ಹಳ್ಳಿಗೂ ಸೈ.. ಸಿಟಿಗೂ ಓಕೆ.. ಈ ತಿಂಗಳು ಮಾರಾಟಕ್ಕೆ ಬಂದ ಜನಪ್ರಿಯ ವೀಲರ್‌ಗಳಿವು, ಬೆಲೆಯೂ ಅಗ್ಗ!

ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಪ್ರತಿ ತಿಂಗಳು ಹಲವು ಬೈಕ್ ಹಾಗೂ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿರುತ್ತಿವೆ. ಅದಕ್ಕೆ ಏಪ್ರಿಲ್ ಕೂಡ ಹೊರತಾಗಿಲ್ಲ. ಈ ತಿಂಗಳು ಬಹುತೇಕ ಹೀರೋ ಕಂಪನಿಯು ನವೀಕರಣಕ್ಕೆ ಒಳಪಟ್ಟ ವಿವಿಧ ಮೋಟಾರ್‌ಸೈಕಲ್‌ಗಳನ್ನು ಮಾರಾಟಕ್ಕೆ ತಂದಿದೆ. ಜೊತೆಗೆ ಹೋಂಡಾ ಕಂಪನಿಯು ಸ್ಕೂಟರ್‌ವೊಂದನ್ನು ಪರಿಚಯಿಸಿದೆ. ಇವೆಲ್ಲ ದ್ವಿಚಕ್ರ ವಾಹನಗಳನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಇದು ಇಂಗಾಲದ ಹೊರಸೂಸುವಿಕೆಯಲ್ಲಿ ಸಮಸ್ಯೆಗಳು ಕಂಡುಬಂದರೆ ಸವಾರರನ್ನು ಎಚ್ಚರಿಸುತ್ತದೆ.

ಮೊದಲಿಗೆ ಹೀರೋ ಸ್ಪ್ಲೆಂಡರ್ (Hero Splendor) ಬೈಕ್ ಕುರಿತಂತೆ ಮಾತನಾಡೋಣ. ಈ ತಿಂಗಳು 2025ರ ಹೊಸ 'ಸ್ಪ್ಲೆಂಡರ್ ಪ್ಲಸ್' ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ರೂ.79,000 ರಿಂದ ರೂ.85,000 ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು.

This April 2025 Month Launch Two Wheelers List Splendor Passion Plus Glamour HF 100 Dio 125

ಈ ಮೋಟಾರ್‌ಸೈಕಲ್‌ ಸ್ಟ್ಯಾಂಡರ್ಡ್ ಆಗಿ ಸ್ಪ್ಲೆಂಡರ್ ಪ್ಲಸ್ ಎಂಬ ರೂಪಾಂತರದ (ವೇರಿಯೆಂಟ್) ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರೊಟ್ಟಿಗೆ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮತ್ತು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಎಂಬ ರೂಪಾಂತರಗಳೊಂದಿಗೂ ಲಭ್ಯವಿವೆ. ಇವೆಲ್ಲ ರೂಪಾಂತರಗಳು 97.2 ಸಿಸಿ ಒಬಿಡಿ-2ಬಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ. ಹಾಗೆಯೇ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ.

ಇದೇ ತಿಂಗಳು 2025ರ ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಮೋಟಾರ್‌ಸೈಕಲ್‌ ಕೂಡ ಮಾರಾಟಕ್ಕೆ ಬಂದಿದೆ. ಈ ಬೈಕ್ ಭಾರೀ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿದ್ದು, ಮಧ್ಯಮ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ರೂ.88,000 ರಿಂದ ರೂ.92,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

This April 2025 Month Launch Two Wheelers List Splendor Passion Plus Glamour HF 100 Dio 125

ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಮೋಟಾರ್‌ಸೈಕಲ್‌, 124.7 ಸಿಸಿ ಒಬಿಡಿ-2ಬಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 69 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಕ್ಲಸ್ಟರ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೊಸ 2025ರ ಹೀರೋ ಗ್ಲಾಮರ್ (Hero Glamour) ಮೋಟಾರ್‌ಸೈಕಲ್‌ನ್ನು ಸಹ ಪರಿಚಯಿಸಲಾಗಿದ್ದು, ಇದು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ರೂ.84,500 ರಿಂದ ರೂ.90,500 ಎಕ್ಸ್-ಶೋರೂಂ ದರವನ್ನು ಪಡೆದಿದೆ. 124.7 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 63 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದ್ದು, ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್ & ಟೆಕ್ನೋ ಬ್ಲೂ ಮ್ಯಾಟ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

This April 2025 Month Launch Two Wheelers List Splendor Passion Plus Glamour HF 100 Dio 125

ಈ ಹೀರೋ ಗ್ಲಾಮರ್ ಬೈಕ್ ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಬರೋಬ್ಬರಿ 121 ಕೆಜಿ ತೂಕವಿದ್ದು, 13.6 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬೈಕ್‌ನ್ನು ಬಿಡುಗಡೆಗೊಳಿಸಲಾಗಿದೆ. ಇದನ್ನು ಅತಿ ಕಡಿಮೆ ಬೆಲೆಯಲ್ಲಿಯೂ ಮನೆಗೆ ತರಬಹುದು. ರೂ.82,000 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 97.2 ಸಿಸಿ ಒಬಿಡಿ-2ಬಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

