Suzuki Access 125ಗೆ ಬದಲಾಗಿ ಈ 3 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೊಳ್ಳಬಹುದು.. ಸುದೀರ್ಘ ಬಾಳಿಕೆ, ಬೆಲೆ ಇಷ್ಟೇನಾ?

ಸುಜುಕಿ ಆಕ್ಸೆಸ್ 125 (Suzuki Access 125) ಜನಪ್ರಿಯ ಪ್ರಯಾಣಿಕ ಸ್ಕೂಟರ್ ಆಗಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಲಿದೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಖರೀದಿ ಮಾಡಬಹದು. ಈ ಸ್ಕೂಟರ್ ರೂ.87,000 ರಿಂದ ರೂ.98,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 124 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 45 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನಾವಿಲ್ಲಿ 'ಸುಜುಕಿ ಆಕ್ಸೆಸ್ 125'ಗೆ ಬದಲಿ ಆಯ್ಕೆಯಾಗಬಲ್ಲ ಪ್ರಮುಖ 3 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಎಥರ್ 450ಎಸ್ (Ather 450S): ಇದೊಂದು ಪ್ರಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಸುಜುಕಿ ಆಕ್ಸೆಸ್ 125ಗೆ ಅತ್ಯುತ್ತಮವಾದ ಪರ್ಯಾಯ ಆಯ್ಕೆಯಾಗಲಿದೆ. ಅದಕ್ಕೆ ಅನುಗುಣವಾಗಿ ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, ಕನಿಷ್ಠ ರೂ.1.30 ಲಕ್ಷ ಮತ್ತು ಗರಿಷ್ಠ ರೂ.1.44 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ.

Suzuki Access 125 Other Electric Scooter Options Ather 450S Honda QC1 Bajaj Chetak

ಈ ಎಥರ್ 450ಎಸ್ ಇ-ಸ್ಕೂಟರ್ 2.9 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 122 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಸ್ಟಿಲ್ ವೈಟ್, ಕಾಸ್ಮಿಕ್ ಬ್ಲ್ಯಾಕ್, ಸ್ಪೇಸ್ ಗ್ರೇ ಹಾಗೂ ಸ್ಟೆಲ್ತ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದ್ದು, 7-ಇಂಚಿನ ಕಲರ್ ಎಲ್‌ಸಿಡಿ ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಹೋಂಡಾ ಕ್ಯೂಸಿ1 (Honda QC1): ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಡವರು ಸಹ ಸುಲಭವಾಗಿ ಕೊಂಡುಕೊಳ್ಳಬಹುದು. ಅಷ್ಟರ ಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಇದನ್ನು ಕೇವಲ ರೂ.90 ಸಾವಿರ (ಎಕ್ಸ್-ಶೋರೂಂ) ದರದಲ್ಲೇ ಮನೆಗೆ ತರಬಹುದು. ಈ ಕ್ಯೂಸಿ1 ಸ್ಕೂಟರ್ ಸಣ್ಣದಾದ 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಓಡುತ್ತದೆ.

Suzuki Access 125 Other Electric Scooter Options Ather 450S Honda QC1 Bajaj Chetak

ನೂತನ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್‌ ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದ್ದು, ನೋಡಲು ಕೂಡ ಚೆನ್ನಾಗಿದೆ. ಎಲ್‌ಸಿಡಿ ಡಿಸ್‌ಪ್ಲೇ, ಲಗೇಜ್ ಹುಕ್, ಯುಎಸ್‌ಬಿ-ಸಿ ಚಾರ್ಜಿಂಗ್ ಪಾಯಿಂಟ್‌ ಮತ್ತು ಅನಲಾಗ್ ಕೀ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Suzuki Access 125 Other Electric Scooter Options Ather 450S Honda QC1 Bajaj Chetak

ಬಜಾಜ್ ಚೇತಕ್ 3503 (Bajaj Chetak 3503): ಇತ್ತೀಚೆಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಗಿತು. ಇದು ಸಹ 'ಸುಜುಕಿ ಆಕ್ಸೆಸ್ 125'ಗೆ ಉತ್ತಮವಾದ ಬದಲಿ ಆಯ್ಕೆಯಾಗಲಿದೆ ಎಂದು ಹೇಳಬಹುದು. ಹೊಸ ಚೇತಕ್ 3503 ಇ-ಸ್ಕೂಟರ್ ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ.

Suzuki Access 125 Other Electric Scooter Options Ather 450S Honda QC1 Bajaj Chetak

ಈ ಎಲೆಕ್ಟ್ರಿಕ್ ಸ್ಕೂಟರ್ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಬ್ರೂಕ್ಲಿನ್ ಬ್ಲ್ಯಾಕ್, ಇಂಡಿಗೋ ಬ್ಲೂ, ಮ್ಯಾಟ್ ಗ್ರೇ ಮ್ಯಾಟ್ ಮತ್ತು ಸೈಬರ್ ವೈಟ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. ಕಲರ್-ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮ್ಯೂಸಿಕ್ ಕಂಟ್ರೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Take a Poll

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 8, 2025, 14:42 [IST]
English summary
Suzuki access 125 other electric scooter options ather 450s honda qc1 bajaj chetak
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+