ಜನರು ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ಪರಿಗಣಿಸುವ ಪ್ರಮುಖ ವಿಷಯಗಳಿವು: ನೀವು ಅಷ್ಟೇನಾ?
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಕೆಲಸ, ಕಾಲೇಜು ಅಥವಾ ಸಣ್ಣ ವಾಣಿಜ್ಯ ಕೆಲಸಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೈನಂದಿನ ಪ್ರಯಾಣಕ್ಕಾಗಿ ತಮ್ಮ ಮುಖ್ಯ ವಾಹನವಾಗಿ ಈಗ ಹೆಚ್ಚಿನ ಜನರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುತ್ತಿರುವ ಜಾಗೃತಿ, ಉತ್ತಮ ಉತ್ಪನ್ನಗಳು ಮತ್ತು ಬಲವಾದ ಪರಿಸರ ವ್ಯವಸ್ಥೆಗಳೊಂದಿಗೆ, ಈ ಬದಲಾವಣೆಯು ವೇಗವಾಗಿ ಬೆಳೆಯುತ್ತಿದೆ. ಆದರೆ ಮೊದಲ ಬಾರಿಯ ಇವಿ ಖರೀದಿದಾರರಿಗೆ, ಕೆಲವು ಅನುಮಾನಗಳು ಹಾಗೂ ಪ್ರಶ್ನೆಗಳು ಇನ್ನೂ ತಮ್ಮನ್ನು ಕಾಡುತ್ತಿವೆ.
ಪೆಟ್ರೋಲ್ ವಾಹನಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಂದರೆ ಯಾವಾಗ ಇಂಧನ ತುಂಬಿಸಬೇಕು, ಸರ್ವಿಸಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ, ಮರುಮಾರಾಟ ಹೇಗಿರಬಹುದು ಎಂಬುದು ತಿಳಿದಿದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್ ವಿಷಯಕ್ಕೆ ಬಂದರೆ ಇದು ಇನ್ನೂ ಸ್ವಲ್ಪ ಪರಿಚಯವಿಲ್ಲ, ವಿಶೇಷವಾಗಿ ಮೊದಲ ಬಾರಿಯ ಖರೀದಿದಾರರಿಗೆ ಈ ಬಗ್ಗೆ ಹಲವು ಅನುಮಾನಗಳಿವೆ.

ಚಾರ್ಜಿಂಗ್, ಬ್ಯಾಟರಿ ಬಾಳಿಕೆ, ಸೇವೆ ಮತ್ತು ಮರುಮಾರಾಟದ ಬಗ್ಗೆ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ. ಇವು ಕೇವಲ ತಾಂತ್ರಿಕ ಅನುಮಾನಗಳಲ್ಲ, ಅವು ನಿಜವಾದ ದೈನಂದಿನ ಕಾಳಜಿಗಳಾಗಿವೆ. ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮವು ಬಹಳಷ್ಟು ಪ್ರಗತಿ ಸಾಧಿಸಿದೆ, ಆದರೆ ಈ ಜಾಗೃತಿ ಅಂತರವನ್ನು ಕಡಿಮೆ ಮಾಡುವಲ್ಲಿ ಇನ್ನೂ ಕೆಲಸ ಮಾಡಬೇಕಾಗಿದೆ.
ಉದಾಹರಣೆಗೆ, ಬ್ಯಾಟರಿಯು ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ಭಾಗವಾಗಿರುವುದರಿಂದ, ಇದು ಎಷ್ಟು ಕಾಲ ಉಳಿಯುತ್ತದೆ? ಕೆಲವು ವರ್ಷಗಳಲ್ಲಿ ಇದಕ್ಕೆ ಬದಲಿ ಅಗತ್ಯವಿದೆಯೇ? ಮಳೆ, ಸಂಚಾರ ಮತ್ತು ಶಾಖ ಸೇರಿದಂತೆ ವಿವಿಧ ಭಾರತೀಯ ಪರಿಸ್ಥಿತಿಗಳಲ್ಲಿ ಬಾಳಿಕೆ ಬರುತ್ತದಯೇ? ಎಂಬೆಲ್ಲಾ ಸಂದೇಹಗಳು ಖರೀದಿದಾರರಿಗಿದೆ. ಇದಕ್ಕಾಗಿಯೇ ಅನೇಕ ಕಂಪನಿಗಳು ಈಗ ತಮ್ಮ ಗ್ರಾಹಕರಿಗೆ ಅವರಿಗೆ ಧೈರ್ಯ ತುಂಬಲು ಬ್ಯಾಟರಿ ವಾರೆಂಟಿಗಳನ್ನು ವಿಸ್ತರಿಸುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಮೊದಲು ಜನರು ಯೋಚಿಸುವ ಮತ್ತೊಂದು ದೊಡ್ಡ ವಿಷಯವೆಂದರೆ ಮರು-ಮಾರಾಟ. ಈ ಮರು-ಮಾರಾಟ ಮೌಲ್ಯವು ಬ್ಯಾಟರಿಯನ್ನು ಅವಲಂಬಿಸಿರುತ್ತದೆ, ಸ್ಕೂಟರ್ ಅನ್ನು ಎಷ್ಟು ಚೆನ್ನಾಗಿ ಮೇಂಟೇನ್ ಮಾಡಲಾಗಿದೆ. ಬ್ರ್ಯಾಂಡ್ ಎಷ್ಟು ಬೆಂಬಲವನ್ನು ನೀಡುತ್ತದೆ. ಬ್ಯಾಟರಿಯ ಹೆಲ್ತ್, ಅದು ನಡೆಯುವ ಗುಣಮಟ್ಟ, ಪರೀಕ್ಷೆ ಮತ್ತು ಬ್ರ್ಯಾಂಡ್ ನೀಡುವ ಬ್ಯಾಟರಿ ವಾರೆಂಟಿ ಎಲ್ಲವೂ ಇಲ್ಲಿ ಪ್ರಮುಖ ಅಂಶಗಳಾಗಿರುತ್ತವೆ.
ಇತರ ಸಾಮಾನ್ಯ ಕಾಳಜಿಗಳಲ್ಲಿ ಚಾರ್ಜಿಂಗ್ ಮತ್ತು ಸರ್ವೀಸ್ ಕೂಡ ಇದೆ. ಚಾರ್ಜಿಂಗ್ ವಿಷಯಕ್ಕೆ ಬಂದರೆ, ಮೊದಲ ಬಾರಿಯ ಖರೀದಿದಾರರು ಬಹಳಷ್ಟು ಕೇಳುವ ಪ್ರಶ್ನೆಗಳೆಂದರೆ, "ನನ್ನಲ್ಲಿ ಚಾರ್ಜ್ ಖಾಲಿಯಾದರೆ ಹೇಗೆ? ನನಗೆ ಹತ್ತಿರದಲ್ಲಿ ಚಾರ್ಜರ್ ಸಿಗುತ್ತದೆಯೇ?" ಇದು ದೊಡ್ಡ ಚಿಂತೆಯಾಗಿದೆ. ಅದಕ್ಕಾಗಿಯೇ ಚಾರ್ಜಿಂಗ್ ಮೂಲಸೌಕರ್ಯವು ತುಂಬಾ ಮುಖ್ಯವಾಗಿದೆ.