This April 2025 Month Launch Two Wheelers List Splendor Passion Plus Glamour HF 100 Dio 125

ಈ ಪ್ಯಾಶನ್ ಪ್ಲಸ್ ಬೈಕ್ ಹೆಚ್ಚು ಅತ್ಯಾಧುನಿಕವಾಗಿದ್ದು, ಬ್ಲ್ಯಾಕ್ ಹೆವಿ ಗ್ರೇ, ಬ್ಲ್ಯಾಕ್ ನೆಕ್ಸಸ್ ಬ್ಲೂ, ಬ್ಲೂಯಿಶ್ ಟೀಲ್ & ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. ಡಿಜಿಟಲ್-ಅನಲಾಗ್ ಕ್ಲಸ್ಟರ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಸಾಕೆಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೀರೋ ಎಚ್ಎಫ್ 100 (Hero HF 100) ಮೋಟಾರ್‌ಸೈಕಲ್‌ ಕೂಡ ಮಾರಾಟಕ್ಕೆ ಬಂದಿದೆ. ಇದು ನಿಜವಾಗಿಯೂ ತುಂಬಾ ಕಡಿಮೆ ಬೆಲೆಯಲ್ಲಿ ದೇಶೀಯ ಗ್ರಾಹಕರ ಖರೀದಿ ಲಭ್ಯವಿದ್ದು, ಬಡ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ಕೇವಲ ರೂ.60,000 ಎಕ್ಸ್-ಶೋರೂಂ ದರವನ್ನು ಒಳಗೊಂಡಿದೆ.

This April 2025 Month Launch Two Wheelers List Splendor Passion Plus Glamour HF 100 Dio 125

ಈ ಹೀರೋ ಎಚ್ಎಫ್ 100 ಬೈಕ್, ಬೆಲೆಗೆ ತಕ್ಕಂತೆ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. ಇದು 97.2 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್‌ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ನೂತನ ಎಚ್ಎಫ್ 100 ಮೋಟಾರ್‌ಸೈಕಲ್‌ ಅತಿ ಸರಳವಾದ ವಿನ್ಯಾಸವನ್ನು ಹೊಂದಿದ್ದು, ರೆಡ್-ಬ್ಲ್ಯಾಕ್ & ಬ್ಲ್ಯೂ-ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ ಹೀರೋ ಎಚ್ಎಫ್ 100 ಮೋಟಾರ್‌ಸೈಕಲ್‌ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕಿಕ್ ಸ್ಟಾರ್ಟರ್ ಹಾಗೂ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಮುಂದೆ/ ಹಿಂದೆ ಡ್ರಮ್ ಬ್ರೇಕ್‌ ಆಯ್ಕೆಯನ್ನು ಪಡೆದಿದೆ. ಈ ಬೈಕ್ 110 ಕೆಜಿ ತೂಕವಿದ್ದು, 9.1-ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಕಡೆಯದಾಗಿ ಈ ಏಪ್ರಿಲ್ ತಿಂಗಳಲ್ಲೇ ಬಿಡುಗಡೆಯಾಗಿರುವ ಹೋಂಡಾ ಡಿಯೋ 125 (Honda Dio 125) ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಯುವಕರ ಮೆಚ್ಚಿನ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಅದಕ್ಕೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿಯೂ ಸಿಗಲಿದ್ದು, ರೂ.96,749 ಎಕ್ಸ್-ಶೋರೂಂ ದರವನ್ನು ಪಡೆದಿದೆ.

ಈ ಸ್ಕೂಟರ್ ಸಾಕಷ್ಟು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 125 ಸಿಸಿ ಒಬಿಡಿ-2ಬಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.16 ಪಿಎಸ್ ಅಶ್ವ ಶಕ್ತಿ (ಹಾರ್ಸ್ - ಪವರ್) ಮತ್ತು 10.4 ಎನ್ಎಂ (ನ್ಯೂಟನ್ - ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸರಿ ಸುಮಾರು 48 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಹೋಂಡಾ ಡಿಯೋ 125 ಸ್ಕೂಟರ್ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ಸ್ಪೋರ್ಟ್ಸ್ ಯೆಲ್ಲೊ, ಪರ್ಲ್ ಇಗ್ನಿಯಸ್ ಬ್ಲ್ಯಾಕ್ & ಇಂಪೀರಿಯಲ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 4.2 - ಇಂಚಿನ ಟಿಎಫ್‌ಟಿ ಸ್ಕ್ರೀನ್‌ ಹಾಗೂ ಸೈಡ್ - ಸ್ಟ್ಯಾಂಡ್ ಕಟ್ ಆಫ್ ಸೆನ್ಸರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 30, 2025, 16:49 [IST]
English summary
This april 2025 month launch two wheelers list splendor passion plus glamour hf 100 dio 125
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+