ಡ್ ಹೊಸ ಹ್ಯಾಂಡಲ್ ಬಾರ್ ಮತ್ತು ಸಾಂದ್ರವಾದ ಕುಶನ್ ಹೊಂದಿರುವ ಸೀಟ್ ಅನ್ನು ಸಹ ನೀಡಲಾಗಿದೆ. ಇದು ವಿಭಿನ್ನ ಎಕ್ಸಾಸ್ಟ್ ರೂಟಿಂಗ್ ಅನ್ನು ಸಹ ಪಡೆದಿದೆ, ಇದರ ಪರಿಣಾಮವಾಗಿ 160 ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.
ಬೇಸ್ ವೇರಿಯೆಂಟ್: ಟಾಪ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ, ಬೇಸ್ ವೇರಿಯೆಂಟ್ ಕಡಿಮೆ ಬದಲಾವಣೆಗಳೊಂದಿಗೆ ಬರುತ್ತದೆ. ಇದು ಬೇಸಿಕ್ ಟೈಪ್ - ಸಿ ಚಾರ್ಜಿಂಗ್ ಪೋರ್ಟ್ ಮತ್ತು ಒಂದೇ ಫ್ಯಾಕ್ಟರಿ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಸಿಂಗಲ್ - ಚಾನೆಲ್ ಎಬಿಎಸ್ ಮತ್ತು ಹ್ಯಾಲೋಜೆನ್ ಲೈಟಿಂಗ್ ಹೊಂದಿರುವ ಹಿಂಭಾಗದ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಟ್ಯೂಬ್‌ಲೆಸ್ ಟೈರ್‌ಗಳ ಬದಲು ಟ್ಯೂಬ್ಡ್ ಟೈರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು, ಸ್ಪೋಕ್ ವ್ಹೀಲ್ ಗಳನ್ನು ನೀಡಲಾಗಿದೆ. ಒಟ್ಟಾರೆ ಅದರ ಬೆಲೆಗೆ ತಕ್ಕಂತೆ ಎಷ್ಟು ಫೀಚರ್ಸ್ ಬೇಕಿದೆಯೋ ಅಷ್ಟು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಬೇಸ್ ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1,49,900 ಆಗಿದೆ.

ಮಿಡ್ ಹಾಗೂ ಟಾಪ್ ವೇರಿಯೆಂಟ್‌ಗಳು: ಮಿಡ್ ಹಾಗೂ ಟಾಪ್ ವೇರಿಯೆಂಟ್‌ಗಳು ಬಣ್ಣಗಳು ಮತ್ತು ಬೆಲೆಗಳ ವಿಷಯದಲ್ಲಿ ಮಾತ್ರ ಪರಸ್ಪರ ಭಿನ್ನವಾಗಿವೆ. ಮಿಡ್ ಹಾಗೂ ಟಾಪ್ ವೇರಿಯೆಂಟ್‌ಗಳು ವೈಶಿಷ್ಟ್ಯಗಳ ಪ್ರಕಾರ, ಎರಡೂ ರೂಪಾಂತರಗಳು ಎಲ್ಇಡಿ ಲೈಟಿಂಗ್, ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಪೋರ್ಟ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತವೆ.
ಬೆಲೆಗಳ ವಿಷಯಕ್ಕೆ ಬಂದರೆ ಈ ಎರಡು ಮಾದರಿಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಮಿಡ್ ವೇರಿಯೆಂಟ್ ರೂ.1.77 ಲಕ್ಷ ಮತ್ತು ಟಾಪ್ ವೇರಿಯೆಂಟ್ ರೂ.1.82 ಲಕ್ಷಗಳಾಗಿದೆ. ಮಿಡ್ ವೇರಿಯೆಂಟ್ ಡಾಪರ್ ಗ್ರೇ ಮತ್ತು ರಿಯೊ ವೈಟ್ ಬಣ್ಣಗಳಲ್ಲಿ ಲಭ್ಯವಿದ್ದರೆ, ಟಾಪ್-ವೇರಿಯೆಂಟ್ ಟ್ರಿಮ್ ರೆಬೆಲ್ ಬ್ಲೂ, ಲಂಡನ್ ರೆಡ್ ಮತ್ತು ಟೋಕಿಯೊ ಬ್ಲ್ಯಾಕ್ ಎಂಬ ಮೂರು ಬಣ್ಣಗಳನ್ನು ಪಡೆಯುತ್ತದೆ.

ಒಟ್ಟಾರೆ ರಾಯಲ್ ಎನ್‌ಫೀಲ್ಡ್ ಲೈನ್‌ಅಪ್‌ನಲ್ಲಿಯೇ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಬೈಕ್ ಆಗಿ ಜನಪ್ರಿಯತೆ ಪಡೆದಿರುವ ರಾಯಲ್ ಎನ್‌ಫೀಲ್ಡ್ ಹಂಟರ್ ಸದ್ಯ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವುದು ಯುವಕರಲ್ಲಿ ಬೇಡಿಕೆ ಹೆಚ್ಚಿಸುವ ಹೊಸ ಪ್ಲಾನ್ ಆಗಿದೆ. ಈ ಬೈಕ್ ಯಾವ ಮಟ್ಟಿಗೆ ಗ್ರಾಹಕರನ್ನು ಸೆಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