ಕೆಲವು ಕಂಪನಿಗಳು ಈಗಾಗಳೇ ವೇಗದ ಚಾರ್ಜಿಂಗ್ ನೆಟ್‌ವರ್ಕ್‌ಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿವೆ. ಸರ್ಕಾರವು ಸಹ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆ ಸುಲಭಗೊಳಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚಾರ್ಜಿಂಗ್‌ನಂತೆಯೇ, ನಿಯಮಿತ ಸರ್ವೀಸ್ ಕೂಡ ದಿನನಿತ್ಯದ ವಾಹನ ಮಾಲೀಕತ್ವದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಇಂದು, ಅನೇಕ ಕಂಪನಿಗಳು ಈ ಕಾಳಜಿಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಉದಾಹರಣೆಗೆ ಎಥರ್ ಕಂಪನಿಯು, ತನ್ನ ಸ್ಕೂಟರ್ ಆಂತರಿಕ ಬ್ಯಾಟರಿ ಪ್ಯಾಕ್‌ಗಳ ಮೇಲೆ ಎಂಟು ವರ್ಷಗಳ ವಾರೆಂಟಿ ಮತ್ತು 70% ಕನಿಷ್ಠ ಆರೋಗ್ಯ ಖಾತರಿಯೊಂದಿಗೆ ಬರುತ್ತವೆ. ಇದು ಖರೀದಿದಾರರಿಗೆ ದೀರ್ಘಾವಧಿಯಲ್ಲಿ ವಿಶ್ವಾಸವನ್ನು ನೀಡುತ್ತದೆ.
ಮಾಲೀಕತ್ವದ ಚಿಂತೆಗಳನ್ನು ಮತ್ತಷ್ಟು ಕಡಿಮೆ ಮಾಡಲು, ಎಥರ್‌ನ ಖಚಿತ ಬೈಬ್ಯಾಕ್ ಯೋಜನೆಯು ಸ್ಕೂಟರ್‌ನ ಮೌಲ್ಯದ 60% ವರೆಗೆ ಮೂರು ವರ್ಷಗಳವರೆಗೆ ಖಾತರಿಪಡಿಸುತ್ತದೆ. ಹಾಗೆಯೇ ದೇಶಾದ್ಯಂತ ಹರಡಿರುವ ಕೆಫೆಗಳು ಮತ್ತು ಮಾಲ್‌ಗಳಂತಹ ಅನುಕೂಲಕರ ಸ್ಥಳಗಳಲ್ಲಿ 4,300 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜರ್‌ಗಳನ್ನು ಎಥರ್ ಸ್ಥಾಪಿಸಿದೆ.
ಮರುಮಾರಾಟದ ಕುರಿತು ಹೆಚ್ಚಿನ ಸ್ಪಷ್ಟತೆ, ಚಾರ್ಜಿಂಗ್ ಸುಧಾರಣೆ, ದೀರ್ಘ ಬ್ಯಾಟರಿ ಖಾತರಿ ಮತ್ತು ವಿಶ್ವಾಸಾರ್ಹ ಸೇವಾ ಜಾಲವನ್ನು ನಿರ್ಮಿಸುವ ಮೂಲಕ ಎಥರ್, ಓಲಾ, ಚೇತಕ್ ಹಾಗೂ ಪ್ರಮುಖ ಬ್ರಾಂಡ್‌ಗಳು ಗ್ರಾಹಕರ ಅನುಮಾನಗಳು ಮತ್ತು ಹೆಚ್ಚಿನ ವಿಶ್ವಾಸದೊಂದಿಗೆ ಬದಲಾವಣೆಯನ್ನು ಮಾಡಲು ಸಹಾಯ ಮಾಡುತ್ತಿವೆ.


Click it and Unblock the Notifications








